ಮಂಗಳವಾರ, ಅಕ್ಟೋಬರ್ 4, 2022
27 °C

ಕೃಷ್ಣ ಗಾರುಡಿ ಕೃತಿ ರಂಗಭೂಮಿಯ ಚರಿತ್ರೆ: ಕೆ.ವೈ.ನಾರಾಯಣಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕರ್ನಾಟಕದ 60–70ರ ದಶಕದ ರಂಗಭೂಮಿಯ ಚರಿತ್ರೆಯಾಗಿ ರಂಗಕರ್ಮಿ ಎಲ್‌.ಕೃಷ್ಣಪ್ಪ ಅವರ ಅಭಿನಂದನಾ ಗ್ರಂಥ ದಾಖಲಾಗಿದೆ ಎಂದು ನಾಟಕಕಾರ ಕೆ.ವೈ.ನಾರಾಯಣಸ್ವಾಮಿ ಶ್ಲಾಘಿಸಿದರು.

ಪಂಪ ಸಾಂಸ್ಕೃತಿಕ ಮತ್ತು ಸಾಮಾಜಿಕ ಕೇಂದ್ರ ಶುಕ್ರವಾರ ಹಮ್ಮಿಕೊಂಡಿದ್ದ ಎಲ್‌.ಕೃಷ್ಣಪ್ಪ ಅವರ 75ರ ಅಭಿನಂದನಾ ಸಮಾರಂಭದಲ್ಲಿ ಅಭಿನಂದನಾ ಗ್ರಂಥ ‘ಕೃಷ್ಣಗಾರುಡಿ’ ಕುರಿತು ಮಾತನಾಡಿದರು.

ಬಾಲ್ಯದಿಂದಲೇ ರಂಗಭೂಮಿಯತ್ತ ಒಲವು ಬೆಳೆಸಿಕೊಂಡಿದ್ದ ಕೃಷ್ಣಪ್ಪ ಕಷ್ಟದ ಮಧ್ಯೆಯೂ ಶ್ರದ್ಧೆ, ಭಕ್ತಿಯಿಂದ ರಂಗಭೂಮಿಯ ಸೇವೆ ಮಾಡಿದ್ದಾರೆ. ಲಂಕೇಶ್‌ ಅವರಂತಹ ನಾಟಕಕಾರರು ಅವರ ಕುರಿತು ಬರೆದಿರುವುದು ಅವರ ರಂಗಪ್ರವೃತ್ತಿಗೆ ಹಿಡಿದ ಕನ್ನಡಿ. ಕನ್ನಡ ರಂಗಭೂಮಿಯ ಚರಿತ್ರೆಯನ್ನು ಅಧ್ಯಯನ ಮಾಡುವವರಿಗೆ ಗ್ರಂಥ ಒಳ್ಳೆಯ ಮಾಹಿತಿ ಒದಗಿಸಿದೆ ಎಂದರು.

ರಂಗಭೂಮಿಯಲ್ಲಿ ನಾಯಕನಟರಾಗಿ ಮಿಂಚುವ ಆಶಯದಿಂದ ಬಂದ ಕೃಷ್ಣಪ್ಪ ಅವರು ಸಣ್ಣಪುಟ್ಟ ಪಾತ್ರಗಳಿಗೆ ಸೀಮಿತವಾದರೂ, ಮುಂದೆ ನಾಯಕರನ್ನೇ ಹುಟ್ಟುಹಾಕುವಷ್ಟು ನಂಟು ಬೆಳೆಸಿಕೊಂಡರು. ರಂಗಭೂಮಿಗೆ ಹಲವು ಕೊಡುಗೆ ನೀಡಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಹಿತಿ ದೊಡ್ಡರಂಗೇಗೌಡ ಗ್ರಂಥ ಬಿಡುಗಡೆ ಮಾಡಿದರು. ಸಾಹಿತಿ ಕೆ.ಮರುಳಸಿದ್ದಪ್ಪ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಬಿ.ವಿ.ರಾಜಾರಾಂ, ಅಭಿನಂದನಾ ಸಮಿತಿ ಉಪಾಧ್ಯಕ್ಷ  ಬಿ.ಆರ್. ಜಯರಾಮರಾಜೇ ಅರಸು, ನಟಿ ಶ್ವೇತಾ ಶ್ರೀವಾಸ್ತವ್, ರಂಗಕರ್ಮಿ ಚಂದ್ರಕುಮಾರ್ ಸಿಂಗ್, ಕಲಬುರಗಿ ರಂಗಾಯಣ ನಿರ್ದೇಶಕ ಪ್ರಭಾಕರ್ ಜೋಶಿ, ಅಭಿನಂದನಾ ಗ್ರಂಥದ ಸಂಪಾದಕ ಆರ್.ವೆಂಕಟರಾಜು, ಕಲಾವಿದ ಶಂಕರ್ ಭಟ್ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು