ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದ್ದು, ಈ ಕಾರಣದಿಂದ ಈವರೆಗೆ ₹5.50 ಕೋಟಿ ನಷ್ಟವಾಗಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಹೇಳಿದೆ.

ಈವರೆಗೆ ಒಟ್ಟು 818 ಬಸ್‌ಗಳ ಸಂಚಾರ ರದ್ದು ಮಾಡಲಾಗಿದ್ದು, ಆನ್‌ಲೈನ್‌ನಲ್ಲಿ ಟಿಕೆಟ್ ಕಾಯ್ದಿರಿಸುವವರ ಸಂಖ್ಯೆ ದಿನಕ್ಕೆ 5,500ಕ್ಕೆ ಕುಸಿದಿದೆ. ಈ ಮೊದಲು ದಿನಕ್ಕೆ 22 ಸಾವಿರದಿಂದ 23 ಸಾವಿರದವರೆಗೆ ಇರುತ್ತಿತ್ತು ಎಂದು ನಿಗಮ ತಿಳಿಸಿದೆ.

ಊಟಿ ಬಸ್‌ಗೆ ನಿರ್ಬಂಧ

ಊಟಿಯಿಂದ ನಗರ ಪ್ರವೇಶಿಸುವ ಬಸ್‌ಗಳಿಗೆ ನಿರ್ಬಂಧ ವಿಧಿಸಲಾಗಿದೆ. ತಕ್ಷಣದಿಂದ ಈ ನಿಯಮ ಜಾರಿಗೆ ಬಂದಿದ್ದು, ಮಾರ್ಚ್ 31ರವರೆಗೆ ಜಾರಿಯಲ್ಲಿರಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಮುನ್ನೆಚ್ಚರಿಕೆ ಕ್ರಮಗಳು

* ಬಸ್‌ಗಳ ಸ್ವಚ್ಛತಾ ಕಾರ್ಯವನ್ನು ಮತ್ತಷ್ಟು ಪರಿಣಾಮಕಾರಿಗೊಳಿಸಲಾಗಿದೆ

* ಘಟಕಗಳಲ್ಲಿ ಸೋಂಕು ನಿವಾರಕಗಳನ್ನು ಇಡಲು ಸೂಚಿಸಲಾಗಿದೆ

* ಐಷಾರಾಮಿ ಬಸ್‌ಗಳಲ್ಲಿ ಹಾಸಿಗೆ ನೀಡುವ ಸೌಲಭ್ಯ ರದ್ದುಗೊಳಿಸಲಾಗಿದೆ

* ನಿಗಮದ ಸಿಬ್ಬಂದಿಗೆ ಮುಖಗವಸು ವಿತರಿಸಲು ಸೂಚಿಸಲಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.