ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಂಗ ಕೊರೆಯಲು ಮತ್ತೆ ನೆಲದೊಳಗೆ ಸೇರಿದ ‘ಊರ್ಜಾ’

Last Updated 22 ಡಿಸೆಂಬರ್ 2021, 19:45 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದ ವಿಸ್ತರಣೆ ಯೋಜನೆಯ ಸುರಂಗ ಮಾರ್ಗ ಕೊರೆಯುವ ಯಂತ್ರ (ಟಿಬಿಎಂ) ಊರ್ಜಾ ಯಂತ್ರ ಬುಧವಾರ ಮತ್ತೆ ನೆಲದಡಿ ಸೇರಿಕೊಂಡಿತು. ಕಂಟೋನ್ಮೆಂಟ್‌ನಲ್ಲಿ ಮೆಟ್ರೊ ನಿಲ್ದಾಣ ನಿರ್ಮಾಣವಾಗಲಿರುವ ಸ್ಥಳದಿಂದ ಪಾಟರಿ ಟೌನ್ ತನಕದ 907 ಮೀಟರ್ ಉದ್ದದ ಸುರಂಗವನ್ನು ಕೊರೆಯಲು ಈ ಯಂತ್ರವನ್ನು ಬಳಸಲಾಗುತ್ತಿದೆ.

‘ಈ ಯಂತ್ರದ ಬಿಡಿ ಭಾಗಗಳನ್ನು ಬಿಚ್ಚಿ ಮತ್ತೆ ಜೋಡಿಸಿದ್ದೇವೆ. ಕಂಟೋನ್ಮೆಂಟ್‌ನಿಂದ ಸುರಂಗ ಕೊರೆಯುವ ಕಾರ್ಯವನ್ನು ಬುಧವಾರ ಆರಂಭಿಸಲಾಗಿದೆ’ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದರು.

2020ರ ಜುಲೈನಲ್ಲಿ ನೆಲದಡಿ ಸೇರಿದ್ದ ‘ಊರ್ಜಾ’ ಯಂತ್ರ ಶಿವಾಜಿನಗರ ನಿಲ್ದಾಣದ ತನಕ 855 ಮೀಟರ್‌ ಸುರಂಗವನ್ನು ಕೊರೆದಿತ್ತು. 2021ರ ಸೆಪ್ಟೆಂಬರ್ 22ರಂದು ಹೊರಕ್ಕೆ ಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT