ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯಪಾನ ಮಾಡಲು ಹಣ ನೀಡಲಿಲ್ಲವೆಂದು ವ್ಯಕ್ತಿ ತಲೆಗೆ ಇಟ್ಟಿಗೆಯಿಂದ ಹಲ್ಲೆ

Published 5 ಜನವರಿ 2024, 15:35 IST
Last Updated 5 ಜನವರಿ 2024, 15:35 IST
ಅಕ್ಷರ ಗಾತ್ರ

ಬೆಂಗಳೂರು: ಮದ್ಯಪಾನ ಮಾಡಲು ಹಣ ನೀಡಲಿಲ್ಲವೆಂದು ಯುವಕನೊಬ್ಬ ವ್ಯಕ್ತಿ ತಲೆಗೆ ಇಟ್ಟಿಗೆಯಿಂದ ಹಲ್ಲೆ ನಡೆಸಿದ್ದಾನೆ. ಈ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌

ಗಿರಿನಗರದ ನಿವಾಸಿ ಧರ್ಮ ಹಲ್ಲೆ ನಡೆಸಿದ ಆರೋಪಿ. ಸಿಂಗಾರ ವೇಲು (58) ಹಲ್ಲೆಗೆ ಒಳಗಾಗಿದ್ದಾರೆ.

‘ಡಿ.29ರಂದು ರಾತ್ರಿ ಸಿಂಗಾರ ವೇಲು ಅವರು ಮೂಕಾಂಬಿಕಾ ನಗರದಲ್ಲಿರುವ ಫುಟ್‌ಪಾತ್ ಹೋಟೆಲ್‌ನಲ್ಲಿ ಊಟ ಮಾಡಿ ಮನೆಯತ್ತ ತೆರಳುತ್ತಿದ್ದರು. ಆಗ ಅಲ್ಲಿಗೆ ಬಂದ ಆರೋಪಿ ಮದ್ಯಪಾನಕ್ಕೆ ದುಡ್ಡು ಕೊಡುವಂತೆ ಬೇಡಿಕೆಯಿಟ್ಟಿದ್ದ. ನನ್ನ ಬಳಿ ಹಣವಿಲ್ಲ, ಮನೆಗೆ ಹೋಗಲು ಬಿಡು ಎಂದು ಸಿಂಗಾರ ವೇಲು ಅಲ್ಲಿಂದ ತೆರಳಲು ಮುಂದಾಗಿದ್ದರು. ಇದರಿಂದ ಕುಪಿತಗೊಂಡ ಆರೋಪಿ, ಸ್ಥಳದಲ್ಲಿದ್ದ ಇಟ್ಟಿಗೆಯಿಂದ ವೇಲು ತಲೆಗೆ ಹಲ್ಲೆ ಮಾಡಿದ್ದಾನೆ. ‌ಗಂಭೀರವಾಗಿ ಗಾಯಗೊಂಡಿರುವ ವೇಲು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಸಿಸಿ ಟಿ.ವಿ ಕ್ಯಾಮೆರಾ ಪರಿಶೀಲನೆ ನಡೆಸಿ, ಆರೋಪಿ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT