ಬೆಂಗಳೂರು: ‘ಪುಸ್ತಕಗಳು ಐಷಾರಾಮಿ ವಸ್ತುಗಳಾಗಬಾರದು. ಜನಸಾಮಾನ್ಯರಿಗೆ ಕೈಗೆಟುಕುವ ಬೆಲೆಗೆ ಪುಸ್ತಕಗಳನ್ನು ತಲುಪಿಸುವ ಜವಾಬ್ದಾರಿಯನ್ನು ಸರ್ಕಾರಿ ಪುಸ್ತಕ ಪ್ರಕಟಣೆ ಸಂಸ್ಥೆಗಳು ತೆಗೆದುಕೊಳ್ಳಬೇಕು’ ಎಂದು ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಅಭಿಪ್ರಾಯಪಟ್ಟರು.

ಕನ್ನಡ ಪುಸ್ತಕ ಪ್ರಾಧಿಕಾರ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಿ.ಕೆ. ವೆಂಕಟರಾಮಯ್ಯ, ಗೌರೀಶ ಕಾಯ್ಕಿಣಿ, ಅ.ನ. ಕೃಷ್ಣರಾಯ, ಕೋ.ಚೆನ್ನಬಸಪ್ಪ ಹಾಗೂ ಸಿದ್ಧಲಿಂಗಯ್ಯ ಅವರ ಸಮಗ್ರ ಸಾಹಿತ್ಯ ಸಂಪುಟ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ, ಮಾತನಾಡಿದರು.

‘ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿಯ ಅಕಾಡೆಮಿ ಮತ್ತು ಪ್ರಾಧಿಕಾರಗಳು ಪ್ರಕಟಿಸುವ ಪುಸ್ತಕಗಳು ಜನಮಾನಸವನ್ನು ಮುಟ್ಟಬೇಕು. ಸರ್ಕಾರಿ ಸಂಸ್ಥೆಗಳು ಪ್ರಕಟಿಸಿದ ಪುಸ್ತಕಗಳ ಖರೀದಿಗೆ ಸಾಹಿತ್ಯಾಸಕ್ತರು ಬೆಂಗಳೂರಿಗೆ ಬರುವುದು ತಪ್ಪಬೇಕು. ಆದ್ದರಿಂದ ಎಲ್ಲೆಡೆ ಪುಸ್ತಕಗಳು ಸಿಗುವ ವ್ಯವಸ್ಥೆಯನ್ನು ರೂಪಿಸಬೇಕು. ನಾವು ವಿದ್ಯಾರ್ಥಿಯಾಗಿದ್ದಾಗ ಸಿದ್ಧಲಿಂಗಯ್ಯ ಅವರ ಪುಸ್ತಕಗಳನ್ನು ₹ 2ಕ್ಕೆ ಖರೀದಿ ಮಾಡುತ್ತಿದ್ದೇವು. ಇತ್ತೀಚೆಗೆ ಪುಸ್ತಕಗಳು ಐಷಾರಾಮಿ ವಸ್ತುಗಳಾಗಿ ಮಾರ್ಪಡುತ್ತಿವೆ. ಜನಸಾಮಾನ್ಯರಿಗೆ ಸಾಹಿತ್ಯ ತಲುಪಬೇಕಾದರೆ ಕನಿಷ್ಠ ಬೆಲೆ ನಿಗದಿಪಡಿಸಿ, ಮಾರಾಟ ಮಾಡಬೇಕು’ ಎಂದು ಆಗ್ರಹಿಸಿದರು.

‘ಕನ್ನಡದಲ್ಲಿ ಸಾಹಿತ್ಯದ ಮುಖ್ಯವಾದ ಧಾರೆ ವಿಚಾರ ಸಾಹಿತ್ಯ. ಈ ಪ್ರಕಾರದ ಸಾಹಿತ್ಯ ಪುಸ್ತಕಗಳೇ ಹೆಚ್ಚು ಮಾರಾಟವಾಗುತ್ತವೆ ಎನ್ನುವುದು ಸಮೀಕ್ಷೆಯೊಂದರಿಂದ ದೃಢಪಟ್ಟಿದೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕಾವ್ಯ ಓದುವವರ ಸಂಖ್ಯೆ ಕಡಿಮೆಯಿದ್ದು, ಬರೆಯುವವರು ಜಾಸ್ತಿಯಾಗಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಕೆಲವು ಪ್ರಾತಿನಿಧಿಕ ಕೃತಿಗಳ ಅಗತ್ಯವಿದ್ದು, ನವೋದಯ, ನವ್ಯ ಮತ್ತು ದಲಿತ ಬಂಡಾಯ ಕಾವ್ಯ ಹಾಗೂ ಕಥೆಗಳ ಸಂಚಿಕೆಗಳನ್ನು ಹೊರತರಬೇಕು’ ಎಂದು ಹೇಳಿದರು.

ಬಿಡುಗಡೆಯಾದ ಸಾಹಿತ್ಯ ಸಂಪುಟಗಳ ಬಗ್ಗೆ ಮಾತನಾಡಿದ ಲೇಖಕಿ ಸಾವಿತ್ರಿ ಮುಜುಮದಾರ, ‘ಯುವಜನರು ಹಳಗನ್ನಡ ಸಾಹಿತ್ಯವನ್ನು ಕಬ್ಬಿಣದ ಕಡಲೆ ಅಂದುಕೊಳ್ಳುತ್ತಾರೆ. ನಡುಗನ್ನಡ ಸಾಹಿತ್ಯದಿಂದ ದೂರ ಆಗುತ್ತಿದ್ದಾರೆ. ಅವರಿಗೆ ಆಧುನಿಕ ಕನ್ನಡ ಸಾಹಿತ್ಯವನ್ನೂ ತಿಳಿಸುವ ಅನಿವಾರ್ಯತೆ ಬಂದಿದೆ. ಅಕಾಡೆಮಿ ಮತ್ತು ಪ್ರಾಧಿಕಾರಗಳು ಪ್ರಕಟಿಸುತ್ತಿರುವ ಪುಸ್ತಕಗಳು ವಿಶ್ವವಿದ್ಯಾಲಯಗಳ ಸಂಶೋಧನಾ ವಿದ್ಯಾರ್ಥಿಗಳಿಗೆ ಆಕರ ಗ್ರಂಥಗಳಾಗುತ್ತವೆ. ಆದ್ದರಿಂದ ವಿಶ್ವವಿದ್ಯಾಲಯಗಳಿಗೆ ಪುಸ್ತಕಗಳನ್ನು ತಲುಪಿಸುವ ಕೆಲಸವಾಗಬೇಕು’ ಎಂದು ಅಭಿಪ್ರಾಯಪಟ್ಟರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ. ಗಾಯಿತ್ರಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ, ಪುಸ್ತಕದ ಸಂಪಾದಕರಾದ ಶಾ.ಮಂ. ಕೃಷ್ಣರಾಯ, ಲಕ್ಷ್ಮಣ ಕೊಡಸೆ ಉಪಸ್ಥಿತರಿದ್ದರು.

ಬಹುಸಂಸ್ಕೃತಿ ಈ ದೇಶದ ನಿಜವಾದ ಸಂಸ್ಕೃತಿ. ಏಕ ಸಂಸ್ಕೃತಿ ಹೇರುವ ಕೋಮುವಾದ ಹರಡುವ ಸಂಕುಚಿತ ದೃಷ್ಟಿಕೋನ ಹೆಚ್ಚುತ್ತಿದೆ. ಇಡೀ ಭಾರತಕ್ಕೆ ವೈಚಾರಿಕ ದೃಷ್ಟಿಕೋನ ಅಗತ್ಯ
ಅಲ್ಲಮಪ್ರಭು ಬೆಟ್ಟದೂರು ಸಾಹಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.