ಬುಧವಾರ, ಮೇ 12, 2021
25 °C

ಸುನೀಶ್ ಹೆಗ್ಡೆ ವಿರುದ್ಧ ಅಪಹರಣ ಪ್ರಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಡ್ರಗ್ಸ್ ಮಾರಾಟ ಜಾಲ ಪ್ರಕರಣದಲ್ಲಿ ಸಿಸಿಬಿಯಿಂದ ಬಂಧನಕ್ಕೆ ಒಳಗಾಗಿರುವ ಆರೋಪಿ ಸುನೀಶ್ ಹೆಗ್ಡೆ ವಿರುದ್ಧ ಜಯನಗರ ಠಾಣೆಯಲ್ಲಿ  ಅಪಹರಣ ಪ್ರಕರಣ ದಾಖಲಾಗಿದೆ. 

ಇದೇ ಪ್ರಕರಣದಲ್ಲಿ ಬಂಧಿಸಿರುವ ಹ್ಯಾಕರ್ ಶ್ರೀಕಿ ಸ್ನೇಹಿತ ಎನ್ನಲಾದ ಶಶಾಂಕ್‍ನ ಜಯನಗರದ ಮನೆಗೆ ನುಗ್ಗಿದ್ದ ಸುನೀಶ್, ಶಶಾಂಕ್‍ನನ್ನು ಅಪಹರಿಸಿ ಹಲ್ಲೆ ನಡೆಸಿದ್ದ. ಶಶಾಂಕ್‌ ನೀಡಿರುವ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ಹಲವಾರು ವೆಬ್‌ಸೈಟ್‌, ಆ್ಯಪ್‌ಗಳನ್ನು ಹ್ಯಾಕ್‌ ಮಾಡುತ್ತಿದ್ದ ಆರೋಪಿ ಶ್ರೀಕಿ, ಹ್ಯಾಕ್‌ ಮಾಡಿಕೊಡುವುದಾಗಿ ಸುನೀಶ್‌ನಿಂದ ₹50 ಲಕ್ಷ ಪಡೆದಿದ್ದ. ಆದರೆ, ಶ್ರೀಕಿ ಕೆಲಸ ಮಾಡಿಕೊಡದೆ ತಲೆಮರಿಸಿಕೊಂಡಿದ್ದ. ಇದರಿಂದ ಕುಪಿತಗೊಂಡು ಆತನ ಸ್ನೇಹಿತನಾಗಿದ್ದ ಶಶಾಂಕ್ ಮೇಲೆ ಹಲ್ಲೆ ಮಾಡಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು