ಬುಧವಾರ, ಆಗಸ್ಟ್ 12, 2020
21 °C

ಬೆಂಗಳೂರು | ನಡುರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಹೊರವಲಯದ ನೈಸ್ ರಸ್ತೆ ಬಳಿ ರೌಡಿ ಸುನೀಲ್ ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಶುಕ್ರವಾರ ರಾತ್ರಿ ಕೊಲೆ ಮಾಡಲಾಗಿದೆ.

ಮೃತ ಸುನೀಲ್, ತನ್ನ ಚಾಲಕನ ಜೊತೆ ಕಾರಿನಲ್ಲಿ ಹೊರಟಿದ್ದ. ಮಾರ್ಗಮಧ್ಯೆಯೇ ಅವರನ್ನು ತಡೆದಿದ್ದ ದುಷ್ಕರ್ಮಿಗಳ ತಂಡ, ಜಗಳ ತೆಗೆದು ಕೃತ್ಯ ಎಸಗಿ ಪರಾರಿಯಾಗಿದೆ.

‘ಮುಖವೇ ಗೋಚರಿಸದ ರೀತಿಯಲ್ಲಿ ಸುನೀಲ್‌ನನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ರಕ್ಷಣೆಗೆ ಹೋಗಿದ್ದ ಚಾಲಕನ ಮೇಲೂ ಹಲ್ಲೆ ಮಾಡಲಾಗಿದೆ. ಹಳೇ ವೈಷಮ್ಯವೇ ಇದಕ್ಕೆ ಕಾರಣವಿರುವ ಅನುಮಾನವಿದೆ’ ಎಂದು ಕುಂಬಳಗೋಡು ಠಾಣೆ ಪೊಲೀಸರು ಹೇಳಿದರು.

‘ಆರು ಜನ ದುಷ್ಕರ್ಮಿಗಳು ಸೇರಿ ಸುನೀಲ್‌ನನ್ನು ಕೊಲೆ ಮಾಡಿರುವ ಬಗ್ಗೆ ಮಾಹಿತಿ ಇದೆ. ಘಟನಾ ಸ್ಥಳದಲ್ಲಿರುವ ಸಿ.ಸಿ.ಟಿ.ವಿ ಕ್ಯಾಮೆರಾ ಪರಿಶೀಲಿಸಲಾಗುತ್ತಿದೆ’ ಎಂದೂ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು