ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಯ್ಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮುಕ್ತ ದಿನ: ತಂತ್ರಜ್ಞಾನ ಲೋಕದ ಅನಾವರಣ

Last Updated 6 ಜುಲೈ 2022, 20:02 IST
ಅಕ್ಷರ ಗಾತ್ರ

ಬೆಂಗಳೂರು:ಇ–ಸೈಕಲ್‌, ಮಾನವ ರಹಿತ ವೈಮಾನಿಕ ವಾಹನ (ಯುಎವಿ), ರೇಸ್‌ ಕಾರುಗಳು, ಪ್ಲಾಸ್ಟಿಕ್‌ ಮರುಬಳಕೆ ವೆಂಡಿಂಗ್‌ ಯಂತ್ರಗಳು....

ರಾಮಯ್ಯ ತಾಂತ್ರಿಕ ಮಹಾ ವಿದ್ಯಾ ಲಯದಲ್ಲಿ ಬುಧವಾರ ಮುಕ್ತ ದಿನದ ಅಂಗವಾಗಿ ಆಯೋಜಿಸಿದ್ದ ‘ಪ್ರದರ್ಶನ–2022’ ರಲ್ಲಿ ವಿದ್ಯಾರ್ಥಿಗಳು ತಂತ್ರ ಜ್ಞಾನದ ಲೋಕವನ್ನೇ ತೆರಿದಿಟ್ಟಿದ್ದರು.

ವಿದ್ಯಾರ್ಥಿಗಳ ಕೌಶಲ ಹಾಗೂಪ್ರಾಯೋಗಿಕ ಜ್ಞಾನದಪ್ರದರ್ಶನಕ್ಕಾಗಿ ಕಾರ್ಯಕ್ರಮ ರೂಪಿಸ ಲಾಗಿತ್ತು. ತಮ್ಮವಿನೂತನ ಕಲ್ಪನೆಗಳಿಗೆ ರೂಪ ನೀಡಿದ್ದ ವಿದ್ಯಾರ್ಥಿಗಳು ವೈವಿಧ್ಯ ಮಯ ತಾಂತ್ರಿಕತೆಯನ್ನು ಪ್ರದರ್ಶಿಸಿದರು.ವೈಮಾನಿಕ ಕ್ಷೇತ್ರ, ಪ‍ರಿಸರ, ಕ್ಲೌಡ್ ಕಂಪ್ಯೂಟಿಂಗ್‌, ಡೇಟಾ ಅನಲಿಟಿಕ್ಸ್‌, ನ್ಯಾನೊ ಟೆಕ್ನಾಲಜಿ, ಎಲೆಕ್ಟ್ರಿಕಲ್‌ ವಾಹನಗಳುಸೇರಿದಂತೆ ವೈವಿಧ್ಯಮಯ ವಿಷಯಗಳ ಮೇಲೆ ಪ್ರಾಜೆಕ್ಟ್‌ಗಳನ್ನು ಪ್ರದರ್ಶಿಸಿದರು. ಸುಮಾರು 425 ಪ್ರಾಜೆಕ್ಟ್‌ಗಳನ್ನು ಪ್ರದರ್ಶಿಸಲಾಯಿತು. ಕಾಲೇಜಿನ 13 ವಿಭಾಗಗಳ 1,300 ವಿದ್ಯಾರ್ಥಿಗಳು ಈ ಪ್ರದರ್ಶನದಲ್ಲಿ ಭಾಗವಹಿಸಿದ್ದರು.

ಸಂಸ್ಥೆಯ ವಿದ್ಯಾರ್ಥಿಗಳೇ ರಚಿಸಿ ಕೊಂಡಿರುವ ‘ಇಧಿಥಾ’ ತಂಡವು ಮಾನವರಹಿತ ವಿಮಾನಗಳ(ಯುಎವಿ) ಮಾದರಿಗಳನ್ನು ರೂಪಿಸಿದೆ. ವಿವಿಧ ವಿಭಾಗಗಳ ವಿದ್ಯಾರ್ಥಿಗಳು ರೂಪಿಸಿ ರುವ ಈ ಮಾನವರಹಿತ ವಿಮಾನವು ಹಾರುವ ಮತ್ತು ಇಳಿಯುವ ಸ್ವಯಂ ಚಾಲಿತ ವ್ಯವಸ್ಥೆಯನ್ನು ಹೊಂದಿದೆ.

ಎಲೆಕ್ಟ್ರಿಕಲ್‌ ಮತ್ತು ಎಲೆಕ್ಟ್ರಾನಿಕ್‌ ಎಂಜಿನಿಯರಿಂಗ್‌ ವಿಭಾಗದ ವಿದ್ಯಾರ್ಥಿ ಗಳು ಅಭಿವೃದ್ಧಿಪಡಿಸಿರುವಬ್ಯಾಟರಿ ಚಾಲಿತ ಇ–ಸೈಕಲ್‌ ಗಮನಸೆಳೆಯಿತು.

ಸಾಫ್ಟ್‌ವೇರ್‌ ತಂತ್ರಜ್ಞಾನದ ನೆರವಿನಿಂದ ಈ ಸೈಕಲ್‌ ಅಭಿವೃದ್ಧಿಪಡಿಸಲಾಗಿದೆ. ಇದರಿಂದ ಸೈಕಲ್‌ ಸವಾರರಿಗೆ ಹೆಚ್ಚು ಅನುಕೂಲಗಳಿವೆ.ಪ್ರತಿಯೊಂದು ಅಂಶವನ್ನು ಸಾಫ್ಟ್‌ವೇರ್‌ ಮೂಲಕ ವಿಶ್ಲೇಷಿಸಿ ಸೈಕಲ್‌ ಸವಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇ–ಸೈಕಲ್‌ ಅಭಿವೃದ್ಧಿಪಡಿಸಲಾಗಿದೆ ಎಂದು ವಿದ್ಯಾರ್ಥಿಗಳು ವಿವರಿಸಿದರು.

ಮೆಕ್ಯಾನಿಕಲ್‌ ಮತ್ತು ಎಲೆಕ್ಟ್ರಿಕಲ್‌ ವಿಭಾಗಗಳ ವಿದ್ಯಾರ್ಥಿಗಳು ರೂಪಿಸಿ ರುವ ’ಎಫ್‌–1 ರೇಸಿಂಗ್‌’ ಎಲೆಕ್ಟ್ರಿಕಲ್‌ ವಾಹನದ ಮಾದರಿಯು ವೀಕ್ಷಕರ ಕುತೂಹಲ ತಣಿಸಿತು.‘ಸ್ಟೂಂಡೆಂಟ್ಸ್‌ ಫಾರ್ಮುಲಾ ಎಲೆಕ್ಟ್ರಿಕಲ್‌’ ವಿದ್ಯಾರ್ಥಿ ಗಳ ತಂಡವು ಈ ಕಾರು ಅಭಿವೃದ್ಧಿಪಡಿಸಿದೆ. ಈ ಕಾರು ಸುರಕ್ಷತಾ ವ್ಯವಸ್ಥೆಯನ್ನು ಹೊಂದಿದೆ.ಇದೇ ರೀತಿ ‘ವೆಲಾಸಿಟಿ ರೇಸಿಂಗ್‌’ ತಂಡವು ಪೆಟ್ರೋಲ್‌ ಎಂಜಿನ್‌ ಕಾರು ಅಭಿವೃದ್ಧಿಪಡಿಸಿದೆ.

ಕಾರ್ಯಕ್ರಮಗಳಲ್ಲಿ ಬಳಸುವ ಪ್ಲಾಸ್ಟಿಕ್‌ ಬಾಟಲ್‌ ಮತ್ತು ಲೋಟಗಳನ್ನು ಸ್ಥಳದಲ್ಲೇ ಪುಡಿ ಮಾಡುವ ಯಂತ್ರವನ್ನು ವಿದ್ಯಾರ್ಥಿಗಳು ರೂಪಿಸಿದ್ದಾರೆ.

2 ದಿನ ನಡೆಯುವ ಈ ಪ್ರದರ್ಶನಕ್ಕೆಸ್ಯಾಮ್ಸಂಗ್‌ಮತ್ತು ಸಂಶೋಧನಾ ಅಭಿವೃದ್ಧಿಯ ಹಿರಿಯ ನಿರ್ದೇಶಕ ರವೀಂದ್ರ ಬಾಲಕೃಷ್ಣ ಶೆಟ್ಟಿ ಚಾಲನೆ ನೀಡಿ ದರು.ಗೋಕುಲ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ. ಎಂ.ಆರ್ ಜಯರಾಮ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT