ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಕಾರ್ಯನಿರ್ವಹಿಸದ ಲಿಫ್ಟ್‌: ಮೆಟ್ಟಿಲುಗಳ ಮೇಲೆ ರೋಗಿಗಳ ಸಾಗಾಟ

Published 24 ಡಿಸೆಂಬರ್ 2023, 15:53 IST
Last Updated 24 ಡಿಸೆಂಬರ್ 2023, 15:53 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ನೆಫ್ರೋ ಯುರಾಲಜಿ ಸಂಸ್ಥೆಯಲ್ಲಿ ಲಿಫ್ಟ್ ಕಾರ್ಯನಿರ್ವಹಿಸದಿದ್ದರಿಂದ ರೋಗಿಗಳನ್ನು ಮೆಟ್ಟಿಲುಗಳ ಮೂಲಕವೇ ಭಾನುವಾರ ಸಾಗಿಸಲಾಯಿತು. ಇದು ರೋಗಿಗಳ ಸಂಬಂಧಿಗಳ ಆಕ್ರೋಶಕ್ಕೆ ಕಾರಣವಾಯಿತು.

ಬಾಗಿಲು ಸಮಸ್ಯೆಯಿಂದಾಗಿ ಲಿಫ್ಟ್ ಕಾರ್ಯನಿರ್ವಹಿಸುತ್ತಿರಲಿಲ್ಲ. ಇದರಿಂದಾಗಿ ವೈದ್ಯಕೀಯ ಸಿಬ್ಬಂದಿ ರೋಗಿಗಳನ್ನು ಒಂದು ಮಹಡಿಯಿಂದ ಮತ್ತೊಂದು ಮಹಡಿಗೆ ಕರೆದೊಯ್ಯಲು ಪರದಾಟ ನಡೆಸಬೇಕಾಯಿತು. ತುರ್ತಾಗಿ ತೆರಳಬೇಕಾದ ರೋಗಿಗಳನ್ನು ಮಾತ್ರ ಸ್ಟ್ರೆಚ್ಚರ್‌ನಲ್ಲಿ ಇರಿಸಿ, ಮಹಡಿಯಿಂದ ಮಹಡಿಗೆ ಸಾಗಿಸಲಾಯಿತು. ಆಸ್ಪತ್ರೆಯಲ್ಲಿನ ವ್ಯವಸ್ಥೆಯ ಬಗ್ಗೆ ರೋಗಿಗಳು ಹಾಗೂ ಅವರ ಸಂಬಂಧಿಗಳು ಅಸಮಾಧಾನ ವ್ಯಕ್ತಪಡಿಸಿದರು. 

‘ಲಿಫ್ಟ್‌ ಕಾರ್ಯನಿರ್ವಹಿಸದಿದ್ದರಿಂದ ರೋಗಿಗಳನ್ನು ಎರಡನೇ ಮಹಡಿಗೆ ಸಾಗಿಸಲು ಪರದಾಟ ನಡೆಸಬೇಕಾಯಿತು. ವಿವಿಧ ಪರೀಕ್ಷೆಗಳಿಗೆ ಮಹಡಿಯಿಂದ ಮಹಡಿಗೆ ಸಾಗುವಷ್ಟರಲ್ಲಿ ರೋಗಿಗಳು ಇನ್ನಷ್ಟು ಅಸ್ವಸ್ಥರಾಗಿದ್ದರು. ಇಷ್ಟು ದೊಡ್ಡ ಸಂಸ್ಥೆಯಲ್ಲಿ ಲಿಫ್ಟ್‌ ಸಮರ್ಪಕವಾಗಿ ನಿರ್ವಹಣೆ ಮಾಡದಿರುವುದು ವಿಪರ್ಯಾಸ’ ಎಂದು ರೋಗಿಗಳ ಸಂಬಂಧಿಗಳು ಆಕ್ರೋಶ ವ್ಯಕ್ತಪಡಿಸಿದರು. 

‘ಲಿಫ್ಟ್‌ನ ನಿರ್ವಹಣೆ ಕಾರ್ಯ ನಡೆಯುತ್ತಿದ್ದರಿಂದ ಬಳಸಲು ಸಾಧ್ಯವಾಗಿರಲಿಲ್ಲ. ಬಾಗಿಲು ಬದಲಾಯಿಸುವ ಪ್ರಕ್ರಿಯೆ ಮುಗಿದಿದೆ. ಭಾನುವಾರ ಸಂಜೆಯಿಂದ ಸಮಸ್ಯೆ ನಿವಾರಣೆಯಾಗಿದೆ’ ಎಂದು ಸಂಸ್ಥೆಯ ಪ್ರಭಾರ ನಿರ್ದೇಶಕ ಡಾ. ಕೇಶವಮೂರ್ತಿ ಆರ್. ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT