ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ನಗರದಲ್ಲಿ ಸಾಧಾರಣ ಮಳೆ

Published 5 ಜೂನ್ 2024, 21:28 IST
Last Updated 5 ಜೂನ್ 2024, 21:28 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ವಿವಿಧೆಡೆ ಬುಧವಾರ ಸಾಧಾರಣ ಮಳೆಯಾಯಿತು. ಗುಡುಗು ಮಿಂಚಿನ ಆರ್ಭಟವಿಲ್ಲದೇ ತಣ್ಣಗೆ ಸುರಿಯಿತು.

ಕೆಲವು ಕಡೆಗಳಲ್ಲಿ ಮರಗಳು ಧರೆಗೆ ಉರುಳಿವೆ. ಬೊಮ್ಮನಹಳ್ಳಿ, ಆರ್‌.ಆರ್‌. ನಗರ, ಎಂ.ಜಿ.ರಸ್ತೆ, ಆರ್‌.ಟಿ. ನಗರ, ಯಲಹಂಕ ಸಹಿತ ವಿವಿಧೆಡೆ ಉತ್ತಮವಾಗಿ ಮಳೆ ಸುರಿಯಿತು. ಹಲವು ಪ್ರದೇಶಗಳಲ್ಲಿ ಹಗುರವಾಗಿ ಮಳೆ ಬಂತು.

ಮಳೆ ಪ್ರಮಾಣ: ಎಚ್‌. ಗೊಲ್ಲಹಳ್ಳಿಯಲ್ಲಿ 3 ಸೆಂ.ಮೀ., ಕೆಂಗೇರಿಯಲ್ಲಿ 2.9 ಮಿ.ಮೀ., ಹೆಮ್ಮಿಗೆಪುರದಲ್ಲಿ 2.8 ಸೆಂ.ಮೀ., ಹಂಪಿನಗರದಲ್ಲಿ 2.5 ಸೆಂ.ಮೀ., ಪೀಣ್ಯ ಕೈಗಾರಿಕಾ ವಲಯದಲ್ಲಿ 2.4 ಸೆಂ.ಮೀ., ಹೆರೋಹಳ್ಳಿಯಲ್ಲಿ 2.3 ಸೆಂ.ಮೀ., ಮಾರುತಿ ಮಂದಿರ ವಾರ್ಡ್‌ನಲ್ಲಿ 2.2 ಸೆಂ.ಮೀ., ನಾಯಂಡಹಳ್ಳಿಯಲ್ಲಿ 2.2. ಸೆಂ.ಮೀ., ರಾಜರಾಜೇಶ್ವರಿ ನಗರದಲ್ಲಿ 2.1 ಸೆಂ.ಮೀ., ಜಕ್ಕೂರು 1.9 ಸೆಂ.ಮೀ., ವಿದ್ಯಾಪೀಠ 1.8 ಸೆಂ.ಮೀ., ಕೊಡಿಗೆಹಳ್ಳಿ 1.7 ಸೆಂ.ಮೀ., ವಿದ್ಯಾರಣ್ಯಪುರ 1.4 ಸೆಂ.ಮೀ., ಯಲಹಂಕ 1.4 ಸೆಂ.ಮೀ., ಚಾಮರಾಜಪೇಟೆ 1.3 ಸೆಂ.ಮೀ., ಉತ್ತರಹಳ್ಳಿ 1.3 ಸೆಂ.ಮೀ., ಗೊಟ್ಟಿಗೆರೆ 1.1  ಸೆಂ.ಮೀ. ಮಳೆಯಾಗಿದೆ.

ಮುರಿದುಬಿದ್ದ 35 ಮರಗಳು

ನಗರದಲ್ಲಿ ಬುಧವಾರ 21 ಮರಗಳು ಧರೆಗೆ ಉರುಳಿವೆ. 59 ಕಡೆಗಳಲ್ಲಿ ರೆಂಬೆಕೊಂಬೆಗಳು ಮುರಿದು ಬಿದ್ದಿವೆ.

ಬೆಂಗಳೂರು ದಕ್ಷಿಣ ವಲಯದಲ್ಲಿ 3 ಮರಗಳು, 10 ಕೊಂಬೆಗಳು, ಆರ್‌ಆರ್‌ನಗರ ವಲಯದಲ್ಲಿ 3 ಮರಗಳು 7 ಕೊಂಬೆಗಳು, ಬೊಮ್ಮನಹಳ್ಳಿ ವಲಯದಲ್ಲಿ 2 ಮರಗಳು, 6 ಕೊಂಬೆಗಳು, ಪಶ್ಚಿಮ ವಲಯದಲ್ಲಿ 5 ಮರಗಳು, 10 ಕೊಂಬೆಗಳು, ಮಹಾದೇವಪುರದಲ್ಲಿ 1 ಮರ, 4 ಕೊಂಬೆಗಳು, ಯಲಹಂಕ ವಲಯದಲ್ಲಿ 2 ಮರ, 7 ಕೊಂಬೆಗಳು, ಪೂರ್ವ ವಲಯದಲ್ಲಿ 3 ಮರಗಳು, 10 ಕೊಂಬೆಗಳು, ದಾಸರಹಳ್ಳಿ ವಲಯದಲ್ಲಿ 2 ಮರಗಳು, 5 ಕೊಂಬೆಗಳು ಮುರಿದು ಬಿದ್ದಿವೆ.

ಭಾನುವಾರ ಮತ್ತು ಸೋಮವಾರ 292 ಮರಗಳು ಮುರಿದು ಬಿದ್ದಿದ್ದವು. 691 ರೆಂಬೆಗಳು ತುಂಡಾಗಿದ್ದವು. ಮಂಗಳವಾರ 13 ಮರಗಳು, 61 ಕೊಂಬೆಗಳು ಮುರಿದು ಬಿದ್ದಿದ್ದವು.

ನಗರದಲ್ಲಿ ಬುಧವಾರ ಸುರಿದ ಮಳೆಗೆ ರಿಂಗ್‌ರಸ್ತೆಯ ಬದಿಯಲ್ಲಿ ನೀರು ನಿಂತಿರುವುದು.  –ಪ್ರಜಾವಾಣಿ ಚಿತ್ರ/ಬಿ.ಕೆ. ಜನಾರ್ದನ್‌
ನಗರದಲ್ಲಿ ಬುಧವಾರ ಸುರಿದ ಮಳೆಗೆ ರಿಂಗ್‌ರಸ್ತೆಯ ಬದಿಯಲ್ಲಿ ನೀರು ನಿಂತಿರುವುದು.  –ಪ್ರಜಾವಾಣಿ ಚಿತ್ರ/ಬಿ.ಕೆ. ಜನಾರ್ದನ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT