ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಮೇಳ: ಮಕ್ಕಳ ಬೈಕ್‌ ಆವಿಷ್ಕಾರ- ಕೆಜಿಎಫ್‌ನ ಐವರಹಳ್ಳಿಯ ಸುಕುಮಾರ್‌ ಸಾಧನೆ

Last Updated 6 ನವೆಂಬರ್ 2022, 1:31 IST
ಅಕ್ಷರ ಗಾತ್ರ

ಬೆಂಗಳೂರು: ಕೃಷಿ ಮೇಳದಲ್ಲಿ ಪುಟ್ಟ ಬೈಕ್‌ ಎಲ್ಲರ ಗಮನ ಸೆಳೆಯುತ್ತಿದೆ. ಈ ಬೈಕ್ ಅನ್ನು 8 ವರ್ಷದ ಬಾಲಕನೊಬ್ಬ ಓಡಿಸುತ್ತಿದ್ದರೆ, ಎಲ್ಲರೂ ಅದರತ್ತ ದೃಷ್ಟಿ ನೆಟ್ಟಿದ್ದರು. ಅದನ್ನು ಆವಿಷ್ಕರಿಸಿದ್ದು ಕೋಲಾರ ಜಿಲ್ಲೆ ಕೆಜಿಎಫ್‌ನ ಐವರಹಳ್ಳಿಯ ಸುಕುಮಾರ್‌.

ಇವರು ಬಿ.ಇ ಪದವೀಧರರರು. 2012ರಲ್ಲಿ ಎಂಜಿನಿಯರ್ ವೃತ್ತಿಗೆ ವಿದಾಯ ಹೇಳಿ ಯಂತ್ರಗಳ ಆವಿಷ್ಕಾರಕ್ಕೆ ಮುಂದಾದರು. ಕೆಜಿಎಫ್‌ನಲ್ಲಿ ಸಾಯಿ ಅಗ್ರೋಟೆಕ್‌ ಹೆಸರಿನ ಯಂತ್ರೋಪಕರಣ ಅಂಗಡಿ ನಡೆಸುತ್ತಿದ್ದಾರೆ. ತಾವೇ ಆವಿಷ್ಕರಿಸಿದ ಕೃಷಿ ಯಂತ್ರೋಪಕರಣ ಮಾರಾಟ ಮಾಡುತ್ತಾರೆ. ಕೃಷಿಮೇಳಕ್ಕೂ ಅವರು ಯಂತ್ರೋಕರಣ ತಂದಿದ್ದರು.

‘ಪುಟ್ಟ ಬೈಕ್‌ಗೆ ಮರ ಕತ್ತರಿಸುವ ಯಂತ್ರಕ್ಕೆ ಬಳಸುವ ಚೈನ್‌ ಸಾ ಮೋಟರ್‌ ಅಳವಡಿಸಲಾಗಿದೆ. ಥೈವಾನ್‌ನಿಂದ ಬಿಡಿಭಾಗ ತರಿಸಲಾಗಿತ್ತು. ಬೈಕ್‌ಗೆ ₹ 27 ಸಾವಿರ ಬೆಲೆಯಿದೆ. ರಸ್ತೆಗಳಲ್ಲಿ ಓಡಿಸಲು ಅನುಮತಿ ಇಲ್ಲ. ಮನೆಯ ಎದುರು ಹಾಗೂ ಸ್ವಂತ ಜಮೀನಿನಲ್ಲಿ ಮಕ್ಕಳು ಈ ಬೈಕ್‌ ಬಳಸಬಹುದು’ ಎಂದು ಸುಕುಮಾರ್‌ ಹೇಳಿದರು.

ಸದ್ಯಕ್ಕೆ ಎರಡು ಬೈಕ್‌ ಮಾತ್ರ ತಯಾರಿಸಿದ್ದು, ಬೇಕಾದವರು ತಿಳಿಸಿದರೆ ಬೈಕ್‌ ಅನ್ನು ತಯಾರಿಸಿ ಕೊಡಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT