ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಮನೆ ಅಂಗಳದಲ್ಲಿ ಸಿರಿಧಾನ್ಯ ಲೋಕ

ಸಿರಿಧಾನ್ಯ ಮತ್ತು ಸಾವಯವ ಅಂತರರಾಷ್ಟ್ರೀಯ ವಾಣಿಜ್ಯ ಮೇಳ l ಗಮನಸೆಳೆದ ತರಹೇವಾರಿ ತಿನಿಸುಗಳು
Published 6 ಜನವರಿ 2024, 0:30 IST
Last Updated 6 ಜನವರಿ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ಸಿರಿಧಾನ್ಯಗಳಿಂದ ತಯಾರಿಸಿದ ಪಿಜಾ, ಚಾಕೊಲೇಟ್‌, ಪಾಸ್ತಾ, ಬರಗು ದೋಸೆ, ಊದಲು ಇಡ್ಲಿ, ಡೋನಟ್‌, ಫ್ಲೇಕ್ಸ್‌ ...ಇಂಥ ತರಹೇವಾರಿ ತಿನಿಸುಗಳ ವೈವಿಧ್ಯಮಯ ಲೋಕವೇ ನಗರ ಅರಮನೆ ಆವರಣದಲ್ಲಿ ಅನಾವರಣಗೊಂಡಿತ್ತು...

ಅರಮನೆ ಆವರಣದ ತ್ರಿಪುರವಾಸಿನಿಯಲ್ಲಿ ಕೃಷಿ ಇಲಾಖೆ ಆಯೋಜಿಸಿರುವ ಸಿರಿಧಾನ್ಯ ಮತ್ತು ಸಾವಯವ ಅಂತರರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ ಕಂಡು ಬಂದ ಸಿರಿಧಾನ್ಯಗಳ ವೈವಿಧ್ಯವಿದ್ಯಮಯ ತಿನಿಸುಗಳಿವು.

‘ಭವಿಷ್ಯದ ಪೀಳಿಗೆಯನ್ನು ಪೋಷಿಸುವ ಸಾಂಪ್ರದಾಯಿಕ ಪ್ರಜ್ಞಾವಂತ ಆಹಾರ’ ಎಂಬ ಶೀರ್ಷಿಕೆಯೊಂದಿಗೆ ಈ ಮೇಳವನ್ನು ಆಯೋಸಜಿಲಾಗಿದೆ. ರೈತ ಉತ್ಪಾದಕ ಸಂಸ್ಥೆಗಳು, ಸ್ವಸಹಾಯ ಸಂಘಗಳು, ಪ್ರಾಂತೀಯ ಒಕ್ಕೂಟಗಳು, ತಯಾರಿಸಿರುವ ಸಿರಿಧಾನ್ಯದ ಹಿಟ್ಟುಗಳು, ಸಿರಿಧಾನ್ಯದ ಬ್ರೆಡ್‌, ಬಿಸ್ಕತ್ತು, ನಿಪ್ಪಟ್ಟು, ಪಾಪಡ್, ರೆಡಿ ಟು ಕುಕ್‌ ಸಿರಿಧಾನ್ಯ ಮಿಶ್ರಣಗಳ ದೋಸೆ, ಇಡ್ಲಿ, ಉಪ್ಪಿಟ್ಟು, ಬಿಸಿಬೇಳೆ ಬಾತ್, ಪಾಯಸ, ಕಿಚಡಿ ಹಲವು ಬಗೆಯ ತಿನಿಸುಗಳು ಗಮನ ಸೆಳೆದವು.

ಗಮನಸೆಳೆಯುವ ಕರ್ನಾಟಕ

ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ, ಮಣಿಪುರ, ಬಿಹಾರ ಸೇರಿದಂತೆ 17ಕ್ಕೂ ಹೆಚ್ಚು ರಾಜ್ಯಗಳ ಸಿರಿಧಾನ್ಯ ಕಂಪನಿಗಳು, ಸಂಸ್ಥೆಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ. ಕರ್ನಾಟಕ ಪೆವಿಲಿಯನ್‌ ವಿಶೇಷವಾಗಿ ಗಮನಸೆಳೆಯುತ್ತದೆ. 15 ರೈತ ಉತ್ಪಾದಕ ಪ್ರಾಂತೀಯ ಒಕ್ಕೂಟಗಳ ಮಳಿಗೆಗಳಿವೆ. ಪರಿಸರ ಸ್ನೇಹಿ ಉತ್ಪನ್ನಗಳು, ದೇಸೀಯ ಬಿತ್ತನೆ ಬೀಜಗಳ ಸಂರಕ್ಷಣೆ ಕುರಿತು ಮಾಹಿತಿ ತಿಳಿಸುವ ಮಳಿಗೆಗಳೂ ವಸ್ತು ಪ್ರದರ್ಶನದಲ್ಲಿವೆ. 

ಮೇಳದಲ್ಲಿ 400ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಸಿರಿಧಾನ್ಯ ಖಾದ್ಯಗಳದ್ದೇ ಪ್ರತ್ಯೇಕವಾದ ಫುಡ್‌ ಕೋರ್ಟ್‌ ಇದೆ. ಅಂತರರಾಷ್ಟ್ರೀಯ ಉದ್ಯಮಿಗಳೊಂದಿಗೆ ಸಭೆ, ಗ್ರಾಹಕರ ಸಂಪರ್ಕಕ್ಕೆ ಪೆವಿಲಿಯನ್‌ ಸ್ಥಾಪಿಸಲಾಗಿದೆ. ಸಗಟು, ಚಿಲ್ಲರೆ ವ್ಯಾಪಾರಿಗಳು, ಸ್ವಸಹಾಯ ಗುಂಪುಗಳು, ಖರೀದಿದಾರರ ಮತ್ತು ಮಾರಾಟಗಾರರ ವೇದಿಕೆ ಕಲ್ಪಿಸಲಾಗಿದೆ.

ಮೈದಾ ರಹಿತ ಖಾದ್ಯ: 

‘ಇಂದಿನ ಯುವಕರ ಆಹಾರ ಶೈಲಿಯನ್ನು ಗಮನದಲ್ಲಿರಿಸಿಕೊಂಡು ಸಿರಿಧಾನ್ಯಗಳಿಂದ ‘ಪಿಜಾ ಬೇಸ್‌’ ಎಂಬ ಹಿಟ್ಟನ್ನು ತಯಾರಿಸಲಾಗಿದೆ. ಮೈದಾ ಬಳಸದೇ ಜೋಳ, ರಾಗಿ, ಗೋದಿ, ಬೇಕಿಂಗ್‌ ಪೌಡರ್‌ ಬಳಸಿಕೊಂಡು ಇದನ್ನು ತಯಾರಿಸಲಾಗಿದೆ. ಆರೋಗ್ಯದ ಹಿತದೃಷ್ಟಿಯಿಂದ ಇದು ಉತ್ತಮ. ಮೇಳದಲ್ಲಿ ಇದು ಎಲ್ಲರ ಆಕರ್ಷಣೆಯಾಗಿದೆ’ ಎಂದು ಮಲೆನಾಡು ರೈತ ಉತ್ಪಾದಕ ಸಂಘದ ಅನಿಲ್‌ ಕುಮಾರ್ ವಿವರಿಸಿದರು.

ಶುಕ್ರವಾರದಿಂದ ಆರಂಭವಾಗಿರುವ ಮೇಳ, ಭಾನುವಾರದವರೆಗೂ ನಡೆಯಲಿದ್ದು ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ.

ಸಿರಿಧಾನ್ಯದಲ್ಲಿ ಅರಳಿದ ರಂಗೋಲಿ ಚಿತ್ತಾರ ವೀಕ್ಷಕರ ಗಮನ ಸೆಳೆಯಿತು. ಪ್ರ

ಸಿರಿಧಾನ್ಯದಲ್ಲಿ ಅರಳಿದ ರಂಗೋಲಿ ಚಿತ್ತಾರ ವೀಕ್ಷಕರ ಗಮನ ಸೆಳೆಯಿತು. ಪ್ರ

ಜಾವಾಣಿ ಚಿತ್ರಗಳು/ಬಿ.ಕೆ. ಜನಾರ್ದನ

ಮೇಳದಲ್ಲಿ ಉತ್ಪನ್ನಗಳನ್ನು ವೀಕ್ಷಸಿದ ಸಿರಿಧಾನ್ಯ ಪ್ರಿಯರು.
ಮೇಳದಲ್ಲಿ ಉತ್ಪನ್ನಗಳನ್ನು ವೀಕ್ಷಸಿದ ಸಿರಿಧಾನ್ಯ ಪ್ರಿಯರು.
ಮೇಳದಲ್ಲಿ ಕಣ್ಮನ ಸೆಳೆದ ತರಹೇವಾರಿ ಬೆಲ್ಲಗಳು..
ಮೇಳದಲ್ಲಿ ಕಣ್ಮನ ಸೆಳೆದ ತರಹೇವಾರಿ ಬೆಲ್ಲಗಳು..

ರೈತರ ಅಭಿಪ್ರಾಯಗಳು

ರೈತರು ಉತ್ಪಾದಿಸಿದ ಕೊಬ್ಬರಿ ರಾಗಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ರೈತರ ಹೆಸರಿನಲ್ಲಿ ಇಂತಹ ದೊಡ್ಡ ಸಮಾವೇಶಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದರಿಂದ ರೈತರಿಗೆ ಯಾವುದೇ ರೀತಿಯ ಪ್ರಯೋಜನವಾಗುತ್ತಿಲ್ಲ. ಧನಂಜಯ್ ರೈತ ಅರಸೀಕೆರೆ ಹಾಸನ –– ರಾಗಿಯನ್ನು ಮೌಲ್ಯವರ್ಧನೆ ಮಾಡಿ ಇಷ್ಟೊಂದು ಉತ್ಪನ್ನಗಳನ್ನು ತಯಾರಿಸಬಹುದು ಈ ಮೇಳಕ್ಕೆ ಬಂದಾಗಲೇ ಗೊತ್ತಾಗಿದ್ದು ನಮ್ಮ ರಾಗಿ ಎಷ್ಟು ಬೆಲೆ ಪೌಷ್ಟಿಕತೆ ಇದೆ ಎಂಬುದು ತಿಳಿದುಕೊಂಡಿದ್ದೇನೆ. ಆದ್ದರಿಂದ ಮುಂದಿನ ದಿನಗಳಲ್ಲಿ ನಾನೇ ರಾಗಿಯ ಮೌಲ್ಯವರ್ಧಿತ ಉತ್ಪನ್ನಗಳನ್ನು ಉತ್ಪಾದಿಸಿ ಮಾರಾಟ ಮಾಡುತ್ತೇನೆ.

-ಶ್ರೀನಿವಾಸಮೂರ್ತಿ, ರೈತ ತುಮಕೂರು

₹5ಕ್ಕೆ ರಾಗಿ ಚಾಕೊಲೇಟ್‌

‘ಮೇಲೆ ಮತ್ತು ಕೆಳಗಿನ ಪದರ ರಾಗಿಯದ್ದು. ಮಧ್ಯದ ಪದರ ಹಣ್ಣಿನದ್ದು.. ತಿನ್ನಿ ರುಚಿ ನೋಡಿ‘– ಎನ್ನುತ್ತಾ ಚಿಲ್ಮಿಲ್‌ ಸಂಸ್ಥೆಯ ಪ್ರಸಾದ್‌ ಬಣ್ಣದ ತುಂಡೊಂದನ್ನು ಕೈಗಿಟ್ಟರು. ಅದನ್ನು ಬಾಯಿಗಿಟ್ಟರೆ ಸ್ಟ್ರಾಬೇರಿ ಮತ್ತು ಕಿತ್ತಳೆಯ ಸ್ವಾದ.. ‘ಇದು ಚಾಕೊಲೇಟ್ ಸರ್. ಐದು ರೂಪಾಯಿಗೆ ಒಂದು’ ಎಂದು ಮಾತು ಮುಂದುವರಿಸಿದರು. ಚಿಲ್ಮಿಲ್‌ ಎಂಬ ನವೋದ್ಯಮ ಸ್ಥಾಪಿಸಿರುವ ಬೆಂಗಳೂರಿನ ಈ ಯುವಕ ರಾಗಿಯಿಂದ ಚಾಕೂಲೇಟ್‌ ವೇಫರ್ಸ್‌ಗಳನ್ನು ತಯಾರಿಸಿ ಮೇಳದಲ್ಲಿ ಪ್ರದರ್ಶನಕ್ಕಿಟ್ಟಿದ್ದರು. ಸ್ಟ್ರಾಬೇರಿ ಆರೆಂಜ್‌ ಚಾಕೊಲೇಟ್‌ ಎಂಬ ಮೂರು ಫ್ಲೇವರ್‌ಗಳ್‌ ಚಾಕೊಲೇಟ್ ತಯಾರಿಸಿದ್ದಾರೆ. ಪ್ರತಿಯೊಂದು ಚಾಕೊಲೇಟ್‌ ₹ 5 ರಂತೆ ಮಾರಾಟ ಮಾಡುತ್ತಿದ್ದು ಯುವಕರ ಹಾಗೂ ಮಕ್ಕಳ ಗಮನ ಸೆಳೆಯುತ್ತಿದೆ. ಸಾಮಾನ್ಯವಾಗಿ ಸಿರಿಧಾನ್ಯ ಉತ್ಪನ್ನಗಳಿಗೆ ಬೆಲೆ ಹೆಚ್ಚು ಎನ್ನುತ್ತಾರೆ. ಹಾಗಾಗಿ ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ವಿಭಿನ್ನ ರುಚಿಯಲ್ಲಿ ಸಿರಿಧಾನ್ಯಗಳ ಉತ್ಪನ್ನಗಳು ಸಿಗಬೇಕು. ಆ ಉದ್ದೇಶದಿಂದ ಚಾಕೊಲೇಟ್‌ ವೇಫರ್ಸ್‌ಗಳನ್ನು ತಯಾರಿಸಿದ್ದೇನೆ. ಮುಂದಿನ ದಿನಗಳಲ್ಲಿ ಹೊಸದಾಗಿ ಉತ್ಪನ್ನಗಳನ್ನು ತಯಾರಿಸುವ ಯೋಚನೆ ಇದೆ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT