ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮಿ ಮಕ್ಕಳ ಆರೋಗ್ಯ ಕೇಂದ್ರ ಉದ್ಘಾಟನೆ

ಕ್ಯಾನ್ಸರ್‌ಪೀಡಿತ ಬಡಮಕ್ಕಳಿಗಾಗಿ ಗಾಂಧಿನಗರದಲ್ಲಿ ಚಿಕಿತ್ಸಾ ಕೇಂದ್ರ
Last Updated 8 ಡಿಸೆಂಬರ್ 2019, 19:04 IST
ಅಕ್ಷರ ಗಾತ್ರ

ಬೆಂಗಳೂರು: ಕ್ಯಾನ್ಸರ್‌ನಿಂದ ಬಳಲುತ್ತಿ ರುವ ಗ್ರಾಮೀಣ ಪ್ರದೇಶದ ಬಡ ಮಕ್ಕಳ ಚಿಕಿತ್ಸೆ ಮತ್ತು ಆರೈಕೆಗಾಗಿ ಶ್ರೀಶಂಕರ ಕ್ಯಾನ್ಸರ್‌ ಪ್ರತಿಷ್ಠಾನವು ‘ಲಕ್ಷ್ಮಿ ಮಕ್ಕಳ ಆರೋಗ್ಯ ಕೇಂದ್ರ’ವನ್ನು ಗಾಂಧಿನಗರದಲ್ಲಿ ಆರಂಭಿಸಿದೆ.

ಮೂರು ಅಂತಸ್ತಿನ ಸುಸಜ್ಜಿತ ಕಟ್ಟಡ ವನ್ನು ಉಪಮುಖ್ಯಮಂತ್ರಿ ಸಿ.ಎನ್.ಅಶ್ವತ್ಥನಾರಾಯಣ ಹಾಗೂ ಕಾಂಗ್ರೆಸ್‌ ಮುಖಂಡ ಆರ್‌.ವಿ.ದೇಶಪಾಂಡೆ ಭಾನುವಾರ ಉದ್ಘಾಟಿಸಿದರು.

‘ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಕ್ಕಳಿಗೆ ಚಿಕಿತ್ಸೆ ನೀಡಲು ಎಲ್ಲ ಆಧುನಿಕ ವ್ಯವಸ್ಥೆಗಳು ಇಲ್ಲಿವೆ. ಸರ್ಕಾರದಿಂದ ಇಂತಹ ಆಧುನಿಕ ಚಿಕಿತ್ಸಾ ಕೇಂದ್ರ ನಿರ್ಮಾಣ ಮಾಡುವುದು ಕಷ್ಟ. ದಾನಿಗಳ ನೆರವಿನಿಂದ ಇಂತಹ ಚಿಕಿತ್ಸಾ ಕೇಂದ್ರ ನಿರ್ಮಿಸಿರುವುದು ಶ್ಲಾಘನೀಯ’ ಎಂದು ಅಶ್ವತ್ಥ ನಾರಾಯಣ ತಿಳಿಸಿದರು.

ಆರ್.ವಿ. ದೇಶಪಾಂಡೆ,‘ಆರ್ಥಿಕ ಸಮಸ್ಯೆಯಿಂದಾಗಿ ಅನೇಕ ಮಕ್ಕಳು ಕ್ಯಾನ್ಸರ್‌ ಚಿಕಿತ್ಸೆಯಿಂದ ವಂಚಿತರಾಗಿ ದ್ದಾರೆ. ಇಬ್ಬರು ಕ್ಯಾನ್ಸರ್‌ಪೀಡಿತ ಮಕ್ಕಳನ್ನು ದತ್ತು ಪಡೆದು, ಅವರ ಚಿಕಿತ್ಸೆ ವೆಚ್ಚ ಭರಿಸಲಾಗುವುದು’ ಎಂದರು.

‘ಕ್ಯಾನ್ಸರ್‌ ಚಿಕಿತ್ಸೆಗೆ ಆರು ತಿಂಗಳಿಂದ ಒಂದು ವರ್ಷದವರೆಗೂ ಸಮಯ ಬೇಕು. ಹಾಗಾಗಿ ಗ್ರಾಮೀಣ ಪ್ರದೇಶದ ರೋಗಿಗಳ ಪೋಷಕರು ತಿಂಗಳುಗಟ್ಟಲೆ ಆಸ್ಪತ್ರೆಗಳಲ್ಲಿ ಉಳಿಯಲು ವ್ಯವಸ್ಥೆ ಕಲ್ಪಿಸ ಲಾಗಿದೆ. ಚಿಕಿತ್ಸಾ ಕೇಂದ್ರದಲ್ಲಿ ಒಟ್ಟು 35 ಕೊಠಡಿಗಳಿವೆ. ಪ್ರತಿ ಅಂತಸ್ತಿನಲ್ಲಿ ಅಡುಗೆಮನೆ ಒದಗಿಸಲಾಗಿದೆ. ಈ ಸೌಲಭ್ಯಗಳೆಲ್ಲವೂ ಉಚಿತ’ ಎಂದುಶ್ರೀಶಂಕರ ಕ್ಯಾನ್ಸರ್‌ ಪ್ರತಿಷ್ಠಾನದ ಅಧ್ಯಕ್ಷ
ಡಾ.ಬಿ.ಎಸ್‌.ಸತೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತವಾಗಿ ಅಥವಾ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಲಾಗುವುದು. ಮಕ್ಕಳು ಮನೆಯನ್ನು ಹೋಲುವ ವಾತಾವರಣದಲ್ಲಿ ಆರೈಕೆ ಪಡೆಯಲಿದ್ದಾರೆ. ಆಸ್ಪತ್ರೆಯಿಂದಲೇ ಸಾರಿಗೆ ವ್ಯವಸ್ಥೆ ಕಲ್ಪಿಸ
ಲಾಗುತ್ತದೆ’ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT