ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಷ್ಟ್ರೀಯ ತೋಟಗಾರಿಕಾ ಮೇಳ | ಹೊಸ ಮೆಣಸಿನಕಾಯಿ ತಳಿಗಳ ಪರಿಚಯ

Published 5 ಮಾರ್ಚ್ 2024, 23:30 IST
Last Updated 5 ಮಾರ್ಚ್ 2024, 23:30 IST
ಅಕ್ಷರ ಗಾತ್ರ

ಹೆಸರಘಟ್ಟ: ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಆವರಣದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ತೋಟಗಾರಿಕಾ ಮೇಳದಲ್ಲಿ ರೋಗನಿರೋಧಕ ಮೆಣಸಿನಕಾಯಿಯ ಏಳು ತಳಿಗಳನ್ನು ಪರಿಚಯಿಸಲಾಗಿದೆ.

ಅಧಿಕ ಇಳುವರಿ ಕೊಡುವಂತಹ ‘ಅರ್ಕ ನಿಹಿರ’ ಮತ್ತು ‘ಅರ್ಕ ಧೃತಿ’ ಮೆಣಸಿನಕಾಯಿ ತಳಿಗಳನ್ನು ರೈತರಿಗಾಗಿ ಹೊಸದಾಗಿ ಪರಿಚಯಿಸಲಾಗಿದೆ.

ಅರ್ಕ ತೇಜಸ್ವಿ, ಅರ್ಕ ತನ್ವಿ ಮತ್ತು ಅರ್ಕ ಸಾನ್ವಿ ಮೆಣಸಿನಕಾಯಿ ತಳಿಗಳು ಖಾರ ಜಾಸ್ತಿ ಹೊಂದಿದ್ದು ಹಸಿ ಮತ್ತು ಒಣರೂಪದಲ್ಲಿ ಉಪಯೋಗಿಸಬಹುದಾಗಿದ. ‘ಅರ್ಕ ಯಶಸ್ವಿ’, ‘ಅರ್ಕ ಗಗನ್’ ಮೆಣಸಿನಕಾಯಿ ತಳಿಗಳನ್ನು ಕೇವಲ ಹಸಿ ರೂಪದಲ್ಲಿ ಉಪಯೋಗಿಸಬಹುದು. ಈ ತಳಿಗಳಲ್ಲಿ ಶೇ 80ರಷ್ಟು ವೈರಸ್ ನಿರೋಧಕ ಶಕ್ತಿಯನ್ನು ಹೊಂದಿವೆ ಎಂದು ತರಕಾರಿ ವಿಭಾಗದ ಪ್ರಧಾನ ವಿಜ್ಞಾನಿ ಮಾಧವಿ ರೆಡ್ಡಿ ತಿಳಿಸಿದರು.

ರೈತರು ಕೊಟ್ಟಿಗೆ ಗೊಬ್ಬರವನ್ನು ನೇರವಾಗಿ ಗಿಡಗಳಿಗೆ ಹಾಕದೆ ಉಪಚಾರ ಮಾಡಿದ ನಂತರ ಹಾಕಬೇಕು. ತಮ್ಮ ತೋಟದಲ್ಲಿನ ಮಣ್ಣು ಮತ್ತು ನೀರಿನ ಪರೀಕ್ಷೆ ಮಾಡಿಸಿ ಅದಕ್ಕೆ ತಕ್ಕಂತಹ ಬೆಳೆಗಳನ್ನು ಮಾತ್ರ ಬೆಳೆಯುವುದರಿಂದ ಹೆಚ್ಚು ಇಳುವರಿ ಬರುತ್ತದೆ. ಆದಷ್ಟು ಯೂರಿಯಾ ಉಪಯೋಗಿಸುವುದನ್ನು ತಪ್ಪಿಸಬೇಕು ಎಂದು ಅವರು ಸಲಹೆ ನೀಡಿದರು.

ಮೆಣಸಿನಕಾಯಿ ತಳಿಯ ತಾಕು
ಮೆಣಸಿನಕಾಯಿ ತಳಿಯ ತಾಕು
ಬೈರೇಶ್
ಬೈರೇಶ್
ಬಸವರಾಜಯ್ಯ
ಬಸವರಾಜಯ್ಯ

ಮೇಳಕ್ಕೆ ಬಂದವರ ಅನಿಸಿಕೆಗಳು... ಕೃಷಿ ಬಗ್ಗೆ ಇನ್ನಷ್ಟು ಒಲವು ಮನೆಗೆ ಉಪಯುಕ್ತ ಆಗುವಂತಹ ತರಕಾರಿಗಳನ್ನು ಕಡಿಮೆ ಜಾಗದಲ್ಲಿ ಬೆಳೆಯುವಂತಹ ಮಾದರಿ ಕೃಷಿ ಪದ್ಧತಿ ಗಮನ ಸೆಳೆಯಿತು. ಕೇವಲ ಒಂದು ಸಾಲು ತರಕಾರಿ ಬೆಳೆದರೆ ಮನೆಗೆ ಸಾಕಾಗುವಷ್ಟು ಲಭ್ಯವಾಗುತ್ತದೆ. ಮೇಳದಿಂದ ಕೃಷಿ ಬಗ್ಗೆ ಇನ್ನಷ್ಟು ಒಲವು ಮೂಡಿದೆ. – ಶಬ್ಬೀರ್ ಕೋಳಾಲ ಗುಬ್ಬಿ ತಾಲ್ಲೂಕು ತಂತ್ರಜ್ಞಾನದ ಮಾಹಿತಿ ಲಭ್ಯ ತೋಟಗಾರಿಕೆ ಮೇಳದಿಂದ ಕೃಷಿಗೆ ಸಂಬಂಧಿಸಿದ ಆಧುನಿಕ ತಂತ್ರಜ್ಞಾನದ ಬಗ್ಗೆ ಮಾಹಿತಿಯನ್ನು ಪಡೆಯಲು ಅನುಕೂಲವಾಯಿತು. – ಬೈರೇಶ್ ತಿಪಟೂರು ಪ್ರಚಾರ ಬೇಕಿತ್ತು ಐಐಎಚ್‌ಆರ್‌ನ ತಂತ್ರಜ್ಞಾನದಿಂದ ಕಡಿಮೆ ನೀರನ್ನು ಬಳಸಿ ಹೆಚ್ಚು ಇಳುವರಿ ಕೊಡುವಂತಹ ತರಕಾರಿ ಬೆಳೆಯಬಹುದು ಎಂಬ ಮಾಹಿತಿ ಲಭ್ಯವಾಯಿತು. ಮೇಳದಿಂದ ರೈತರಿಗೆ ಬಹಳ ಅನುಕೂಲವಾಗುತ್ತಿದೆ. ಇನ್ನಷ್ಟು ಪ್ರಚಾರ ಬೇಕಿತ್ತು. –ಬಸವರಾಜಯ್ಯ ನಿವೃತ್ತ ಬ್ಯಾಂಕ್ ಉದ್ಯೋಗಿ ಆಲಂಬಾಡಿ ಕೆ.ಆರ್.ಪೇಟೆ ಮಂಡ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT