ಬೆಂಗಳೂರು: ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆ ವೇಳೆ ಪ್ರಯಾಣಿಕರೊಬ್ಬರ ₹10 ಸಾವಿರ ಮೌಲ್ಯದ ವಾಚ್ ಅನ್ನು ಕಳ್ಳತನ ಮಾಡಲಾಗಿದೆ.

ಈ ಸಂಬಂಧ ನೇಹಾ ಕುಶ್ವಾ ಅವರು ಬಿಐಎಎಲ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

‘ಬೆಂಗಳೂರಿನಿಂದ ಗ್ವಾಲಿಯರ್ಗೆ ಏರ್ ಇಂಡಿಯಾ ವಿಮಾನದ ಮೂಲಕ ಪ್ರಯಾಣಿಸಲು ಕೆಐಎಎಲ್ನ ಟರ್ಮಿನಲ್ 2ಕ್ಕೆ ತೆರಳಿ ಭದ್ರತಾ ತಪಾಸಣೆಗೆಂದು ಕೈಗಡಿಯಾರವನ್ನು ಟ್ರೇನಲ್ಲಿ ಇಟ್ಟಿದ್ದೆ. ಭದ್ರತಾ ತಪಾಸಣೆ ಮುಗಿಸಿಕೊಂಡು ತೆರಳುವಾಗ ವಾಚ್ ತೆಗೆದುಕೊಳ್ಳುವುದನ್ನು ಮರೆತಿದ್ದೆ. ಅಲ್ಲಿಗೆ ಬಂದಿದ್ದ ಉಷಾ ಗಂಗಾಧರ್ ಎಂಬುವವರು ವಾಚ್ ತೆಗೆದುಕೊಂಡು ಹೋಗಿದ್ದಾರೆ’ ಎಂದು ನೇಹಾ ಅವರು ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗತ್ತಿದೆ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.