ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಳವಾಯಿ ಸಾಂಸ್ಕೃತಿಕ ಶ್ರಮಜೀವಿ: ಬರಗೂರು ರಾಮಚಂದ್ರಪ್ಪ

Published 1 ಏಪ್ರಿಲ್ 2024, 15:08 IST
Last Updated 1 ಏಪ್ರಿಲ್ 2024, 15:08 IST
ಅಕ್ಷರ ಗಾತ್ರ

ಬೆಂಗಳೂರು: ನಿರಂತರ ಅಲೆಮಾರಿಯಾಗಿದ್ದ ರಾಜಪ್ಪ ದಳವಾಯಿ ಅವರು ಸಾಂಸ್ಕೃತಿಕ ಶ್ರಮಜೀವಿ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಬಣ್ಣಿಸಿದರು.

ದಳವಾಯಿ ಅವರಿಗೆ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ‘ಶೈಕ್ಷಣಿಕ ಗೌರವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಾನು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷನಾಗಿದ್ದ ಅವಧಿಯಲ್ಲಿ 125 ಪುಸ್ತಕಗಳನ್ನು ಏಕಕಾಲಕ್ಕೆ ಮುದ್ರಿಸಿ ಬಿಡುಗಡೆಗೊಳಿಸುವ ಕಾರ್ಯಕ್ರಮವನ್ನು ಆಯೋಜಿಸಿದ್ದೆ. ಆ ಸಮಯದಲ್ಲಿ ರಾಜಪ್ಪ ಅವರು ಹಗಲು, ರಾತ್ರಿ ಎನ್ನದೆ ಒಪ್ಪಿಕೊಂಡ ಕೆಲಸವನ್ನು ನಿರಂತರವಾಗಿ ನಿರ್ವಹಿಸಿದರು. ಎಷ್ಟೋ ಸಂದರ್ಭದಲ್ಲಿ ಪ್ರಿಂಟಿಗ್ ಪ್ರೆಸ್‌ನಲ್ಲಿ ರಾತ್ರಿವರೆಗೆ ಕೆಲಸ ಮಾಡಿ, ಪೇಪರ್ ಮೇಲೆ ಮಲಗಿ, ಬೆಳಿಗ್ಗೆ ಮತ್ತೆ ಎದ್ದು ಪ್ರೂಫ್ ರೀಡಿಂಗ್ ಕೆಲಸವನ್ನು ನಿರ್ವಹಿಸಿ ಯೋಜನೆ ಯಶಸ್ಸಾಗಲು ಕಾರಣರಾಗಿದ್ದರು’ ಎಂದು ನೆನಪಿಸಿಕೊಂಡರು.

‘ರಾಜಪ್ಪ ದಳವಾಯಿಯವರಿಗೆ ಸಿಗಬೇಕಾದ ಸ್ಥಾನಮಾನಗಳು ಸಿಗಲಿಲ್ಲ. ಬಹಳ ಸಂದರ್ಭಗಳಲ್ಲಿ ತಮ್ಮ ಕೆಲಸಕ್ಕಿಂತ ಬೇರೆಯವರ ಕೆಲಸಗಳಿಗೆ ಒತ್ತು ಕೊಟ್ಟು ನನ್ನ ಬಳಿ ಬರುತ್ತಿದ್ದರು’ ಎಂದರು. 

ಕರ್ನಾಟಕ ಲೇಖಕಿಯ ಸಂಘದ ಅಧ್ಯಕ್ಷೆ ಎಚ್.ಎಲ್.ಪುಷ್ಪ ಮಾತನಾಡಿ, ‘ಕನ್ನಡದ ಮಹತ್ವದ ನಾಟಕಕಾರರ ಸಾಲಿನಲ್ಲಿ ರಾಜಪ್ಪ ದಳವಾಯಿ ಅವರಿಗೆ ಸ್ಥಾನವಿದೆ. ಅವರು ಸಂಘಟನೆಯಲ್ಲಿ ತೊಡಗಿಕೊಂಡೇ ಮಹತ್ವದ ನಾಟಕಗಳನ್ನು ರಚಿಸಿದ್ದಾರೆ’ ಎಂದು ವಿವರಿಸಿದರು.

‘ವಿದ್ಯಾರ್ಥಿಗಳೇ ಸೇರಿ ರಾಜಪ್ಪ ದಳವಾಯಿ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಸಿದ್ದೇವೆ. ಇದಕ್ಕೆ ವಿದ್ಯಾರ್ಥಿಗಳಿಂದಲೇ ಹಣ ಸಂಗ್ರಹಿಸಲಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವವರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುವುದು’ ಎಂದು ಪ್ರದೀಪ್ ಮಾಲ್ಗುಡಿ ಮಾಹಿತಿ ನೀಡಿದರು.

ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಡಾಮಿನಿಕ್, ರಾಜಪ್ಪ ದಳವಾಯಿಯವರ ಪತ್ನಿ ಮಂಜುಳಾ ಬಿ.ಸಿ., ರಾಜಪ್ಪ ದಳವಾಯಿ, ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ, ಜಯಕರ್ ಎಸ್.ಎಂ. ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT