ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಲಾಲ್‌ಬಾಗ್‌ನಲ್ಲಿ ಮೇ 24 ರಿಂದ ‘ಮಾವು–ಹಲಸು ಮೇಳ’

Published 13 ಮೇ 2024, 15:21 IST
Last Updated 13 ಮೇ 2024, 15:21 IST
ಅಕ್ಷರ ಗಾತ್ರ

ಬೆಂಗಳೂರು: ಮೇ 24 ರಿಂದ ಜೂನ್ 10ವರೆಗೆ ಲಾಲ್‌ಬಾಗ್‌ನಲ್ಲಿ ‘ಮಾವು ಮತ್ತು ಹಲಸು ಮೇಳ‘ ನಡೆಸಲು ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ತೀರ್ಮಾನಿಸಿದೆ.

ಮೇಳದಲ್ಲಿ ಸುಮಾರು 60 ಮಳಿಗೆಗಳು ಇರಲಿವೆ. ಕೊಪ್ಪಳದ ಕೇಸರ್, ಚಿತ್ರದುರ್ಗ ಮತ್ತು ತುಮಕೂರಿನ ಬಾದಾಮಿ, ರಸಪುರಿ, ಬೆನಿಶಾ, ಮಲಗೋವಾ, ಇಮಾಮ್‌ಪಸಂದ್‌ ನಂತಹ ಪ್ರಸಿದ್ಧ ತಳಿಗಳು ಮೇಳದಲ್ಲಿ ಸಹ ಲಭ್ಯವಿರುತ್ತವೆ.

‘ಮಾವು ಬೆಳೆಯುವ ಪ್ರಮುಖ ಜಿಲ್ಲೆಗಳಾದ ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ರೈತರು ರಸಪುರಿ ಮತ್ತು ತೋತಾಪುರಿಯಂತಹ ತಳಿಯ ಹಣ್ಣುಗಳನ್ನು ಮೇಳಕ್ಕೆ ತರಲಿದ್ದಾರೆ‘ ಎಂದು ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಸಿ.ಜಿ.ನಾಗರಾಜ್ ತಿಳಿಸಿದರು.

‘ಕಳೆದ ವರ್ಷ ಭೌಗೋಳಿಕ ಮಾನ್ಯತೆ (ಜಿಐ ಟ್ಯಾಗ್‌) ಪಡೆದಿರುವ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಕರಿ ಇಶಾದ್ ಮಾವಿನ ತಳಿಯ ಹಣ್ಣುಗಳೂ ಮೇಳಕ್ಕೆ ಬರಲಿವೆ. ಮಾವು ಮತ್ತು ಹಲಸಿನ ವೈವಿಧ್ಯಮಯ ಮೌಲ್ಯವರ್ಧಿತ ಉತ್ಪನ್ನಗಳೂ ಮಾರಾಟಕ್ಕಿರಲಿವೆ‘ ಎಂದು ಅವರು ತಿಳಿಸಿದರು.

ಮಾವಿನ ಜೊತೆಗೆ, ಐಐಎಚ್‌ಆರ್‌, ಜಿಕೆವಿಕೆ ಸೇರಿದಂತೆ ವಿವಿಧ ಸಂಸ್ಥೆಗಳು ಅಭಿವೃದ್ಧಿಪಡಿಸಿದ ಹಲಸಿನ ತಳಿಗಳು, ರೈತರು ಬೆಳೆದು ಹಲಸಿನ ಹಣ್ಣುಗಳನ್ನೂ ಮೇಳದಲ್ಲಿ ಮಾರಾಟ ಮಾಡಲಾಗುತ್ತದೆ. ಮಾವು ಮತ್ತು ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳು ಮೇಳದಲ್ಲಿರಲಿವೆ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

(ಸಂಗ್ರಹ ಚಿತ್ರ)
(ಸಂಗ್ರಹ ಚಿತ್ರ)
(ಸಂಗ್ರಹ ಚಿತ್ರ)
(ಸಂಗ್ರಹ ಚಿತ್ರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT