ಪೀಣ್ಯ ದಾಸರಹಳ್ಳಿ: ‘ಕ್ಷೇತ್ರದ ಕೆರೆಗಳ ಅಭಿವೃದ್ಧಿಗಾಗಿ ಆದ್ಯತೆ ನೀಡುತ್ತಿದ್ದು, ಕೆರೆಯ ಒತ್ತುವರಿಯನ್ನು ತಡೆಯಲು ತಂತಿಬೇಲಿ ಹಾಕಲಾಗುತ್ತಿದೆ’ ಎಂದು ಶಾಸಕ ಎಸ್. ಮುನಿರಾಜು ತಿಳಿಸಿದರು.

ಕ್ಷೇತ್ರದ ನೆಲಗದರನಹಳ್ಳಿ, ಶಿವಪುರ ಮತ್ತು ಅಬ್ಬಿಗೆರೆ ಕೆರೆಗಳ ಸುತ್ತ ತಂತಿ ಬೇಲಿ ಅಳವಡಿಕೆ ಮತ್ತು ಪಾದಚಾರಿ ಮಾರ್ಗ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

‘ಈಗಾಗಲೇ ಆಗಿರುವ ಕೆರೆಯ ಒತ್ತುವರಿಯನ್ನು ಅಳತೆ ಮಾಡಿಸಿ ಸೂಕ್ತ ಕಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮುಂದೆ ಕೆರೆಯ ಜಾಗ ಒತ್ತುವರಿಯಾಗದಂತೆ ಸುತ್ತಲೂ ತಂತಿಬೇಲಿ ಅಳವಡಿಸಿ, ಭದ್ರತೆ ಒದಗಿಸಲಾಗುತ್ತಿದೆ. ಸಾರ್ವಜನಿಕರ ಹಿತ ದೃಷ್ಟಿಯಿಂದ ಕೆರೆಯ ಸುತ್ತಲೂ ವಾಯುವಿಹಾರಕ್ಕೆ ಸೂಕ್ತ ನಡಿಗೆ ಪಥ ನಿರ್ಮಿಸಲಾಗುತ್ತಿದೆ’ ಎಂದು ತಿಳಿಸಿದರು.

ಕಮ್ಮಗೊಂಡನಹಳ್ಳಿಯ ಕೆರೆ ಅಭಿವೃದ್ಧಿಯನ್ನು ಅಧಿಕಾರಿಗಳೊಂದಿಗೆ ಮುನಿರಾಜು ಪರಿಶೀಲಿಸಿದರು. ಎಂಜಿನಿಯರ್ಗಳಾದ ವೆಂಕಟೇಶ್, ಶಿಲ್ಪ, ಪ್ರವೀಣ್, ನರಸಿಂಹಮೂರ್ತಿ, ಸ್ಥಳೀಯ ಮುಖಂಡರಾದ ನಿಸರ್ಗ ಕೆಂಪರಾಜು, ಮೇದರಹಳ್ಳಿ ಸೋಮಶೇಖರ್, ರಮೇಶ್ ಯಾದವ್, ಜಬ್ಬಾರ್, ಲಾರಿ ಮಂಜಣ್ಣ, ಶಬರಿ ಮಂಜುನಾಥ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.