ಗುರುವಾರ , ಅಕ್ಟೋಬರ್ 22, 2020
28 °C

ಬಯೋಕಾನ್‌ನಿಂದ ಮೆಟ್ರೊ ನಿಲ್ದಾಣಕ್ಕೆ ₹65 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ನಿರ್ಮಾಣವಾಗುತ್ತಿರುವ ಹೆಬ್ಬಗೋಡಿ ಮೆಟ್ರೊ ನಿಲ್ದಾಣಕ್ಕೆ ಬಯೋಕಾನ್‌ ಫೌಂಡೇಷನ್‌ ₹65 ಕೋಟಿ ನೀಡಲಿದೆ. ಈ ಕುರಿತು ಒಪ್ಪಂದಕ್ಕೆ ಬಯೋಕಾನ್‌ ಫೌಂಡೇಷನ್‌ ಮತ್ತು ಬೆಂಗಳೂರು ಮೆಟ್ರೊ ರೈಲು ನಿಗಮ ಗುರುವಾರ ಸಹಿ ಹಾಕಿವೆ. 

ಬಯೋಕಾನ್ ಕಂಪನಿಯ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಈ ಹಣವನ್ನು ನೀಡಲಾಗುತ್ತಿದ್ದು, ಹೆಬ್ಬಗೋಡಿ ನಿಲ್ದಾಣಕ್ಕೆ ‘ಬಯೋಕಾನ್ ಹೆಬ್ಬಗೋಡಿ ಮೆಟ್ರೊ ನಿಲ್ದಾಣ’ ಎಂದು ಹೆಸರಿಡಲು ಉಭಯ ಸಂಸ್ಥೆಗಳು ಸರ್ಕಾರವನ್ನು ಕೋರಲಿವೆ. 

ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗಿನ (ರೀಚ್‌ 5) 18.82 ಕಿ.ಮೀ. ಉದ್ದದ ಹೊಸ ಮಾರ್ಗದಲ್ಲಿ ಈ ನಿಲ್ದಾಣ ಬರಲಿದೆ. ಹೊಸೂರು ರಸ್ತೆಯಲ್ಲಿನ ಸಂಚಾರ ದಟ್ಟಣೆ ಸಮಸ್ಯೆಗೆ ಈ ಮಾರ್ಗ ನಿರ್ಮಾಣದಿಂದ ಪರಿಹಾರ ದೊರೆಯಲಿದೆ. 

‘ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರವಾಗುವ, ಸಂಚಾರಕ್ಕೆ ಪರ್ಯಾಯ ಮಾರ್ಗ ಒದಗಿಸುವ ಮೆಟ್ರೊ ರೈಲು ಮಾರ್ಗಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ, ನಿಲ್ದಾಣ ನಿರ್ಮಾಣಕ್ಕಾಗಿ ₹65 ಕೋಟಿ ನೀಡಲು ಸಂತಸವಾಗುತ್ತಿದೆ. ಪರಿಸರ ಸುಸ್ಥಿರತೆಯ ಬಗೆಗಿನ ನಮ್ಮ ಜವಾಬ್ದಾರಿಯ ದ್ಯೋತಕ ಇದು’ ಎಂದು ಬಯೋಕಾನ್ ಫೌಂಡೇಷನ್‌ ಸಂಸ್ಥಾಪಕಿ ಕಿರಣ್ ಮಜುಂದಾರ್ ಷಾ ಹೇಳಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು