ಬೆಂಗಳೂರು: ಉಪಚುನಾವಣೆಯಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಶಿವಾಜಿನಗರ, ಕೆ.ಆರ್.ಪುರ, ಮಹಾಲಕ್ಷ್ಮಿ ಲೇಔಟ್ ಮತ್ತು ಯಶವಂತಪುರ ಕ್ಷೇತ್ರಗಳಲ್ಲಿ ನಿರೀಕ್ಷೆಯಂತೆಯೇ ಕಡಿಮೆ ಪ್ರಮಾಣದ ಮತದಾನವಾಗಿದ್ದರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಉತ್ತಮ ಮತದಾನವಾಗಿದೆ.

ಚುಮು ಚುಮು ಚಳಿಯಲ್ಲಿ ಮಂದಗತಿಯಲ್ಲೇ ಆರಂಭವಾದ ಮತದಾನ, ಬಿಸಿಲೇರಿದ ಮೇಲೂ ಚುರುಕಾಗಲಿಲ್ಲ. ಕೆ.ಆರ್.ಪುರದ ಜಗದೀಶಪುರ ಬೂತ್ ಸಮೀಪ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ವಾಗ್ಯುದ್ಧ ಮತ್ತು ದೇವಸಂದ್ರ ವಾರ್ಡ್ನ ಬೂತ್ ಬಳಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಹೊಯ್ಕೈ ನಡೆದುದು ಬಿಟ್ಟರೆ ಬಹುತೇಕ ಶಾಂತಿಯುತವಾಗಿಯೇ ಮತದಾನ ನಡೆಯಿತು.

ಕೆ.ಆರ್.ಪುರದ ಕಲ್ಕೆರೆಯಲ್ಲಿ 100 ವರ್ಷದ ಅಜ್ಜಿ ಸಲ್ಲಮ್ಮ ಎಂಬುವವರು ಮಕ್ಕಳ ಸಹಾಯದೊಂದಿಗೆ ಬೂತಿಗೆ ಬಂದು ಹಕ್ಕು ಚಲಾಯಿಸಿದರು. ಕೆ.ಆರ್. ಪುರ ಸರ್ಕಾರಿ ಶಾಲೆಯ ಮತಗಟ್ಟೆ ಬಳಿ ಸಂತೋಷ್ ಎಂಬ ಯುವಕ ಮತ ಮಾರಿಕೊಳ್ಳದಂತೆ ಭಿತ್ತಿಪತ್ರ ಹಿಡಿದು ಜಾಗೃತಿ ಮೂಡಿಸಿದ್ದು ಗಮನ ಸೆಳೆಯಿತು.

ಸಿಂಗಯ್ಯನಪಾಳ್ಯದಲ್ಲಿ ಮತಯಂತ್ರದಲ್ಲಿ ದೋಷ ಕಾಣಿಸಿ 10 ನಿಮಿಷ ಮತದಾನಕ್ಕೆ ಅಡ್ಡಿ ಉಂಟಾಯಿತು. ಪಕ್ಕದ ಬೂತ್ನಲ್ಲಿ ಸಹ ಇದೇ ಸಮಸ್ಯೆ ಸ್ವಲ್ಪ ಹೊತ್ತು ಕಾಣಿಸಿತು. ಕೆಲವು ಕಡೆಗಳಲ್ಲಿ ಉಚಿತವಾಗಿ ಆಹಾರ ಪೊಟ್ಟಣಗಳನ್ನು ಹಂಚಿದ್ದನ್ನು ಅಲ್ಲಿ ಚೆಲ್ಲಿದ್ದ ತ್ಯಾಜ್ಯದ ರಾಶಿಯೇ ಹೇಳುತ್ತಿತ್ತು.

ಶಿವಾಜಿನಗರ ಕ್ಷೇತ್ರದಲ್ಲಿ ಬೆಳಿಗ್ಗೆ ಮತದಾನ ನೀರಸವಾಗಿತ್ತು. ಬಿಸಿಲೇರಿದ ಮೇಲೂ ಚುರುಕು ಪಡೆಯಲಿಲ್ಲ. ಶಿವಾಜಿನಗರ ಪೊಲೀಸ್ ಠಾಣೆ ಸಮೀಪದ ಸರ್ಕಾರಿ ನಫೀಸಾ ಶಾಲೆಯಲ್ಲಿ ಐದು ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಅಲ್ಲಿ ದೊಡ್ಡ ಸಂಖ್ಯೆಯಲ್ಲಿ ಮತದಾರರ ಸರದಿ ಕಂಡುಬಂತು.

ಜನನಿಬಿಡ ಫ್ರೇಜರ್ ಟೌನ್, ರಸೆಲ್ ಮಾರುಕಟ್ಟೆಯಲ್ಲಿ ವ್ಯಾಪಾರದ ಗಿಜಿಗಿಜಿ ಹಾಗೆಯೇ ಇತ್ತು. ಆದರೊಳಗೆಯೇ ಹಲವರು ಮತದಾನ ಮಾಡಿ ಬಂದಿರುವುದು ಕಾಣಿಸುತ್ತಿತ್ತು. ವಸಂತನಗರ, ಭಾರತೀನಗರ, ಕಂಟೋನ್ಮೆಂಟ್ ಪ್ರದೇಶಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಮತದಾರರು ಮತಗಟ್ಟೆಗೆ ಬರಲಿಲ್ಲ. ಆದರೆ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಮತಗಟ್ಟೆಯೊಳಗೆ ಮೊಬೈಲ್ ಫೋನ್ಗಳನ್ನು ಸ್ವಿಚ್ ಆಫ್ ಮಾಡಿಯೇ ಕೊಂಡೊಯ್ಯುವಂತೆ ತಾಕೀತು ಮಾಡಲಾಗುತ್ತಿತ್ತು.

ಕೊನೆಯ ಕ್ಷಣದ ಕಾತರ: ಬೂತು ಸಮೀಪಕ್ಕೆ ಬಂದ ಮತದಾರರನ್ನು ಸೆಳೆಯಲು ಪ್ರಮುಖ ಪಕ್ಷಗಳ ಕಾರ್ಯಕರ್ತರು ಪ್ರಯತ್ನಿಸುತ್ತಿದ್ದರು. ಹಲವು ಅಭ್ಯರ್ಥಿಗಳು ಬೇರೆ ಬೇರೆ ಬೂತುಗಳ ಒಳಗೇ ತೆರಳಿ ಶುಭಾಶಯ ಕೋರುತ್ತಿದ್ದರು.

ಹೊಸಕೋಟೆ ಕ್ಷೇತ್ರ ವ್ಯಾಪ್ತಿಯ ಸೂಲಿಬೆಲೆ (ಗುಟ್ಟಾ) 6ನೇ ಸರ್ಕಲ್ನ ಉಸ್ತುವಾರಿ ವಹಿಸಿಕೊಂಡ ಬಿಜೆಪಿಯ ಕಾರ್ಯಕರ್ತರು, ‘ಮತದಾನದ ನಡೆದ ದಿನ ಅಲ್ಪಸಂಖ್ಯಾತರ ಮತಗಳ ಅವಶ್ಯಕತೆ ನಮಗಿಲ್ಲ’ ಎಂಬ ಬಹಿರಂಗ ಹೇಳಿಕೆ ನೀಡಿದ್ದು ವಾಗ್ವಾದಕ್ಕೆ ಕಾರಣವಾಯಿತು.

ಮತದಾನದ ಫೋಟೊ ತೆಗೆದ ವ್ಯಕ್ತಿ ಪೊಲೀಸರ ವಶಕ್ಕೆ

ಶಿವಾಜಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಲಸೂರಿನ ಮತಗಟ್ಟೆಯೊಂದರಲ್ಲಿ ಮೊಬೈಲ್ನಲ್ಲಿ ಮತದಾನದ ಫೋಟೊ ತೆಗೆದ ಆರೋಪದ ಮೇಲೆ ಚಂದ್ರಶೇಖರ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದರು.

ಆರೋಪಿ ಮತಗಟ್ಟೆ ಪ್ರವೇಶಿಸುವ ಮುನ್ನ ಮೊಬೈಲ್ ತೆಗೆದುಕೊಂಡು ಹೋಗದಂತೆ ಚುನಾವಣೆ ಕರ್ತವ್ಯನಿರತ ಸಿಬ್ಬಂದಿ ತಿಳಿಸಿದ್ದರು. ಮೊಬೈಲ್ ಇಲ್ಲವೆಂದು ಒಳಗೆ ಹೋಗಿದ್ದು, ಮತದಾನದ ಸಮಯದಲ್ಲಿ ಫೋಟೊ ತೆಗೆದರು. ಇದನ್ನು ಗಮನಿಸಿದ ಸಿಬ್ಬಂದಿ ಪ್ರಶ್ನಿಸಿದರು.‘ಯಾವ ಅಭ್ಯರ್ಥಿಗೆ ಮತ ಹಾಕಿದ್ದೇನೆ ಎಂಬುದನ್ನು ತೋರಿಸುವ ಸಲುವಾಗಿ ಫೋಟೊ ತೆಗೆದಿದ್ದೇನೆ’ ಎಂದು ವಿವರಣೆ ನೀಡಿದರು. ಈ ವಿಚಾರವಾಗಿ ಆರೋಪಿ ಹಾಗೂ ಸಿಬ್ಬಂದಿ ನಡುವೆ ವಾಗ್ವಾದ ನಡೆಯಿತು. ನಂತರ ಅವರನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಯಿತು. ಆರೋಪಿ ಚಲಾಯಿಸಿರುವ ಮತವನ್ನು ಅಸಿಂಧುಗೊಳಿಸಲು ಚುನಾವಣಾಧಿಕಾರಿಗಳು ಕ್ರಮ ಕೈಗೊಂಡರು.

ಮಹಿಳೆಯರಿಗೆ ರಕ್ಷಣೆ ಕೊಡಿ

ಕೆ.ಆರ್.ಪುರ: ಹೈದರಾಬಾದ್ನಲ್ಲಿ ಪಶುವೈದ್ಯೆಯ ಅಮಾನುಷ ಹತ್ಯೆಯ ಪ್ರತಿಧ್ವನಿ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಐಟಿಐ ಲೇಔಟ್ನಲ್ಲೂ ಕೇಳಿಸಿತು. ‘ನಾನು ಪ್ರತಿದಿನ ಮನೆಗೆ ಬರುವುದು ಸಂಜೆ 7 ಗಂಟೆಯ ಬಳಿಕ. ಜನ ಗುಂಪು ಗುಂಪಾಗಿ ಸೇರಿದ್ದನ್ನು ಕಂಡರೆ ಹೈದರಾಬಾದ್ನ ಘಟನೆಯ ನೆನಪಾಗುತ್ತದೆ. ಮಹಿಳಾ ಸುರಕ್ಷತೆಗೆ ಆದ್ಯತೆ ಕೊಡಬೇಕು’ ಎಂದು ಮತ ಚಲಾಯಿಸಿ ಬಂದ ಅಶ್ವಿನಿ ಎಂಬುವವರು ಹೇಳಿದರು.

ಕಾಲೇಜು ವಿದ್ಯಾರ್ಥಿನಿ ನಂದಿನಿ ಸಹ ಹೇಳಿದ್ದು ಇದನ್ನೇ, ನಮಗೆ ಸುರಕ್ಷತೆ ಬೇಕು, ಅದನ್ನು ಜನಪ್ರತಿನಿಧಿಗಳು ಒದಗಿಸಬೇಕು ಎಂಬುದು ಅವರ ಒತ್ತಾಯವಾಗಿತ್ತು. ಗೃಹಿಣಿ ಅನುರಾಧಾ, ಉಪನ್ಯಾಸಕಿ ನೇತ್ರಾ ಸಹ ಇದೇ ಮಾತನ್ನು ಆಡಿದರು.

ಆಯೋಗಕ್ಕೆ ಬಿಜೆಪಿ ದೂರು

ಶಿವಾಜಿನಗರ ಕ್ಷೇತ್ರದಲ್ಲಿ ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್ ನೀತಿ ಸಂಹಿತೆ ಉಲ್ಲಂಘಿಸಿ ವಿವಿಧ ಮತಗಟ್ಟೆಗಳಿಗೆ ತೆರಳಿ ಮತದಾರರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿ ಚುನಾವಣಾ ಆಯೋಗಕ್ಕೆ ಬಿಜೆಪಿ ನಿಯೋಗದಿಂದ ದೂರು ನೀಡಲಾಯಿತು.

ಪತ್ರಕರ್ತನ ಮೇಲೆ ಎಸಿಪಿ ಹಲ್ಲೆ
ಬೆಂಗಳೂರು: ಕೆ.ಆರ್.ಪುರ ವಿಧಾನಸಭೆ ಕ್ಷೇತ್ರದ ಮತದಾನ ಕುರಿತು ಗುರುವಾರ ವರದಿ ಮಾಡಲು ಹೋಗಿದ್ದ ಇಂಗ್ಲಿಷ್ ಪತ್ರಿಕೆ ವರದಿಗಾರನ ಮೇಲೆ ಪೊಲೀಸ್ ಅಧಿಕಾರಿಯೊಬ್ಬರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಕರ್ನಾಟಕ ಪಬ್ಲಿಕ್ ಶಾಲೆ ಬಳಿ ‘ಸೇವ್ ಡೆಮಾಕ್ರಸಿ’ ಎಂಬ ಭಿತ್ತಿಪತ್ರ ಹಿಡಿದಿದ್ದ ಸಂತೋಷ್ ಎಂಬ ವ್ಯಕ್ತಿಗೆ ಪೊಲೀಸರು ಏಕವಚನ ಪ್ರಯೋಗಿಸಿ, ಅಲ್ಲಿಂದ ಬಲವಂತವಾಗಿ ದಬ್ಬುತ್ತಿದ್ದುದ್ದನ್ನು ಮೊಬೈಲ್ ಫೋನ್ನಲ್ಲಿ ಚಿತ್ರೀಕರಿಸುತ್ತಿದ್ದ ವರದಿಗಾರ ಮಂಜುನಾಥ್ ಅವರ ಕೆನ್ನೆಗೆ ಸ್ಥಳದಲ್ಲಿದ್ದ ಎಸಿಪಿ ಕೃಷ್ಣಪ್ಪ ಹೊಡೆದರು ಎಂದು ಆರೋಪಿಸಲಾಗಿದೆ.

ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರ ಭಾವಚಿತ್ರವಿದ್ದ ಭಿತ್ತಿ ಪತ್ರವನ್ನು ಸಂತೋಷ್ ಹಿಡಿದಿದ್ದರು. ಅವರಿಂದ ಪೊಲೀಸರು ಭಿತ್ತಿಪತ್ರ ಕಸಿದುಕೊಂಡು ಬಲವಂತವಾಗಿ ಅಲ್ಲಿಂದ ದಬ್ಬುತ್ತಿದ್ದರು. ಪ್ರತಿಸಲ ಅದನ್ನು ಕಿತ್ತುಕೊಂಡಾಗಲೂ ಮತ್ತೊಂದು ಭಿತ್ತಿಪತ್ರ ಹಿಡಿದು ಅವರು ಅಲ್ಲೇ ನಿಲ್ಲುತ್ತಿದ್ದರು. ಕೊನೆಗೆ ಅವರ ಮೇಲೂ ಹಲ್ಲೆ ಮಾಡಿ ಅಲ್ಲಿಂದ ಕಳುಹಿಸಲಾಯಿತು. ಈ ಸಂದರ್ಭವನ್ನು ಪತ್ರಕರ್ತ ಚಿತ್ರಿಸುತ್ತಿದ್ದರು. ಇದರಿಂದ ಸಿಟ್ಟಿಗೆದ್ದ ಎಸಿಪಿ ಮೊಬೈಲ್ ಆಫ್ ಮಾಡುವಂತೆ ಹೇಳಿ ಮಂಜುನಾಥ್ ಕೆನ್ನೆಗೆ ಹೊಡೆದರು ಎಂದು ದೂರಲಾಗಿದೆ.

ಈ ಸಂಬಂಧ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರಿಗೆ ಮೌಖಿಕವಾಗಿ ದೂರು ಕೊಡಲಾಗಿದೆ. ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ಅವರು ನೀಡಿದ್ದಾರೆ. ಈ ಬಗ್ಗೆ ವೈಟ್ಫೀಲ್ಡ್ ಡಿಸಿಪಿ ಅನುಚೇತ್ ಅವರಿಂದ ಕಮಿಷನರ್ ವರದಿ ಪಡೆದಿದ್ದಾರೆ. ಚುನಾವಣಾ ಆಯೋಗಕ್ಕೂ ವರದಿ ಕಳುಹಿಸಲಾಗಿದೆ.

ಯಶವಂತಪುರದಲ್ಲೇ ಹೆಚ್ಚು

ಬೆಂಗಳೂರು: ನಗರ ವ್ಯಾಪ್ತಿಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ ಯಶವಂತಪುರದಲ್ಲಿ ಅತೀ ಹೆಚ್ಚು ಶೇ 54.13, ಕೆ.ಆರ್.ಪುರದಲ್ಲಿ ಅತೀ ಕಡಿಮೆ ಶೇ 43.25 ಮತದಾನವಾಗಿದೆ.

ಮಹಾಲಕ್ಷ್ಮೀ ಲೇಔಟ್ನಲ್ಲಿ ಶೇ 50.92ರಷ್ಟು, ಶಿವಾಜಿನಗರದಲ್ಲಿ ಶೇ 44.6ರಷ್ಟು ಮಂದಿ ಮತ ಚಲಾಯಿಸಿದ್ದಾರೆ. ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಯಿತು. 9ರ ವೇಳೆಗೆ ಮಹಾಲಕ್ಷ್ಮೀ ಲೇಔಟ್ನಲ್ಲಿ ಅತೀ ಹೆಚ್ಚು ಶೇ 8.21ರಷ್ಟು ಮತ ಚಲಾವಣೆಗೊಂಡಿದ್ದವು. ಮಧ್ಯಾಹ್ನದ ಬಳಿಕ ಯಶವಂತಪುರ ಕ್ಷೇತ್ರದಲ್ಲಿ ಮತದಾನ ಚುರುಕು ಪಡೆದುಕೊಂಡಿತು.

ಇವಿಎಂ ಸ್ವೀಕರಿಸದ ಅಧಿಕಾರಿ

ಬೆಂಗಳೂರು: ಶಿವಾಜಿನಗರ ಕ್ಷೇತ್ರದ ಉಪಚುನಾವಣೆ ಮುಗಿದ ಬಳಿಕವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಮೌಂಟ್ ಕಾರ್ಮೆಲ್ ಕಾಲೇಜಿನ ಡಿಮಸ್ಟರಿಂಗ್ ಕೇಂದ್ರದ ಅಧಿಕಾರಿ ಪಡೆಯಲು ವಿಳಂಬ ಮಾಡಿದ್ದು, ಕೆಲ ಹೊತ್ತು ಗೊಂದಲಕ್ಕೆ ಕಾರಣವಾಯಿತು.

ವಿವಿಧ ಮತಗಟ್ಟೆಗಳ ಇವಿಎಂಗಳನ್ನು ಭದ್ರತಾ ಕೊಠಡಿಯಲ್ಲಿ ಇಡಬೇಕಿತ್ತು.ಗುರುವಾರ ರಾತ್ರಿ ಬಹಳ ಹೊತ್ತು ಅಧಿಕಾರಿಇವಿಎಂ ಸ್ವೀಕರಿಸಿರಲಿಲ್ಲ. ಕೆಲವರು ಇದರ ವಿರುದ್ಧ ಘೋಷಣೆ ಕೂಗಿದರು. ಪೊಲೀಸರುಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಉದ್ದೇಶಪೂರ್ವಕ ಹಲ್ಲೆ: ಆರೋಪ

ಕೆ.ಆರ್.ಪುರ: ಉಪಚುನಾವಣೆ ವೇಳೆ ಉದ್ದೇಶಪೂರ್ವಕ ವಾಗಿ ಕಾಂಗ್ರೆಸ್ ಏಜೆಂಟ್ಗಳ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಕೆ.ಆರ್.ಪುರ ಕ್ಷೇತ್ರದ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಆರೋಪಿಸಿದರು. ‘ಬಿಜೆಪಿ ನಮ್ಮ ಏಜೆಂಟ್ಗಳ ಮೇಲೆ ಗೂಂಡಾಗಿರಿ ಮಾಡಿರುವುದು ಸರಿಯಲ್ಲ. ಕೆ.ಆರ್.ಪುರ ಕ್ಷೇತ್ರವು ಕಾಂಗ್ರೆಸ್ನ ಭದ್ರ ಕೋಟೆಯಾಗಿದೆ. ಈ ಬಾರಿ ನಾನೇ ಗೆಲ್ಲುವೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.