ಬೆಂಗಳೂರು: ಹಸಿರು ಹೊದ್ದು ನಿಂತ ಸಸ್ಯಕಾಶಿ ಲಾಲ್‌ಬಾಗ್‌ನ ಧನ್ವಂತರಿ ವನದ ಹತ್ತಿರ ಅಪರೂಪದ ಜಲ ಸಸ್ಯ ಹಾಗೂ ಜೌಗು ಸಸ್ಯಗಳ ‘ಸಂಕನ್ ಉದ್ಯಾನ’ ರೂಪುಗೊಳ್ಳುತ್ತಿದೆ.

ರಾಜ್ಯ ತೋಟಗಾರಿಕೆ ಇಲಾಖೆ ಇಲ್ಲಿ, ಫೆ.5ರಿಂದ ಇಲ್ಲಿ ಗಿಡನೆಡುವ ಪ್ರಕ್ರಿಯೆಯನ್ನು ಆರಂಭಿಸಲಿದೆ.ಬೊಟಾನಿಕಲ್, ಬೊನ್ಸಾಯ್, ಟ್ರೋಪಿಕಲ್ ಉದ್ಯಾನಗಳ ಸಾಲಿಗೆ ಇದು ನಾಲ್ಕನೆಯ ಉದ್ಯಾನವಾಗಿ ಸಸ್ಯಕಾಶಿಯ ಒಡಲನ್ನು ಸೇರಲಿದೆ.ನೆಲಮಟ್ಟದಿಂದ ಕೆಳಗೆ ಈ ಉದ್ಯಾನವನ್ನು ನಿರ್ಮಿಸುತ್ತಿರುವುದರಿಂದ ಇದನ್ನು ‘ಸಂಕನ್ ಉದ್ಯಾನ’ ಎಂದು ಕರೆಯಲಾಗುತ್ತದೆ. ಇದು ಸಂಪೂರ್ಣ ತೇವಾಂಶ ಭರಿತವಾಗಿದ್ದು, ಇಲ್ಲಿನ ವಾತಾವರಣವನ್ನು ಮತ್ತಷ್ಟು ತಂಪುಗೊಳಿಸಲಿದೆ.

ಸುಮಾರು 2 ಎಕರೆ ಪ್ರದೇಶದಲ್ಲಿ ರೂಪುಗೊಳ್ಳಲಿರುವ ಸಂಕನ್ ಉದ್ಯಾನ ಹಸಿರು ಹುಲ್ಲುಹಾಸು, ಕಲ್ಲಿನ ಆಸನ, ಕಣ್ಸೆಳೆವ ತಾವರೆ ಕೊಳ, ಪುಟ್ಟ ಕಲ್ಯಾಣಿಯಿಂದ ಕಂಗೊಳಿಸಲಿದೆ.

ಲಾಲ್‌ಬಾಗ್ ಕೆರೆ ಹೊರತುಪಡಿಸಿ, ಉದ್ಯಾನದಲ್ಲಿ ಎಲ್ಲಿಯೂ ನೀರು ನಿಲ್ಲಿಸಲು ಅವಕಾಶವಿಲ್ಲ. ಹಾಗಾಗಿ, ತೇವಾಂಶ ಭರಿತ ವಾತಾವರಣ ರೂಪಿಸಲು ಈ ಉದ್ಯಾನನಿರ್ಮಿಸಲಾಗುತ್ತಿದೆ. ಸುಮಾರು 150 ಬಗೆಯ ಸಸ್ಯಗಳನ್ನು ಇದರಲ್ಲಿ ಬೆಳೆಸಲಾಗುತ್ತದೆ.

‘2017 ರಲ್ಲಿ ಉದ್ಯಾನದ ಕಾಮಗಾರಿ ಶುರುವಾಗಿದ್ದು, 2018ರ ಜನವರಿಗೆ ಸಿವಿಲ್ ಕಾಮಗಾರಿಗಳು ಪೂರ್ಣಗೊಂಡಿವೆ’ ಎಂದು ಲಾಲ್‌ಬಾಗ್‌ನ ಉಪ ನಿರ್ದೇಶಕ ಚಂದ್ರಶೇಖರ್ ’ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಇಲ್ಲಿನ ಸಸ್ಯತಜ್ಞರ ತಂಡ ಪ್ರತಿ ವರ್ಷವೂ ಮಳೆಗಾಲದಲ್ಲಿ ಪಶ್ಚಿಮ ಘಟ್ಟಕ್ಕೆ ಭೇಟಿ ನೀಡುತ್ತದೆ. ಅಲ್ಲಿನ ಅಪರೂಪದ ಸಸ್ಯಗಳನ್ನು ತಂದು ಲಾಲ್‌ಬಾಗ್‌ನಲ್ಲಿ ಬೆಳೆಸುವುದು ಈ ಪ್ರವಾಸದ ಉದ್ದೇಶ. ಕಳೆದ ವರ್ಷವೂ ಪ್ರವಾಸ ಕೈಗೊಳ್ಳಲಾಗಿತ್ತು’ ಎಂದರು.

‘ಒಂದು ವರ್ಷದ ಹಿಂದೆಯೇ ಕೇರಳ, ತಮಿಳುಣಾಡು, ಮಹಾರಾಷ್ಟ್ರ ಸೇರಿದಂತೆ ವಿವಿಧರಾಜ್ಯ ಹಾಗೂ ರಾಜ್ಯದ ವಿವಿಧ ನರ್ಸರಿಗಳಿಂದ ಸಸಿಗಳನ್ನು ಖರೀದಿಸಿದ್ದೇವೆ. ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವಂತೆ ಅವುಗಳನ್ನು ನರ್ಸರಿಗಳಲ್ಲಿ ಇಟ್ಟು ಪೋಷಿಸಲಾಗಿದೆ’ ಎಂದುರಾಜ್ಯ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎಂ.ಜಗದೀಶ್ ತಿಳಿಸಿದರು.

‘ಊಟಿ, ಹೈದರಾಬಾದ್, ಪುಣೆ ಮತ್ತಿತರ ಕಡೆಗಳಿಂದ ಈಗಾಗಲೇ ಶೇಕಡ 65ರಷ್ಟು ಸಸಿಗಳನ್ನು ತರಿಸಲಾಗಿದೆ. ಅಂದಾಜು ₹ 2.5 ಲಕ್ಷ ವೆಚ್ಚ ಮಾಡಲಾಗಿದೆ. ಇನ್ನೂ ವರ್ಷವಿಡೀ ಗಿಡನೆಡುವ ಪ್ರಕ್ರಿಯೆ ನಡೆಯಲಿದೆ’ ಎಂದರು.

ಯಾವ ಸಸ್ಯಗಳು ಇರಲಿವೆ?

ಜೌಗು ಪ್ರದೇಶದಲ್ಲಿ ಬೆಳೆಯುವ ಬಜೆ, ಪರ್ಪಲ್ ಅಲೋಷಿಯ, ಜಲ ಸಸ್ಯಗಳಾದ ನಿಂಫಿಯಾ ಆಲ್ಬಾ (ನೀರಿನಲ್ಲಿ ಬೆಳೆಯುವ ಲಿಲ್ಲಿ ಹೂವಿನ ಒಂದು ಜಾತಿ), ಫ್ಲೋಟಿಂಗ್ ಹಾರ್ಟ್, ತಾವರೆ, ಯೆಲ್ಲೊ ಪಾಂಡ್ ಲಿಲ್ಲಿ (ನೀರ ಮೇಲೆ ತೇಲುವ ಹಳದಿ ಹೂ), ಸೈಪ್ರಸ್ ಜಾತಿಯ ಸಸ್ಯಗಳು, ಪಾಪಿ ಓರಸ್ ಎಲಿಕೋನಿಯಾ ಹಾಗೂ ಟೈಫಾ ಹುಲ್ಲನ್ನು ಸಂಕನ್ ಉದ್ಯಾನದಲ್ಲಿ ಬೆಳೆಸಲಾಗುತ್ತದೆ.

ನೀರಿನ ನಿರ್ವಹಣೆ ಹೇಗೆ?

ಲಾಲ್‌ಬಾಗ್ 240 ಎಕರೆ ಪ್ರದೇಶವನ್ನು ಹೊಂದಿರುವ ಉದ್ಯಾನವಾಗಿದ್ದು, ಇದಕ್ಕೆ ಸಮರ್ಪಕವಾಗಿ ನೀರಿನ ನಿರ್ವಹಣೆ ಮಾಡುವುದು ದೊಡ್ಡ ಸವಾಲು. ಇಲ್ಲಿರುವ ಕೆರೆ, ಒಂಬತ್ತು ಕೊಳವೆ ಬಾವಿಗಳು ಹಾಗೂ ಶುದ್ಧೀಕರಿಸಿದ ನೀರನ್ನು ಉದ್ಯಾನಕ್ಕೆ ಉಣಿಸಲಾಗುತ್ತಿದೆ. ಅಲ್ಲದೇ, ಅಂದಾಜು 150 ಯೂನಿಕ್ ಸ್ಪ್ರಿಂಕ್ಲರ್‌ಗಳು ಹಾಗೂ ನೀರನ್ನು ಸ್ಪ್ರೇ ಮಾಡುವ ಘಟಕಗಳ ಅಳವಡಿಕೆ ನಡೆಯಲಿದೆ.

ಮಾಹಿತಿ ಫಲಕಗಳ ಅಳವಡಿಕೆ: ‘ಗಿಡ ನೆಡುವ ಕಾರ್ಯ ಮುಗಿಯುತ್ತಿದ್ದಂತೆ, ಉದ್ಯಾನದಲ್ಲಿನ ಸಸ್ಯಗಳ ಬಳಿ ಅವುಗಳ ವೈಜ್ಞಾನಿಕ ಹೆಸರಿರುವ ಮಾಹಿತಿ ಫಲಕಗಳನ್ನು ಅಳವಡಿಸಲಿದ್ದೇವೆ. ಪ್ರವಾಸಿಗರು ಎಲ್ಲಾ ಸಸ್ಯಗಳ ಬಳಿ ಹೋಗಿ ಅವುಗಳನ್ನು ವೀಕ್ಷಿಸಲು ಅನುಕೂಲವಾಗುವಂತೆ ಪಾದಚಾರಿ ಮಾರ್ಗವನ್ನೂ ನಿರ್ಮಿಸಲಾಗಿದೆ’ ಎಂದು ಚಂದ್ರಶೇಖರ್ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.