ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

67 ಮಂದಿಗೆ ಪತ್ರಕರ್ತರ ಸಂಘದ ಪ್ರಶಸ್ತಿ: ಜ.4ರಂದು ಪ್ರಶಸ್ತಿ ಪ್ರದಾನ

Last Updated 25 ಡಿಸೆಂಬರ್ 2021, 19:54 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ) ನೀಡುವ 2019 ನೇ ಸಾಲಿನ ಪ್ರಶಸ್ತಿಗೆ ಹುಣಸವಾಡಿ ರಾಜನ್‌, ಚಂದ್ರಕಾಂತ ವಡ್ಡು,‌ ವಿಶ್ವೇಶ್ವರ ಭಟ್‌, ಟಿ. ವೆಂಕಟೇಶ್, ಬಿ.ಪಿ.ಮಲ್ಲಪ್ಪ, ಎಂ.ಕೆ.ಭಾಸ್ಕರರಾವ್‌, ದಿನೇಶ ಅಮಿನ್‌ ಮಟ್ಟು, ಟಿ.ವಿ.ಶಿವಾನಂದನ್‌ ಸೇರಿದಂತೆ ಒಟ್ಟು 67 ಪತ್ರಕರ್ತರು ಆಯ್ಕೆಯಾಗಿದ್ದಾರೆ.

ಮಂಗಳ ಎಂ.ಸಿ.ವರ್ಗೀಸ್ ವಾರಪತ್ರಿಕೆ ಪ್ರಶಸ್ತಿಗೆ ‘ಸುಧಾ’ ವಾರಪತ್ರಿಕೆಯ ಉಮಾ ವೇಣೂರು ಹಾಗೂ ಬಿ.ಎಸ್.ವೆಂಕಟರಾಂ (ಸ್ಕೂಪ್ ವರದಿ) ಪ್ರಶಸ್ತಿಗೆ ‘ಪ್ರಜಾವಾಣಿ’ಯಕೃಷ್ಣಿ ಶಿರೂರ ಆಯ್ಕೆಯಾಗಿದ್ದಾರೆ.

ಕಲಬುರಗಿಯಲ್ಲಿ 2022ರ ಜನವರಿ 4 ರಂದು ನಡೆಯಲಿರುವ 36 ನೇ ರಾಜ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.

ಪ್ರಶಸ್ತಿ ಪುರಸ್ಕೃತರು: ಡಾ.ಎಂ.ಎಂ.ಕಲಬುರ್ಗಿ ಪ್ರಶಸ್ತಿ: ಹುಣಸವಾಡಿ ರಾಜನ್, ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ: ದಿನೇಶ್ ಅಮಿನ್ ಮಟ್ಟು, ಪಿ.ರಾಮಯ್ಯ ಪ್ರಶಸ್ತಿ: ವಿಶ್ವೇಶ್ವರ ಭಟ್, ಮಹದೇವ ಪ್ರಕಾಶ್ ಪ್ರಶಸ್ತಿ: ಎಂ.ಕೆ.ಭಾಸ್ಕರರಾವ್, ಮ.ರಾಮಮೂರ್ತಿ ಪ್ರಶಸ್ತಿ: ಟಿ. ವೆಂಕಟೇಶ್, ಅಚ್ಯುತ ಚೇವಾರ್,

ಗುಡಿಹಳ್ಳಿ ನಾಗರಾಜ್ ಪ್ರಶಸ್ತಿ: ಜಗದೀಶ ಬುರ್ಲಬುಡ್ಡಿ, ವಿನಾಯಕ ಭಟ್ ಮೂರೂರು, ಅಭಿಮಾನಿ ಪ್ರಕಾಶನ ಪ್ರಶಸ್ತಿ: ಟಿ.ವಿ.ಶಿವಾನಂದನ್, ವಿ.ಎನ್.ತಾಳಿಕೋಟಿ, ಕೆ.ಎನ್.ಸುಬ್ರಹ್ಮಣ್ಯ ಪ್ರಶಸ್ತಿ: ಅಶ್ವಿನಿ ಶ್ರೀಪಾದ್, ಹೃಷಿಕೇಶ್ ಬಹದ್ದೂರ್ ದೇಸಾಯಿ, ನಾಡಪ್ರಭು ಕೆಂಪೇಗೌಡ ಪ್ರಶಸ್ತಿ: ಬಿ.ಪಿ.ಮಲ್ಲಪ್ಪ, ಶ್ರೀನಿವಾಸ ಹಳಕಟ್ಟಿ, ಎಂ.ಸಿ.ಶೋಭಾ.

ಗಿರಿಜಮ್ಮ ರುದ್ರಪ್ಪ ತಾಳಿಕೋಟೆ ಪ್ರಶಸ್ತಿ: ಗುಡಿಪುರ ನಂದೀಶ್, ಬಾ.ಮ.ಬಸವರಾಜಯ್ಯ, ಬದರಿನಾಥ ಹೊಂಬಾಳೆ ಪ್ರಶಸ್ತಿ: ಕೌಶಲ್ಯಾ ದತ್ತಾತ್ರೇಯ ಫಳನಾಕರ್, ಎಸ್.ಬಿ.ಜೋಷಿ.

ರಾಜಶೇಖರ ಕೋಟಿ ಪ್ರಶಸ್ತಿ: ಎಸ್‌. ನಾಗಣ್ಣ, ಜಿ.ರಾಜೇಂದ್ರ, ಅಪ್ಪಾಜಿಗೌಡ ಸಿನಿಮಾ ಪ್ರಶಸ್ತಿ: ವಿಜಯ ಭರಮಸಾಗರ, ಕೆ.ಬಿ.ಪಂಕಜ.
ಆಹ್ವಾನಿತ ಅತ್ಯುತ್ತಮ ವರದಿಗಳಿಗೆ ನೀಡುವ ಪ್ರಶಸ್ತಿಗಳು: ಜಿ.ನಾರಾಯಣ ಸ್ವಾಮಿ (ಗ್ರಾಮೀಣ ವರದಿ) ಪ್ರಶಸ್ತಿ: ಈಶ್ವರ ಹೋಟಿ, ಎಂ.ಎಚ್.ನದಾಫ್, ಪಟೇಲ್ ಭೈರಹನುಮಯ್ಯ (ಮಾನವೀಯ ವರದಿ) ಪ್ರಶಸ್ತಿ: ಸುಭಾಷ್ ಚಂದ್ರ ಎಂ.ಎಸ್., ಕರಿಯಪ್ಪ ಎಚ್.ಚೌಡಕ್ಕನವರ, ಗಿರಿಧರ್ ಪ್ರಶಸ್ತಿ (ಅಪರಾಧ ವರದಿ): ಗಿರೀಶ್ ಮಾದೇನಹಳ್ಳಿ, ವಾದಿರಾಜ್, ಬಿ.ಎಸ್.ವೆಂಕಟರಾಂ (ಸ್ಕೂಪ್ ವರದಿ) ಪ್ರಶಸ್ತಿ: ವಿಜಯ್ ಕೋಟ್ಯಾನ್, ಕೃಷ್ಣಿ ಶಿರೂರ, ಕೆ.ಎ.ನೆಟ್ಟಕಲ್ಲಪ್ಪ (ಕ್ರೀಡಾ ವರದಿ): ಕಾರ್ತಿಕ್.ಕೆ.ಕೆ., ಟಿ.ಎನ್.ಪದ್ಮನಾಭ.

ಖಾದ್ರಿ ಶಾಮಣ್ಣ (ಸುದ್ದಿ ವಿಮರ್ಶೆ) ಪ್ರಶಸ್ತಿ: ಮುರುಳಿಪ್ರಸಾದ್, ಶಿವಕುಮಾರ್ ಬೆಳ್ಳಿತಟ್ಟೆ, ಮಂಗಳ ಎಂ.ಸಿ.ವರ್ಗೀಸ್ ವಾರಪತ್ರಿಕೆ ಪ್ರಶಸ್ತಿ: ಉಮಾ ವೇಣೂರು, ಎಸ್.ಜಯರಾಂ, ಬಂಡಾಪುರ ಮುನಿರಾಜ್ (ಛಾಯಾಚಿತ್ರ) ಪ್ರಶಸ್ತಿ: ವಿಶ್ವನಾಥ್ ಸುವರ್ಣ, ಆಸ್ಟ್ರೋ ಮೋಹನ್, ಆರ್.ಎಲ್.ವಾಸುದೇವರಾವ್ (ಅರಣ್ಯ ವರದಿ) ಪ್ರಶಸ್ತಿ: ಸೋಮಶೇಖರ, ಬಾಲಕೃಷ್ಣ ಭೀಮಗುಳಿ, ಆರ್.ಎಲ್. ವಾಸುದೇವ ರಾವ್ (ವನ್ಯಪ್ರಾಣಿ)

ಪ್ರಶಸ್ತಿ: ಜೋಸೆಫ್ ಡಿಸೋಜ,ಶಿವು ಹುಣಸೂರು, ಬಿ.ಜಿ.ತಿಮ್ಮಪ್ಪಯ್ಯ (ಆರ್ಥಿಕ ದುರ್ಬಲ ವರ್ಗ) ಪ್ರಶಸ್ತಿ: ಕೆ.ಎಂ.ಮಂಜುನಾಥ್, ಬಸವರಾಜ ಪರಪ್ಪ ದಂಡಿನ, ಮಂಡಿಬೆಲೆ ಶಾಮಣ್ಣ ಪ್ರಶಸ್ತಿ: ಶರಣಯ್ಯ ಒಡೆಯರ್, ಮುರುಳೀಧರ ಎಸ್.ಎ., ಯಜಮಾನ್ ಟಿ.ನಾರಾಯಣಪ್ಪ (ಕೃಷಿ ವರದಿ) ಪ್ರಶಸ್ತಿ: ಶೇಖರ ಸಂಕಗೋಡನಹಳ್ಳಿ, ಎಚ್.ಎಸ್.ಶ್ರೀಹರಪ್ರಸಾದ್.

ನಾಡಿಗೇರ ಕೃಷ್ಣರಾಯರ (ಹಾಸ್ಯ) ಪ್ರಶಸ್ತಿ: ನರಸಿಂಹ ಹುಲಿಹೈದರ್, ಚಂದ್ರಕಾಂತ ವಡ್ಡು, ಡೆಸ್ಕ್ ಶ್ರೇಷ್ಠ ನಿರ್ವಹಣೆ: ಅ.ಮ.ಸುರೇಶ್, ಮಲ್ಲಿಕ ಚರಣವಾಡಿ, ಚಂದ್ರಕಲಾ, ಪುಟವಿನ್ಯಾಸ ಪ್ರಶಸ್ತಿ: ಮಹೇಶ್, ತಿಮ್ಮೇಶ್ ಎಸ್.

ವಿದ್ಯುನ್ಮಾನ ವಿಭಾಗ ಪ್ರಶಸ್ತಿ: ಆ್ಯಂಕರಿಂಗ್: ರಾಧಾ ಹಿರೇಗೌಡರ್.

ವಿಶೇಷ ಪ್ರಶಸ್ತಿ: ಸುಶೀಲೇಂದ್ರ ಸೌದಾಗರ್, ಅಜೀಜ್ ಮಸ್ಕಿ, ಅನಂತರಾಮು ಸಂಕ್ಲಾಪುರ, ಸುಶೀಲೇಂದ್ರ ನಾಯಕ್, ಹನುಮೇಶ್ ಯಾವಗಲ್, ಆದಿನಾರಾಯಣ, ರವೀಂದ್ರ ಸುರೇಶ್ ದೇಶಮುಖ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT