ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಮೇಲ್ಸೇತುವೆಯಲ್ಲಿ ನಿಂತು ₹10 ನೋಟು ಎಸೆದ ಅಪರಿಚಿತ

Last Updated 24 ಜನವರಿ 2023, 9:22 IST
ಅಕ್ಷರ ಗಾತ್ರ

ಬೆಂಗಳೂರು: ಕೆ.ಆರ್. ಮಾರುಕಟ್ಟೆ ಮೇಲ್ಸೇತುವೆಯಲ್ಲಿ ನಿಂತು ಅಪರಿಚಿತನೊಬ್ಬ ₹10 ನೋಟು ಎಸೆದಿದ್ದು, ಕೆಳ ರಸ್ತೆಯಲ್ಲಿ ಬಿದ್ದ ನೋಟುಗಳನ್ನು ಜನರು ಆರಿಸಿಕೊಳ್ಳಲು‌ ಮುಗಿಬಿದ್ದಿದ್ದರು. ಮಂಗಳವಾರ ಈ‌ ಘಟನೆ ನಡೆದಿದೆ.

ನೋಟು ಎಸೆದ ವ್ಯಕ್ತಿ ಯಾರೂ ಎಂಬುದು ಗೊತ್ತಾಗಿಲ್ಲ. ನೋಟು ಎಸೆದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

'ಕೊರಳಿಗೆ ಗಡಿಯಾರ ಧರಿಸಿದ್ದ ವ್ಯಕ್ತಿ, ದ್ವಿಚಕ್ರ ವಾಹನದಲ್ಲಿ ಮೇಲ್ಸೇತುವೆಗೆ ಬಂದಿದ್ದ. ಬ್ಯಾಗ್‌ನಿಂದ ನೋಟುಗಳನ್ನು ತೆಗೆದು ಎಸೆದಿದ್ದಾನೆ. ಆತನನ್ನು ಪತ್ತೆ ಮಾಡಲಾಗುತ್ತಿದೆ' ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT