ಭಾನುವಾರ, ಜೂಲೈ 5, 2020
28 °C

ಕೃಷಿಗೆ ₹520 ಕೋಟಿ ಮಂಜೂರು ಮಾಡಿದ ಬ್ಯಾಂಕ್‌ ಆಫ್ ಬರೋಡಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವಿಶ್ವ ಆಹಾರ ದಿನದ ಅಂಗವಾಗಿ ಬ್ಯಾಂಕ್ ಆಫ್ ಬರೋಡಾ ವತಿಯಿಂದ ಹೊಸಕೋಟೆ ಬಳಿ ಆಯೋಜಿಸಿದ್ದ ‘ಮೆಗಾ ಕೃಷಿ ಮೇಳ’ವನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಉದ್ಘಾಟಿಸಿದರು. 

ವಿವಿಧ ಸಾಲ ಸೌಲಭ್ಯಗಳಡಿ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ ಜಿಲ್ಲೆಗಳ ಫಲಾನುಭವಿಗಳಿಗೆ ಅವರು ಚೆಕ್‌ ವಿತರಿಸಿ, ರೈತರು ತಂತ್ರಜ್ಞಾನದ ಲಾಭ ‍ಪಡೆಯಬೇಕು ಎಂದರು.

ಬ್ಯಾಂಕ್‌ ಆಫ್‌ ಬರೋಡಾ ಬೆಂಗಳೂರು ವಲಯವು ಕೃಷಿ ಹಾಗೂ ರೈತರ ಅಭಿವೃದ್ಧಿಗಾಗಿ ₹520 ಕೋಟಿ ಮಂಜೂರು ಮಾಡಿತು. ಕಾರ್ಯಕ್ರಮದಲ್ಲಿ  ಐವರು ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು. ಮೇಳದಲ್ಲಿ ಕೃಷಿ ತಳಿಗಳು, ಯಂತ್ರೋಪಕರಣಗಳು, ನೀರಾವರಿ ತಂತ್ರಜ್ಞಾನಗಳು ಹಾಗೂ ತೋಟಗಾರಿಕಾ ನೂತನ ತಳಿಗಳ ಪ್ರದರ್ಶನಕ್ಕಾಗಿ 50ಕ್ಕೂ ಹೆಚ್ಚು ಮಳಿಗೆಗಳಿದ್ದವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು