ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಯಾತ್ರಿ: ಅಂಗವಿಕಲರಿಗಾಗಿ ಪರ್ಪಲ್ ರೈಡ್ಸ್‌ ಪ್ರಾರಂಭ

Published 5 ಅಕ್ಟೋಬರ್ 2023, 15:30 IST
Last Updated 5 ಅಕ್ಟೋಬರ್ 2023, 15:30 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಯಾತ್ರಿ’ ಆ್ಯಪ್‌ ಆಧಾರಿತ ಆಟೊ ಸೇವೆಯು ಎನೇಬಲ್‌ ಇಂಡಿಯಾ ಸಹಯೋಗದಲ್ಲಿ ಅಂಗವಿಕಲರಿಗಾಗಿ ‘ಪರ್ಪಲ್‌ ರೈಡ್ಸ್‌’ ಎಂಬ ಸೇವೆಗೆ ಗುರುವಾರ ಚಾಲನೆ ನೀಡಿದೆ.

‘ಎನೇಬಲ್‌ ಇಂಡಿಯಾದ ಸಹಯೋಗದಲ್ಲಿ ನಮ್ಮ ಯಾತ್ರಿ ತನ್ನ ಕಾರ್ಯಚರಣೆಯನ್ನು ಮರುಪರಿಷ್ಕರಣೆ ಮಾಡಿಕೊಂಡಿದೆ. ಇದು ಅಂಧರು, ಶ್ರವಣದೋಷವುಳ್ಳವರು ಹಾಗೂ ಅಂಗವಿಕಲ ವಾಹನ ಸವಾರರಿಗೆ ಅನುಗುಣವಾಗಿ ಪರ್ಪಲ್‌ ರೈಡ್ಸ್‌ ಅನ್ನು ಪ್ರಾರಂಭಿಸಿದೆ. ಈಗಾಗಲೇ ಇದರಲ್ಲಿ 3,500 ಗ್ರಾಹಕರು ಮತ್ತು 1,300 ಚಾಲಕರು ಈ ಸೇವೆನ್ನು ಬಳಸುತ್ತಿದ್ದು, 6 ಸಾವಿರಕ್ಕೂ ಹೆಚ್ಚು ಟ್ರಿಪ್‌ಗಳನ್ನು ಪೂರ್ಣಗೊಳಿಸಿದ್ದಾರೆ’ ಎಂದು ನಮ್ಮ ಯಾತ್ರಿ ಆ್ಯಪ್‌ನ ಎಂ.ಎಸ್. ಶಾನ್‌ ತಿಳಿಸಿದರು.

‘ಪರ್ಪಲ್ ರೈಡ್ಸ್‌ನಲ್ಲಿ ಅಂಗವಿಕಲ ಗ್ರಾಹಕರ ಅಗತ್ಯಗಳನ್ನು ಅರ್ಥ ಮಾಡಿಕೊಂಡು ಚಾಲಕರು ಕೆಲಸ ಮಾಡುತ್ತಾರೆ. ಶ್ರವಣ ದೋಷವುಳ್ಳ ಬಳಕೆದಾರರಿಗೆ ಆಟೊ, ಬೈಕ್‌ ಚಾಲಕರೊಂದಿಗೆ ಫೋನ್‌ ಕರೆಗಳ ಬದಲಿಗೆ ಸಂದೇಶಗಳ ಮೂಲಕ ಸಂವಹನ ನಡೆಸಬಹುದು. ಅಂಧರು ಟಾಕ್‌ಬ್ಯಾಕ್‌ ಸಹಾಯದಿಂದ ಸಂವಹನ ನಡೆಸಬಹುದು’ ಎಂದು ಮಾಹಿತಿ ನೀಡಿದರು.

ಎನೇಬಲ್‌ ಇಂಡಿಯಾದ ಸಂಸ್ಥಾಪಕಿ ಶಾಂತಿ ರಾಘವನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT