ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಷ್ಟ್ರೀಯ ನಾಟಕ ಶಾಲೆ: ನಾಟಕೋತ್ಸವಕ್ಕೆ ಚಾಲನೆ

Published : 12 ಜುಲೈ 2022, 19:36 IST
ಫಾಲೋ ಮಾಡಿ
Comments

ಬೆಂಗಳೂರು: ರಾಷ್ಟ್ರೀಯ ನಾಟಕ ಶಾಲೆಯ (ಎನ್‌ಎಸ್‌ಡಿ) ಬೆಂಗಳೂರು ವಿಭಾಗ ಹಮ್ಮಿಕೊಂಡಿರುವ ‘ಪೂರ್ವೋತ್ತರ್ ರಾಷ್ಟ್ರೀಯ ನಾಟ್ಯ ಉತ್ಸವ–2022’ಕ್ಕೆ ಮಂಗಳವಾರ ಚಾಲನೆ ದೊರೆತಿದೆ.

ದೆಹಲಿ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕ ರಮೇಶ್‌ ಚಂದ್ರ ಗೌರ ಮಂಗಳವಾರಸುದ್ದಿಗೋಷ್ಠಿಯಲ್ಲಿ ಮಾತನಾಡಿ, ’ಸ್ವಾತಂತ್ರ್ಯದ ಅಮೃತ ಮಹೋತ್ಸದ ಅಂಗವಾಗಿ ಎನ್‌ಎಸ್‌ಡಿ ಮತ್ತು ಕರ್ನಾಟಕ ನಾಟಕ ಅಕಾಡೆಮಿ ಸಹಯೋಗದಲ್ಲಿ ಈ ನಾಟಕೋತ್ಸವ ನಡೆಯಲಿದೆ. ನಗರದ ಕಲಾಗ್ರಾಮ ಮಲ್ಲತ್ತಹಳ್ಳಿಯ ಸಾಂಸ್ಕೃತಿಕ ಸಮುಚ್ಚಯ ಭವನದಲ್ಲಿ ಆಯೋಜಿಸಲಾಗಿದೆ‘ ಎಂದು ಅವರು ಮಾಹಿತಿ ನೀಡಿದರು.

‘ಜುಲೈ 16ರ ವರೆಗೆ ಈಶಾನ್ಯ ರಾಜ್ಯಗಳ ನಾಟಕಗಳನ್ನು ಪ್ರದರ್ಶಿಸಲಾಗುತ್ತದೆ. ಇತರೆ ರಾಜ್ಯಗಳ ಪ್ರೇಕ್ಷಕರು ಮತ್ತು ಕಲಾವಿದರು ವಿವಿಧ ರಾಜ್ಯಗಳೊಂದಿಗೆ ಸಂಪರ್ಕ ಸಾಧಿಸಿ ಅಲ್ಲಿನ ಸಂಸ್ಕೃತಿಯನ್ನು ಅರಿತುಕೊಳ್ಳಲು ಸಹಾಯಕವಾಗಿದೆ. ನಾಟಕವು ಪ್ರೇಕ್ಷಕರ ಮನದಾಳಕ್ಕೆ ಹೊಕ್ಕುವಂತಹ ಒಂದು ಅದ್ಭುತ ಕಲೆಯಾಗಿದೆ’
ಎಂದು ರಮೇಶ್‌ ಚಂದ್ರ ಗೌರ ಅವರು ಹೇಳಿದರು.

‘ಜುಲೈ 13ಕ್ಕೆ ಓಯಸಿಸ್ ಸೌಗೈಜಿಮ್ ನಿರ್ದೇಶನದ ‘ಬ್ಲಡ್ ಸ್ಪಾಟ್ 2.0’, ಜುಲೈ 14ಕ್ಕೆ ಅಸ್ಸಾಮಿ ಭಾಷೆಯ, ಸಿಮಂತ್ ಫುಕನ್ ನಿರ್ದೇಶನದ ‘ರೂಪಲೀಮ್’, ಜುಲೈ 15ಕ್ಕೆ ನಾಗಾಭಾಷೆಯ ಉಟೋ ಚಿಶಿ ನಿರ್ದೇಶನದ ‘ದಿ ಚಾಂಪಿ
ಯನ್’ ಮತ್ತು ಜುಲೈ 16ಕ್ಕೆಮಣಿಪುರಿ ಭಾಷೆಯ ಲಾಯ್ಟಂಗ್‌ಬಮ್ ಪರಿನ್ಗಂಬ ನಿರ್ದೇಶನದ ‘ಹೇ ಚೆಟ್ಲೋ‘(ದೂರ ಹೋಗು) ಎಂಬ ನಾಟಕಗಳನ್ನು ಪ್ರದರ್ಶಿಸಲಾಗುತ್ತದೆ. ಎಲ್ಲರಿಗೂ ಉಚಿತ ಪ್ರವೇಶವಿದೆ’ ಎಂದೂ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT