ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರೇ ದಿನದಲ್ಲಿ ಕಿತ್ತು ಹೋದ ಟಾರ್‌: ಕೊಮ್ಮಘಟ್ಟ ರಸ್ತೆ ಗುಂಡಿಗೆ ಮತ್ತೆ ತೇಪೆ

ಮೂರೇ ದಿನದಲ್ಲಿ ಕಿತ್ತು ಹೋದ ಟಾರ್‌ ರೋಡ್‌ l ವಿವರಣೆ ಕೇಳಿದ ಪ್ರಧಾನಿ ಕಚೇರಿ
Last Updated 24 ಜೂನ್ 2022, 20:36 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಭೇಟಿಗಾಗಿ ಅಭಿವೃದ್ಧಿಪಡಿಸಿದ್ದ ರಸ್ತೆ ಮೂರೇ ದಿನದಲ್ಲಿ ಕಿತ್ತುಹೋಗಿದೆ ಎಂಬ ಟ್ವೀಟ್‌ ಆಧರಿಸಿ ಪ್ರಧಾನಿ ಕಚೇರಿಯಿಂದ ವಿವರಣೆ ಕೇಳಿರುವ ಗುಂಡಿಗೆ ಈಗ ಮತ್ತೆ ತೇಪೆ ಹಾಕಲಾಗಿದೆ.

ಕೊಮ್ಮಘಟ್ಟದಿಂದ ಮಾಗಡಿ ರಸ್ತೆಗೆ ಸಂಪರ್ಕ ಕಲ್ಪಿಸುವ 100 ಅಡಿ ಲಿಂಕ್ ರಸ್ತೆಯಲ್ಲಿ ಈ ಗುಂಡಿ ಬಿದ್ದಿತ್ತು. ಮೋದಿ ಅವರು ಭಾಗವಹಿಸಿದ್ದ ಕಾರ್ಯಕ್ರಮ ನಡೆದ ಸುಮಾರು 500 ಮೀಟರ್ ದೂರದಲ್ಲಿ ಗುಂಡಿ ನಿರ್ಮಾಣವಾಗಿತ್ತು.

ಕಾವೇರಿ ಕುಡಿಯುವ ನೀರು ಸರಬರಾಜು 4ನೇ ಹಂತದ ಯೋಜನೆಯಡಿ ನೈಸ್ ರಸ್ತೆ ಜಂಕ್ಷನ್ ಸಮೀಪದ ಹೊಸ ಬೈರೋಹಳ್ಳಿ ಬಳಿ ನಿರ್ಮಾಣ ಆಗಲಿರುವ 25 ಲಕ್ಷ ಲೀಟರ್ ಸಾಮರ್ಥ್ಯದ ಜಲಸಂಗ್ರಹ ಕೇಂದ್ರದಿಂದ ಯಲಹಂಕ ತನಕ 65 ಕಿಲೋ ಮೀಟರ್‌ ಉದ್ದದ ಪೈಪ್‌ಲೈನ್ ಇದೇ ಮಾರ್ಗದಲ್ಲಿ ಹಾದುಹೋಗಿದೆ.

‘ಈ ಪೈಪ್‌ಲೈನ್ ಹಾದುಹೋಗಿರುವ ಒಂದು ಜಾಗದಲ್ಲಿ ನೀರು ಸೋರಿಕೆ ಉಂಟಾಗಿದ್ದು, ರಸ್ತೆಯಲ್ಲಿ ಗುಂಡಿ ಬಿದ್ದಿತ್ತು. ಪ್ರಧಾನ ಮಂತ್ರಿ ಬರುವ ಕಾರ್ಯಕ್ರಮ ಇದ್ದಿದ್ದರಿಂದ ಈ ಗುಂಡಿಗೆ ತೆಪೆ ಹಾಕಲಾಗಿತ್ತು. ಕಾರ್ಯಕ್ರಮ ಮುಗಿದ ಬಳಿಕ ನೀರು ಸೋರಿಕೆಗೆ ಕಾರಣ ಹುಡುಕಿ ಸರಿಪಡಿಸುವ ಕಾಮಗಾರಿ ಆರಂಭಿಸಲಾಗಿತ್ತು’ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಿದ್ದಾರೆ.

ಕೊಮ್ಮಘಟ್ಟದಿಂದ ಮಾಗಡಿ ರಸ್ತೆಗೆ ಸಂಪರ್ಕ ಕಲ್ಪಿಸುವ 100 ಅಡಿ ರಸ್ತೆ ಸಂಪೂರ್ಣ ಹಾಳಾಗಿ ವಾಹನ ಸಂಚಾರ ದುಸ್ತರವಾಗಿತ್ತು. ಕಾರ್ಯಕ್ರಮ ಮುಗಿದ ಬಳಿಕವೂ ಈ ರಸ್ತೆಯಲ್ಲಿ ಡಾಂಬರ್ ಹಾಕುವ ಕಾಮಗಾರಿ ಮುಂದುವರಿದಿದೆ. ‘ಪ್ರಧಾನಿ ಬಂದು ಹೋದ ಕಾರಣಕ್ಕಾದರೂ ನಮ್ಮ ರಸ್ತೆಗಳು ಅಭಿವೃದ್ಧಿ ಕಂಡಿರುವುದು ಸಂತಸದ ವಿಷಯ’ ಎನ್ನುತ್ತಾರೆ ಕೊಮ್ಮಘಟ್ಟದ ನಿವಾಸಿಗಳು.

ಗುಂಡಿ ಬಿದ್ದಿರುವುದು ಹೊಸ ರಸ್ತೆಯಲ್ಲಿ ಅಲ್ಲ: ಬಿಬಿಎಂಪಿ ವರದಿ

‘ಕೊಮ್ಮಘಟ್ಟದಲ್ಲಿ ಗುಂಡಿ ಬಿದ್ದಿದೆ ಎಂದು ಹೇಳಲಾಗುತ್ತಿರುವ ರಸ್ತೆ ಪ್ರಧಾನಿ ಬಂದ ಕಾರಣಕ್ಕೆ ಅಭಿವೃದ್ಧಿಪಡಿಸಿದ ರಸ್ತೆಗಳ ಪಟ್ಟಿಯಲ್ಲಿ ಇರಲಿಲ್ಲ. ಇದನ್ನು 2021ರ ನವೆಂಬರ್‌ನಲ್ಲೇ ಅಭಿವೃದ್ಧಿಪಡಿಸಲಾಗಿತ್ತು’ ಎಂದು ರಾಜ್ಯ ಸರ್ಕಾರಕ್ಕೆ ಬಿಬಿಎಂಪಿ ವರದಿ ಸಲ್ಲಿಸಿದೆ.

ಕೊಮ್ಮಘಟ್ಟದಲ್ಲಿ ಗುಂಡಿ ಬಿದ್ದಿರುವ ರಸ್ತೆ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ವಿಶೇಷ ಆಯುಕ್ತ(ಯೋಜನೆ) ಎನ್‌.ಬಿ. ರವೀಂದ್ರ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಆ ಸಮಿತಿ ವರದಿ ಸಲ್ಲಿಸಿದೆ ಎಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿರುವ ವಿವರಣೆಯಲ್ಲಿ ತಿಳಿಸಿದ್ದಾರೆ.

‘ನಿರ್ದಿಷ್ಟ ಜಾಗದಲ್ಲಿ ರಸ್ತೆ ಕುಸಿದು ಗುಂಡಿಯಾಗಿರುವ ಬಗ್ಗೆ ಮೇ ತಿಂಗಳಿನಲ್ಲಿ ವರದಿಯಾಗಿತ್ತು. ಪೈಪ್‌ಲೈನ್ ಸೋರಿಕೆ ನಿಂತಿದ್ದರಿಂದ ಬಿಬಿಎಂಪಿಯಿಂದ ಜೂನ್ 12ರಂದು ಗುಂಡಿ ಮುಚ್ಚಲಾಗಿತ್ತು. ಆದರೆ, ಅದು ಮತ್ತೆ ಕುಸಿದಿತ್ತು. ಅದನ್ನು ಅಗೆದಾಗ ಹಳೆಯ ಪೈಪ್‌ಲೈನ್‌ನಲ್ಲಿ ಸೋರಿಕೆ ಕಂಡು ಬಂದಿತ್ತು’ ಎಂದು ವಿವರಿಸಿದ್ದಾರೆ.

‘ಎಲ್ಲವನ್ನೂ ಸರಿಪಡಿಸಿ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಪ್ರಧಾನ ಮಂತ್ರಿಯವರು ಬರುವ ಕಾರಣಕ್ಕೆ ₹6 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ ರಸ್ತೆಗಳ ಪಟ್ಟಿಯಲ್ಲಿ ಈ ರಸ್ತೆ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

‘ಜ್ಞಾನಭಾರತಿ ಆವರಣದ ಮರಿಯಪ್ಪನಪಾಳ್ಯದಲ್ಲಿ ಗುಂಡಿ ಬಿದ್ದಿರುವ ರಸ್ತೆಗಳೂ ಪ್ರಧಾನಿ ಹಾದು ಹೋಗುವ ರಸ್ತೆಗಳ ಪಟ್ಟಿಯಲ್ಲಿ ಇರಲಿಲ್ಲ. ಟ್ವೀಟ್‌ಗಳನ್ನು ಆಧರಿಸಿ ಪ್ರಧಾನ ಮಂತ್ರಿ ಕಚೇರಿಯಿಂದ ವಿವರಣೆ ಕೇಳಿರುವುದರಿಂದ ತನಿಖೆ ನಡೆಸಿ ವರದಿ ನೀಡಲು ತಿಳಿಸಿದ್ದೇನೆ. ವರದಿ ಬಂದ ಕೂಡಲೇ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಮೂಲಕ ಪ್ರಧಾನಿ ಕಚೇರಿಗೆ ವಿವರಣೆ ಸಲ್ಲಿಕೆಯಾಗಲಿದೆ’ ಎಂದು ತುಷಾರ್‌ ಗಿರಿನಾಥ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಕಳಪೆ ಕಾಮಗಾರಿ ಎಂಬುದು ಖಚಿತವಾದರೆ ಗುತ್ತಿಗೆದಾರರು ಮತ್ತು ಪಾಲಿಕೆ ಎಂಜಿನಿಯರ್‌ಗಳ
ವಿರುದ್ಧ ಕ್ರಮ ಜರುಗಿಸಲಾಗುವುದು. ವರದಿ ಬರುವ ತನಕ ಏನನ್ನೂ ಹೇಳಲು ಸಾಧ್ಯವಿಲ್ಲ’ ಎಂದು
ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT