ಮಂಗಳವಾರ, ಜುಲೈ 14, 2020
28 °C

ಬೆಂಗಳೂರು ಸುತ್ತಮುತ್ತಲಿನ 7 ಟೋಲ್‌ಗಳಲ್ಲಿ ಫಾಸ್ಟ್ಯಾಗ್‌ ಸಡಿಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರಿ ಪ್ರಮಾಣದಲ್ಲಿ ವಾಹನ ದಟ್ಟಣೆ ಕಂಡುಬಂದಿರುವ ಬೆಂಗಳೂರು ಸುತ್ತಮುತ್ತಲಿನ ಏಳು ಟೋಲ್‌ ಸಂಗ್ರಹ ಕೇಂದ್ರಗಳಲ್ಲಿ ಫಾಸ್ಟ್ಯಾಗ್‌ ನಿಯಮದಲ್ಲಿ ಫೆಬ್ರುವರಿ 14ರವರೆಗೆ ಸಡಿಲಿಕೆ ಮಾಡಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸೂಚನೆ ನೀಡಿದೆ.

ಸಚಿವಾಲಯ ಈ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಕಚೇರಿಗೆ ಸೂಚನೆ ರವಾನಿಸಿದ್ದು, ಟೋಲ್‌ ಕೇಂದ್ರಗಳಲ್ಲಿ 3ರಿಂದ 4 ಲೇನ್‌ಗಳನ್ನು ನಗದು ಪಡೆಯುವುದಕ್ಕೆ ಅವಕಾಶ ಕಲ್ಪಿಸಬೇಕು, ಉಳಿದ ಲೇನ್‌ಗಳಲ್ಲಿ ಫಾಸ್ಟ್ಯಾಗ್‌ ಅಳವಡಿಸಿದ ವಾಹನಗಳು ಸಂಚರಿಸುವುದಕ್ಕೆ ಅವಕಾಶ ನೀಡಬೇಕು ಎಂದು ತಿಳಿಸಿದೆ.

ಕೆಂಪೇಗೌಡ ವಿಮಾನನಿಲ್ದಾಣ ಸಮೀಪದ ಸಾದಹಳ್ಳಿ, ಎಲೆಕ್ಟ್ರಾನಿಕ್‌ ಸಿಟಿ ಎತ್ತರಿಸಿದ ರಸ್ತೆ, ದೊಡ್ಡಕರೆನಹಳ್ಳಿ, ಹೊಸಕೋಟೆ, ಅತ್ತಿಬೆಲೆ ಗ್ರೇಡ್‌ ಸೆಕ್ಷನ್‌, ಬೆಳ್ಳೂರು ಹಾಗೂ ಬೆಂಗಳೂರು–ನೆಲಮಂಗಲ ನಡುವಿನ ಟೋಲ್‌ಗಳಲ್ಲಿ ಈ ವಿನಾಯಿತಿ ನೀಡಲಾಗಿದೆ.

ದೇಶದಾದ್ಯಂತ ಸುಮಾರು 65 ಟೋಲ್‌ ಸಂಗ್ರಹ ಕೇಂದ್ರಗಳಲ್ಲಿ ಈ ರೀತಿಯ ಭಾರಿ ವಾಹನ ದಟ್ಟಣೆ ಕಂಡುಬಂದಿದೆ. ದಟ್ಟಣೆ ಇರುವ ಉಳಿದೆಡೆ ಶೇ 25ರಷ್ಟು ಲೇನ್‌ಗಳನ್ನು ಹೈಬ್ರಿಡ್‌ ಲೇನ್‌ಗಳಾಗಿ (ನಗದು ಮತ್ತು ಫ್ಯಾಸ್ಟ್ಯಾಗ್‌) ಸದ್ಯ ಪರಿವರ್ತಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು