ಗುರುವಾರ , ಆಗಸ್ಟ್ 11, 2022
23 °C

ಮೆಟ್ರೊದಲ್ಲಿ 29 ಸಾವಿರ ಮಂದಿ ಪ್ರಯಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದಲ್ಲಿ ಶುಕ್ರವಾರ ಪ್ರಯಾಣಿಕರಿಗೆ ಬೆಳಿಗ್ಗೆ 7ರಿಂದ ರಾತ್ರಿ 9ರವರೆಗೆ ಮೆಟ್ರೊ ರೈಲು ಸೇವೆ ಲಭ್ಯವಾಯಿತು. 173 ದಿನಗಳ ನಂತರ ಸತತ 14 ತಾಸು ರೈಲುಗಳು ಸಂಚರಿಸಿದವು. 29,114 ಪ್ರಯಾಣಿಕರು ಸಂಚರಿಸಿದರು. ಮೊದಲ ನಾಲ್ಕು ದಿನಗಳಿಗೆ ಹೋಲಿಸಿದರೆ, ಪ್ರಯಾಣಿಕರ ಸಂಖ್ಯೆ ತುಂಬಾ ಹೆಚ್ಚಾಗಿತ್ತು. 

ಸೆ.7ರಿಂದಲೇ ಮೆಟ್ರೊ ರೈಲು ಸೇವೆ ಆರಂಭವಾಗಿದ್ದರೂ ದಿನಕ್ಕೆ 6 ತಾಸು ಮಾತ್ರ ಸೇವೆ ನೀಡಲಾಗುತ್ತಿತ್ತು. ಶುಕ್ರವಾರ ಈ ಅವಧಿ ಹೆಚ್ಚಳವಾಗಿದ್ದರಿಂದಲೂ ಪ್ರಯಾಣಿಕರ ಸಂಖ್ಯೆ ಏರಲು ಕಾರಣವಾಗಿದೆ. ಒಬ್ಬ ಪ್ರಯಾಣಿಕ ಎರಡು–ಮೂರು ಬಾರಿ ಸಂಚರಿಸಿರುವುದೂ ಸೇರಿದಂತೆ ಈ ಸಂಖ್ಯೆ 29 ಸಾವಿರ ತಲುಪಿದೆ. ನೇರಳೆ ಮಾರ್ಗದಲ್ಲಿ ದಿನಕ್ಕೆ 6 ತಾಸು ರೈಲುಗಳ ಸಂಚಾರಕ್ಕೆ ಅವಕಾಶವಿದ್ದಾಗ ಮೊದಲ ದಿನ 3,770 ಜನ ಸಂಚರಿಸಿದ್ದರು. ಹಸಿರು ಮಾರ್ಗದಲ್ಲಿಯೂ ಸೀಮಿತ ಅವಧಿ ಯವರೆಗೆ ರೈಲುಗಳು ಸಂಚರಿಸಿದ್ದಾಗ, ಎರಡೂ ಮಾರ್ಗಗಳಲ್ಲಿ 6,500 ಜನಪ್ರಯಾಣಿಸಿದ್ದರು. 

‘ಪ್ರಯಾಣಿಕರ ಸಂಖ್ಯೆ ಕ್ರಮೇಣವಾಗಿ ಏರುತ್ತಿದೆ. ಮೊದಲ ನಾಲ್ಕು ದಿನಗಳಿಗೆ ಹೋಲಿಸಿದರೆ, ಗುರುವಾರ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಕ್ರಮೇಣ ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ’ ಎಂದು ನಿಗಮದ ಅಧಿಕಾರಿಯೊಬ್ಬರು ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು