ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು| ಬಿರುಸಿನ ಮಳೆ: ಮನೆಯೊಳಗೆ ನುಗ್ಗಿದ ನೀರು!

Published 14 ಮೇ 2024, 16:13 IST
Last Updated 14 ಮೇ 2024, 16:13 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ವಿವಿಧ ಭಾಗಗಳಲ್ಲಿ ಸೋಮವಾರ ತಡರಾತ್ರಿ ಭಾರಿ ಮಳೆಯಾಗಿದ್ದು, ಕೆಲವು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ.

ಗುಡುಗು, ಮಿಂಚು, ಬಿರುಗಾಳಿಯೊಂದಿಗೆ ಮುಂಜಾನೆವರೆಗೆ ಭಾರಿ ಮಳೆ ಸುರಿಯಿತು. ಬಿಬಿಎಂಪಿ ವ್ಯಾಪ್ತಿಯ ದೊಡ್ಡನೆಕುಂದಿ, ಎಚ್‌ಎ‌ಎಲ್‌ ಸುತ್ತಮುತ್ತಲ ಪ್ರದೇಶಗಳಲ್ಲಿ 6 ರಿಂದ 8 ಸೆಂಟಿ ಮೀಟರ್‌ನಷ್ಟು ಮಳೆಯಾಗಿದೆ.

ಮೈಸೂರು ರಸ್ತೆ ಗುಡ್ಡದಹಳ್ಳಿಯಲ್ಲಿ ಮನೆಗಳ ಒಳಗೆ ಒಳಚರಂಡಿ ನೀರು ಮತ್ತು ಮಳೆ ನೀರು ನುಗ್ಗಿತು. ನಿವಾಸಿಗಳು ಮನೆಯೊಳಗಿನ ನೀರನ್ನು ಹೊರ ಹಾಕಲು ಬೆಳಿಗ್ಗೆವರೆಗೆ ಶ್ರಮವಹಿಸಿದರು.

‘ಒಳಚರಂಡಿ ಮಾರ್ಗದಲ್ಲಿ ಸಾಕಷ್ಟು ಸಮಸ್ಯೆ ಇದೆ. ಮಳೆ ಬಂದ ಕೂಡಲೇ ತುಂಬಿಕೊಂಡು ಹೊರ ಹರಿಯುತ್ತದೆ. ಮಳೆ ನೀರಿನೊಂದಿಗೆ ಕೊಳಕು ನೀರು ಮನೆಯೊಳಗೆ ನುಗ್ಗುತ್ತದೆ. ಬಿಬಿಎಂಪಿ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಅಲ್ಲಿನ ನಿವಾಸಿಗಳು ದೂರಿದರು.

ಜೆ.ಪಿ. ನಗರ, ಅಗರ ರಸ್ತೆಗಳಲ್ಲಿ ಮರಗಳು ಉರುಳಿ ರಸ್ತೆ ಸಂಚಾರಕ್ಕೆ ತೊಡಕುಂಟಾಯಿತು. ಧಾರಾಕಾರವಾಗಿ ಮಳೆ ಸುರಿದಿದ್ದರಿಂದ, ಹಲವು ರಸ್ತೆಗಳು ಜಲಾವೃತಗೊಂಡಿದ್ದವು. ಹೊಸಕೆರೆಹಳ್ಳಿ, ಮೈಸೂರು ರಸ್ತೆ, ಪೀಣ್ಯ ಮುಖ್ಯರಸ್ತೆ, ನಾಯಂಡಹಳ್ಳಿ, ಶಿವಾಜಿನಗರ, ಎಂ.ಜಿ. ರಸ್ತೆ, ಜೆ.ಸಿ. ನಗರ ಸಹಿತ ಅನೇಕ ಕಡೆಗಳಲ್ಲಿ ರಸ್ತೆಯಲ್ಲಿ ನೀರು ಹರಿದು ತೊಂದರೆ ಉಂಟಾಯಿತು. 

ಮಂಗಳವಾರ ರಾತ್ರಿ ಸುರಿದ ಮಳೆ (ಸೆಂ.ಮೀ)

ದೊಡ್ಡನೆಕ್ಕುಂದಿ;7.9

ಎಚ್‌ಎಎಲ್‌ ವಿಮಾನ ನಿಲ್ದಾಣ;6.3

ಕೋನೇನ ಅಗ್ರಹಾರ;4.4

ವಿಜ್ಞಾನ ನಗರ;3.8

ಎಚ್‌ಎಸ್‌ಆರ್‌ ಬಡಾವಣೆ;3.8

ಮಾರತ್‌ಹಳ್ಳಿ;3.7

ಸಿಂಗಸಂದ್ರ;3.4

ಹಂಪಿನಗರ;3.4

ಗಾಳಿ ಆಂಜನೇಯ ದೇವಸ್ಥಾನ;3.4

ವಿದ್ಯಾಪೀಠ;3.3

ವನ್ನಾರ್‌ಪೇಟೆ;3.3

ಬಸವನಗುಡಿ;3.3

ಕುಮಾರಸ್ವಾಮಿ ಲೇಔಟ್‌;3.3

ರಾಜಮಹಲ್‌ ಗುಟ್ಟಳ್ಳಿ;3.2

ಹೊರಮಾವು;3.2

ಮಾರುತಿ ಮಂದಿರ;3

ನಾಗರಬಾವಿ;3

ಸಂಪಿಗೆ ನಗರ;3

ಅಗರ ರಸ್ತೆಯಲ್ಲಿ ಮರವೊಂದು ಮುರಿದು ಬಿದ್ದು ಪಾದಚಾರಿ ಮಾರ್ಗದಲ್ಲಿ ಸಂಚರಿಸುವವರಿಗೆ ತೊಡಕುಂಟಾಯಿತು. ಪ್ರಜಾವಾಣಿ ಚಿತ್ರ/ಪ್ರೇರಣಾ ಚುಲುಕ
ಅಗರ ರಸ್ತೆಯಲ್ಲಿ ಮರವೊಂದು ಮುರಿದು ಬಿದ್ದು ಪಾದಚಾರಿ ಮಾರ್ಗದಲ್ಲಿ ಸಂಚರಿಸುವವರಿಗೆ ತೊಡಕುಂಟಾಯಿತು. ಪ್ರಜಾವಾಣಿ ಚಿತ್ರ/ಪ್ರೇರಣಾ ಚುಲುಕ
ಮೈಸೂರು ರಸ್ತೆ ಗುಡ್ಡದಹಳ್ಳಿಯಲ್ಲಿ ಭಾರಿ ಮಳೆಯಿಂದಾಗಿ ಮನೆಯೊಳಗೆ ನುಗ್ಗಿದ ಒಳಚರಂಡಿ ನೀರು ಮತ್ತು ಮಳೆ ನೀರನ್ನು ಹೊರ ಹಾಕುತ್ತಿರುವ ಮಹಿಳೆಯರು.– ಪ್ರಜಾವಾಣಿ ಚಿತ್ರ/ ಬಿ.ಕೆ. ಜನಾರ್ದನ್‌
ಮೈಸೂರು ರಸ್ತೆ ಗುಡ್ಡದಹಳ್ಳಿಯಲ್ಲಿ ಭಾರಿ ಮಳೆಯಿಂದಾಗಿ ಮನೆಯೊಳಗೆ ನುಗ್ಗಿದ ಒಳಚರಂಡಿ ನೀರು ಮತ್ತು ಮಳೆ ನೀರನ್ನು ಹೊರ ಹಾಕುತ್ತಿರುವ ಮಹಿಳೆಯರು.– ಪ್ರಜಾವಾಣಿ ಚಿತ್ರ/ ಬಿ.ಕೆ. ಜನಾರ್ದನ್‌
ಮಳೆಗೆ ಕಿತ್ತುಹೋಗಿರುವ ನಗರದ ಕನ್ನಿಂಗ್ ಹ್ಯಾಮ್ ರಸ್ತೆಯ ಡಾಂಬರು. –ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ಮಳೆಗೆ ಕಿತ್ತುಹೋಗಿರುವ ನಗರದ ಕನ್ನಿಂಗ್ ಹ್ಯಾಮ್ ರಸ್ತೆಯ ಡಾಂಬರು. –ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ಬಿರುಸಿನ ಮಳೆಗೆ ಮಾಧವನಗರದ ರಸ್ತೆಯ ಡಾಂಬರು ಕಿತ್ತುಬಂದಿದ್ದು ವಾಹನ ಸಂಚಾರಕ್ಕೆ ತೊಡಕು ಉಂಟಾಗಿದೆ. –ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ಬಿರುಸಿನ ಮಳೆಗೆ ಮಾಧವನಗರದ ರಸ್ತೆಯ ಡಾಂಬರು ಕಿತ್ತುಬಂದಿದ್ದು ವಾಹನ ಸಂಚಾರಕ್ಕೆ ತೊಡಕು ಉಂಟಾಗಿದೆ. –ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ನಗರದಲ್ಲಿ ಸುರಿದ ಮಳೆ ಚಿತ್ರಕಲಾ ಪರಿಷತ್ ಬಳಿ ರಸ್ತೆಯ ಕಳಪೆ ಗುಣಮಟ್ಟವನ್ನು ಅನಾವರಣಗೊಳಿಸಿದೆ –ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ನಗರದಲ್ಲಿ ಸುರಿದ ಮಳೆ ಚಿತ್ರಕಲಾ ಪರಿಷತ್ ಬಳಿ ರಸ್ತೆಯ ಕಳಪೆ ಗುಣಮಟ್ಟವನ್ನು ಅನಾವರಣಗೊಳಿಸಿದೆ –ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.

ಮಳೆಯೊಂದಿಗೆ ಗುಂಡಿಯೂ ಹೆಚ್ಚಳ ನಗರದಲ್ಲಿ ಕೆಲವು ದಿನಗಳಿಂದ ಮಳೆ ಸುರಿಯುತ್ತಿದ್ದು, ಮಳೆ ಪ್ರಮಾಣ ಏರುತ್ತಿದ್ದಂತೆ ನಗರದ ರಸ್ತೆಗಳಲ್ಲಿ ಬೀಳುತ್ತಿರುವ ಗುಂಡಿ–ಹೊಂಡಗಳ ಸಂಖ್ಯೆಯೂ ಹೆಚ್ಚುತ್ತಿದೆ. ಹಲವು ಕಡೆಗಳಲ್ಲಿ ರಸ್ತೆ ಮಧ್ಯೆಯೇ ಗುಂಡಿಗಳು ಬಾವಿ, ಕೆರೆಗಳಂತಾಗಿದ್ದು, ಒಂದೆಡೆ ವಾಹನ ಸಂಚಾರಕ್ಕೆ ತೊಡಕಾಗಿದ್ದರೆ, ಇನ್ನೊಂದೆಡೆ ವಾಹನಗಳು ಸಾಗುವಾಗ ಪಾದಚಾರಿಗಳ ಮೇಲೆ ಕೆಸರು ನೀರಿನ ಸಿಂಚನವಾಗುತ್ತಿದೆ.‌ ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT