ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಡೀ ರಾತ್ರಿ ಮಳೆ: ರಾಜಧಾನಿಯಲ್ಲಿ ಭಾರಿ ಅವಾಂತರ

Last Updated 21 ಅಕ್ಟೋಬರ್ 2020, 8:15 IST
ಅಕ್ಷರ ಗಾತ್ರ

ಬೆಂಗಳೂರು: ಮಂಗಳವಾರ ಇಡೀ ರಾತ್ರಿ ಆರ್ಭಟಿಸಿದ ಮಳೆ ರಾಜಧಾನಿಯಲ್ಲಿ ‌ಅವಾಂತರ ಸೃಷ್ಟಿಸಿದೆ. ಕೆಂಗೇರಿ, ರಾಜರಾಜೇಶ್ವರಿನಗರ, ವಿಶ್ವೇಶ್ವರಪುರ, ಲಕ್ಕಸಂದ್ರ, ಗೊಟ್ಟಿಗೆರೆ, ವಿದ್ಯಾರಣ್ಯಪುರ, ನಾಗರಭಾವಿ ಸೇರಿ ನಗರದ ಬಹುತೇಕ ಕಡೆ ಭಾರಿ ಮಳೆಯಾಗಿದೆ.

ಕೋರಮಂಗಲದ ಹಲವು ಬಡಾವಣೆಗಳು ಜಲಾವೃತಗೊಂಡು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಸೋನಿ ಸಿಗ್ನಲ್ ಬಳಿ ವಾಹನಗಳು ಮುಳುಗಿದ್ದವು. ಮನೆಗಳಿಗೂ ನೀರು ನುಗ್ಗಿದ್ದು, ವಸ್ತುಗಳೆಲ್ಲವೂ ನೀರುಪಾಲಾಗಿವೆ. ಅಪಾರ್ಟ್‌ಮೆಂಟ್‌ಗಳಲ್ಲಿ ನೆಲಮಾಳಿಗೆಯಲ್ಲಿರುವ ಪಾರ್ಕಿಂಗ್ ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿವೆ. ವಾಹನಗಳು ನೀರಿನಲ್ಲಿ ತೇಲುತ್ತಿವೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ರಾಜರಾಜೇಶ್ವರಿನಗರದ ಮೀನಾಕ್ಷಿ ಕಲ್ಯಾಣ ಮಂಟಪಕ್ಕೆ ನೀರು ನುಗ್ಗಿ ಮದುವೆ ಸಂಭ್ರಮವನ್ನೇ ಕಸಿದುಕೊಂಡಿದೆ. ನೆಲಮಾಳಿಗೆಯಲ್ಲಿದ್ದ ಊಟದ ಹಾಲ್‌ ಸಂಪೂರ್ಣ ಜಲಾವೃತಗೊಂಡು ಆಹಾರ ಸಾಮಗ್ರಿ, ಕುರ್ಚಿಗಳು ತೇಲಾಡಿದವು. ಜನರು ಅಲ್ಲಿಂದ ಹೊರ ಬಂದ ಬಳಿಕ ಕಾರ್ಯಕ್ರಮವನ್ನೇ ರದ್ದು ಮಾಡಲಾಯಿತು.

‌ಮೈಸೂರು ರಸ್ತೆಯ ಆರ್.ವಿ. ಎಂಜಿನಿಯರಿಂಗ್ ಕಾಲೇಜಿನ ಬಳಿ ನಿರ್ಮಾಣ ಹಂತದಲ್ಲಿದ್ದ ಅಂಡರ್‌ಪಾಸ್‌ ಗೋಡೆಗಳು ಕುಸಿದಿವೆ. ಗುರುದತ್ತ ಲೇಔಟ್‌ನಲ್ಲಿ ರಾಜಕಾಲುವೆ ತಡೆಗೋಡೆಯೇ ನೀರಿನಲ್ಲಿ ಕೊಚ್ಚಿ ಹೋಗಿದೆ. ರಾಜಕಾಲುವೆ ಪಕ್ಕದಲ್ಲೇ ಇರುವ ಕಟ್ಟಡಗಳು ಸದ್ಯ ಅಪಾಯದಲ್ಲಿದ್ದು, ನೀರು ಹರಿವಿನ ದಿಕ್ಕು ಬದಲಿಸಿ ಸರಿಪಡಿಸುವ ಕಾರ್ಯವನ್ನು ಬಿಬಿಎಂಪಿ ನಡೆಸುತ್ತಿದೆ.

ಎಲ್ಲೆಲ್ಲಿ ಎಷ್ಟು ಮಳೆ

ವಾರ್ಡ್‌; ಮಳೆ ಪ್ರಮಾಣ(ಮಿಲಿ ಮೀಟರ್‌ಗಳಲ್ಲಿ)

ಕೆಂಗೇರಿ; 124.5

ರಾಜರಾಜೇಶ್ವರಿನಗರ; 123.5

ಲಕ್ಕಸಂದ್ರ; 115

ವಿಶ್ವೇಶ್ವರಪುರ; 108

ಗೊಟ್ಟಿಗೆರೆ; 101

ವಿದ್ಯಾಪೀಠ; 99

ನಾಗರಬಾವಿ; 98

ಗಾಳಿ ಆಂಜನೇಯ ದೇವಸ್ಥಾನ; 96.5

ಪಟ್ಟಾಭಿರಾಮನಗರ; 92.5

ಮಾರುತಿ ಮಂದಿರ; 92

ಬೇಗೂರು; 90

ಜ್ಞಾನಭಾರತಿ ಬೆಂಗಳೂರು ವಿಶ್ವವಿದ್ಯಾಲಯ ಕ್ಯಾಂಪಸ್; 88.5

ಬಸವನಗುಡಿ; 86.5

ಹಂಪಿನಗರ; 86

ಚಾಮರಾಜಪೇಟೆ; 86

ಜ್ಞಾನಭಾರತಿ 84.5

ಬಿಟಿಎಂ ಲೇಔಟ್; 83.5

ಚೊಕ್ಕಸಂದ್ರ; 81.5

ದೊರೆಸಾನಿಪಾಳ್ಯ; 80

ಉತ್ತರಹಳ್ಳಿ; 79

ಯಶವಂ‍ತಪುರ; 78

ಬಾಗಲಗುಂಟೆ; 77.5

ದೊಡ್ಡಬೊಮ್ಮಸಂದ್ರ; 77.5

ಸಂಪಂಗಿರಾಮನಗರ; 77

ಆರ್‌.ಆರ್.ನಗರ ಎಚ್‌ಎಂಟಿ; 76

ಕೋಣನಕುಂಟೆ; 75

ಕೋರಮಂಗಲ; 75

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT