ಬೆಂಗಳೂರು: ರಾಜ್ಯ ಭೋವಿ ಅಭಿವೃದ್ಧಿ ನಿಗಮದಲ್ಲಿ ನಡೆದಿದ್ದ ಅಕ್ರಮ ಪ್ರಕರಣದ ಆರೋಪಿ, ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸಿದ್ದ ವಿಶೇಷ ತನಿಖಾ ದಳದ(ಎಸ್ಐಟಿ) ಅಧಿಕಾರಿಗಳು, ನಗರದ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಹೈಕೋರ್ಟ್ ರಚಿಸಿದ್ದ ಎಸ್ಐಟಿ, ಏಪ್ರಿಲ್ 12ರಂದು ಹೈಕೋರ್ಟ್ಗೆ ಅಂತಿಮ ವರದಿಯನ್ನು ಸಲ್ಲಿಸಿತ್ತು. ಇದೀಗ 2,300 ಪುಟಗಳ ದೋಷಾರೋಪ ಪಟ್ಟಿಯನ್ನು ನಗರದ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಿದೆ.

‘ಸಾಕ್ಷಿದಾರರ ಹೇಳಿಕೆ, ವಿಡಿಯೊ ಸಾಕ್ಷ್ಯ, ವಿಧಿ ವಿಜ್ಞಾನ ಪ್ರಯೋಗಾಯಲದ ವರದಿ ಆಧರಿಸಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಸಿಐಡಿ ಡಿವೈಎಸ್ಪಿಯಾಗಿದ್ದ ಕನಕಲಕ್ಷ್ಮಿ ಅವರು ಜೀವಾ ಅವರಿಗೆ ಕಿರುಕುಳ, ಚಿತ್ರಹಿಂಸೆ ನೀಡಿರುವುದು ಸಾಬೀತಾಗಿದೆ. ಜೀವಾ ಅವರು ಬರೆದಿದ್ದ 13 ಪುಟಗಳ ಮರಣಪತ್ರದಲ್ಲಿ ಉಲ್ಲೇಖಿಸಿದ್ದ ಎಲ್ಲ ಆರೋಪಗಳೂ ದೃಢಪಟ್ಟಿವೆ’ ಎಂದು ಉಲ್ಲೇಖಿಸಲಾಗಿದೆ.

‘ಕನಕಲಕ್ಷ್ಮಿ ಅವರು ನಕಲಿ ದಾಖಲೆ ಸೃಷ್ಟಿಸಿ ಮಾನಸಿಕ ಹಿಂಸೆ ನೀಡಿರುವುದು ಸಾಬೀತಾಗಿದೆ. ವಿಚಾರಣೆ ವೇಳೆ ಚಿತ್ರೀಕರಿಸಲಾಗಿದ್ದ ವಿಡಿಯೊದ ಕೆಲವೊಂದು ತುಣುಕುಗಳನ್ನು ತನಿಖಾಧಿಕಾರಿ ಡಿಲಿಟ್ ಮಾಡಿಸಿರುವುದು ಸಾಬೀತಾಗಿದೆ. ಜೀವಾ ಅವರನ್ನು ವಿವಸ್ತ್ರಗೊಳಿಸಿರುವುದು, ಪ್ರಕರಣದಿಂದ ಹೆಸರು ಕೈಬಿಡುವುದಕ್ಕೆ ಹಣಕ್ಕೆ ಬೇಡಿಕೆ ಇಟ್ಟಿರುವುದು ತನಿಖೆಯಲ್ಲಿ ಗೊತ್ತಾಗಿದೆ’ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.

ಬನಶಂಕರಿ ಠಾಣಾ ವ್ಯಾಪ್ತಿಯ ರಾಘವೇಂದ್ರ ಲೇಔಟ್ನ ಮನೆಯಲ್ಲಿ ಮರಣ ಪತ್ರ ಬರೆದಿಟ್ಟು 2024ರ ನವೆಂಬರ್ 22ರಂದು ಜೀವಾ ಆತ್ಮಹತ್ಯೆ ಮಾಡಿಕೊಂಡಿದ್ದರು. ವಿಚಾರಣೆ ವೇಳೆ ಕನಕಲಕ್ಷ್ಮಿ ಅವರು ನೀಡಿದ್ದ ಕಿರುಕುಳದಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಮರಣ ಪತ್ರದಲ್ಲಿ ಜೀವಾ ಉಲ್ಲೇಖಿಸಿದ್ದರು. ಅವರ ಸಹೋದರಿ ಸಂಗೀತಾ ನೀಡಿದ ದೂರು ಆಧರಿಸಿ, ಬನಶಂಕರಿ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದರು. ನಂತರ, ಸಿಬಿಐ ಅಧಿಕಾರಿಗಳನ್ನೂ ಒಳಗೊಂಡ ಎಸ್ಐಟಿಯನ್ನು ಹೈಕೋರ್ಟ್ ರಚಿಸಿತ್ತು. ಕನಕಲಕ್ಷ್ಮಿ ಅವರನ್ನು ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದರು.

ಮನಸ್ಥಿತಿ ಅಧ್ಯಯನ ಜೀವಾ ಅವರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಅವರ ಮನಸ್ಥಿತಿ ಹೇಗಿತ್ತು ಎಂಬುದನ್ನು ಈ ಪ್ರಕರಣದ ತನಿಖೆಯ ಭಾಗವಾಗಿ ಅಧ್ಯಯನ ಮಾಡಲಾಗಿತ್ತು. ಇದಕ್ಕೆ ‘ಫೊರೆನ್ಸಿಕ್ ಸೈಕಾಲಜಿಕಲ್ ಅಟಾಪ್ಸಿ’ ವಿಧಾನವನ್ನು ಅನುಸರಿಸಲಾಗಿತ್ತು. ನಿಮ್ಹಾನ್ಸ್ನ ವೈದ್ಯರಾದ ಡಾ.ರಾಜಕುಮಾರಿ ನೇತೃತ್ವದ ತಂಡವು ಜೀವಾ ಅವರ ಮನಸ್ಥಿತಿ ಖಿನ್ನತೆ ಮಾನಸಿಕ ಸ್ಥಿರತೆ ಮತ್ತು ಕಿರುಕುಳದ ಪರಿಣಾಮವನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿತ್ತು. ಕನಕಲಕ್ಷ್ಮಿ ಅವರ ಬಳಿಯಿದ್ದ 30 ವಿಡಿಯೊ ತುಣುಕುಗಳನ್ನು ಪರಿಶೀಲಿಸಿ ಜೀವಾ ಅವರ ಮುಖಭಾವ ಒತ್ತಡ ಮತ್ತು ಖಿನ್ನತೆಯ ಮಟ್ಟವನ್ನು ಅಧ್ಯಯನ ಮಾಡಲಾಗಿತ್ತು. ಜೀವಾ ಬರೆದಿದ್ದ ಮರಣ ಪತ್ರ ಹಾಗೂ ಅವರು ನೀಡಿದ್ದ ವಿಡಿಯೊ ಹೇಳಿಕೆ ಆಧರಿಸಿ ಮಾನಸಿಕ ಸ್ಥಿತಿಯನ್ನು ವಿಶ್ಲೇಷಿಸಲಾಗಿತ್ತು. ವಿಚಾರಣೆಗಾಗಿ ಸಿಐಡಿ ಕಚೇರಿಗೆ ಬಂದಾಗ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯವನ್ನೂ ಪಡೆದು ತಂಡವು ವಿಶೇಷಣೆಗೆ ಒಳಪಡಿಸಿತ್ತು. ಈ ಅಧ್ಯಯನದಿಂದ ಜೀವಾ ಅವರು ಆತ್ಮಹತ್ಯೆಗೆ ಮುನ್ನ ಖಿನ್ನತೆ ಮತ್ತು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎಂಬುದು ಗೊತ್ತಾಗಿತ್ತು ಎಂದು ಮೂಲಗಳು ತಿಳಿಸಿವೆ.

ಮೆಚ್ಚುಗೆ ವ್ಯಕ್ತಪಡಿಸಿದ್ದ ಹೈಕೋರ್ಟ್ ಸಿಬಿಐ ಎಸ್ಪಿ ವಿನಾಯಕ್ ವರ್ಮಾ ಸಿಸಿಬಿ ಡಿಸಿಪಿ ಅಕ್ಷಯ್ ಮಚ್ಚೀಂದ್ರ ಆಂತರಿಕ ಭದ್ರತಾ ವಿಭಾಗದ ಎಸ್ಪಿ ನಿಶಾ ಜೇಮ್ಸ್ ಅವರ ನೇತೃತ್ವದ ತಂಡವು ತನಿಖೆ ನಡೆಸಿ 90 ದಿನಗಳ ಒಳಗೆ ಹೈಕೋರ್ಟ್ಗೆ ಅಂತಿಮ ವರದಿ ಸಲ್ಲಿಸಿತ್ತು. ನಿಗದಿತ ಅವಧಿಯ ಒಳಗೆ ತಂಡವು ತನಿಖೆ ನಡೆಸಿ ಅಂತಿಮ ವರದಿ ಸಲ್ಲಿಸಿದ್ದಕ್ಕೆ ಹೈಕೋರ್ಟ್ ಮೆಚ್ಚುಗೆ ವ್ಯಕ್ತಪಡಿಸಿತ್ತು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.