ಬೆಂಗಳೂರು: ‘ಕಸ ಎತ್ತಿಕೊಂಡು ಹೋಗುತ್ತಾರೆ ಎಂದು ಉಡಾಫೆಯಿಂದ ನಗರದಲ್ಲಿ ಜನರು ಎಲ್ಲೆಂದರಲ್ಲಿ ಕಸ ಬಿಸಾಕುತ್ತಿದ್ದಾರೆ. ಕಸ ಬಿಸಾಡುವವರ ಕೈಯಲ್ಲಿ ಕಸ ಎತ್ತುವ ಕೆಲಸ ಮಾಡಿಸಬೇಕು ಆಗ ಅದರ ನೋವು ಕಷ್ಟ ತಿಳಿಯುತ್ತದೆ’ ಎಂದು ನಟಿ ಲಕ್ಷ್ಮೀ ತಿಳಿಸಿದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೌಕರರ ಸಹಕಾರ ಸಂಘ ನಿಯಮಿತ 112ನೇ ಸಂಸ್ಥಾಪನಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ, ಸಾಲುಮರದ ತಿಮ್ಮಕ್ಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಪೌರ ಕಾರ್ಮಿಕರು ಎಷ್ಟು ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಯಾರೂ ಕಸ ಬಿಸಾಡಬೇಡಿ. ಎಲ್ಲರು ನಿಸ್ವಾರ್ಥದಿಂದ, ಶುದ್ದ ಮನಸ್ಸಿನಿಂದ ಬಾಳಬೇಕು’ ಎಂದು ಸಲಹೆ ನೀಡಿದರು.

‘ಸೌಂದರ್ಯ ಮುಖ್ಯವಲ್ಲ, ಮನಸ್ಸು ಸುಂದರವಾಗಿರಬೇಕು. ಇನ್ನೊಬ್ಬರಗೊಸ್ಕರ ನಾವು ಜೀವನ ಮಾಡಬಾರದು. ಪ್ರತಿಯೊಂದು ಮಕ್ಕಳಿಗೆ ತಾಯಿ ರಕ್ತ ಕುಡಿಸಿ ಬೆಳಸಿದ್ದಾಳೆ, ಧೈರ್ಯವಾಗಿ ಬದುಕು ಸಾಗಿಸಿ. ಜೀವನದಲ್ಲಿ ನಗು ಎಂಬುದು ತಿಳಿದಿರುವುದು ಮನುಷ್ಯರಿಗೆ ಮಾತ್ರ, ಜನರು ನಗುವುದನ್ನ ಮರೆತ್ತಿದ್ದಾರೆ. ಪ್ರಕೃತಿ ದೇವರು ಎಂಬುದು ಮರೆತ್ತಿದ್ದಾರೆ’ ಎಂದರು.

ಸಹಕಾರ ಸಂಘದ ಅಧ್ಯಕ್ಷ ಎ.ಅಮೃತ್ ರಾಜ್ ಮಾತನಾಡಿ, ‘ನಮ್ಮ ಸಹಕಾರ ಸಂಘವು 112 ವರ್ಷದ ಇತಿಹಾಸವಿರುವ ಸಂಘವಾಗಿದೆ. ಒಬ್ಬರಿಂದ, ಇನ್ನೊಬ್ಬರಿಗೆ ಸಹಕಾರ ನೀಡುವ ತತ್ವದ ಆಧಾರದ ಮೇಲೆ ನಮ್ಮ ಸಹಕಾರ ಸಂಘವು ಅಧಿಕಾರಿ, ನೌಕರರ ಏಳಿಗೆಗಾಗಿ ಶ್ರಮಿಸುತ್ತಿದೆ. ಕರ್ನಾಟಕದಲ್ಲಿ ಮೊದಲ ಬಾರಿಗೆ ಸಾಲು ಮರದ ತಿಮ್ಮಕ್ಕನವರ ಸವಿಸ್ಮರಣೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ’ ಎಂದರು.

ಮುಖ್ಯ ಆರೋಗ್ಯಧಿಕಾರಿ ಡಾ.ನಿರ್ಮಲ ಬುಗ್ಗಿ, ಆರೋಗ್ಯಧಿಕಾರಿ ಡಾ.ಎ.ಎಸ್.ಬಾಲಸುಂದರ್, ಕಂದಾಯದ ಜಂಟಿ ಆಯುಕ್ತೆ ಲಕ್ಷ್ಮಿದೇವಿ ಆರ್, ಮುಖ್ಯ ಎಂಜಿನಿಯರ್ ಬಸವರಾಜ್ ಎಸ್.ಕಬಾಡೆ, ಉಪ ಕಾನೂನು ಸಲಹೆಗಾರ ಮುನಿರಾಜು.ಎಂ., ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಚ್.ಕೆ.ತಿಪ್ಪೇಶ್, ಸಹ ಕಂದಾಯ ಅಧಿಕಾರಿ ಎನ್.ಕೃಷ್ಣ, ವಿಷಯ ಪರಿವೀಕ್ಷಕ ಕುಮಾರ್, ಕಂದಾಯ ಪರಿವೀಕ್ಷಕ ಎಸ್.ಆರ್ಮುಗಂ, ಚಾಲಕ ಸಂಪತ್ ಕುಮಾರ್ ಅವರಿಗೆ ಸಾಲು ಮರದ ತಿಮ್ಮಕ್ಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಜಿಬಿಎ– ನಗರ ಪಾಲಿಕೆಗಳ ಸಾಧಕ ನೌಕರರಿಗೆ ಸಾಲು ಮರದ ತಿಮ್ಮಕ್ಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಟಿ ವಿನಯ ಪ್ರಸಾದ್, ಸಹಾಯಕ ಆಯುಕ್ತ ಗಿರೀಶ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ, ಸಹಕಾರಿ ಸಂಘದ ಉಪಾಧ್ಯಕ್ಷ ಕೆ.ಜಿ.ರವಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.