ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ವಿಫ್ಟ್‌’ ಕಾರಿನಲ್ಲಿ ಡ್ರಗ್ಸ್; ಎರ್ನಾಕುಲಂನಲ್ಲಿ ಹಶೀಷ್ ಜಪ್ತಿ

Last Updated 4 ಅಕ್ಟೋಬರ್ 2021, 16:37 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ‘ಸ್ವಿಫ್ಟ್’ ಕಾರಿನಲ್ಲಿ ಡ್ರಗ್ಸ್ ಪತ್ತೆಯಾಗಿದ್ದ ಪ್ರಕರಣದ ತನಿಖೆ ಮುಂದುವರಿಸಿರುವ ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕ (ಎನ್‌ಸಿಬಿ) ಅಧಿಕಾರಿಗಳು, ಕೇರಳದ ಎರ್ನಾಕುಲಂನಲ್ಲಿ ಬಿರುಸಿನ ಕಾರ್ಯಾಚರಣೆ ನಡೆಸಿ 3 ಕೆ.ಜಿ 500 ಗ್ರಾಂ ಹಶೀಷ್ ಜಪ್ತಿ ಮಾಡಿದ್ದಾರೆ.

ಗಾಂಜಾವನ್ನು 8 ಬಾಕ್ಸ್‌ಗಳಲ್ಲಿ ತುಂಬಿ, ಕೊರಿಯರ್ ಹೆಸರಿನಲ್ಲಿ ಸ್ವಿಫ್ಟ್‌ ಕಾರಿನಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದ ಜಾಲವನ್ನು ಎನ್‌ಸಿಬಿ ಇತ್ತೀಚೆಗೆ ಭೇದಿಸಿತ್ತು. 137 ಕೆ.ಜಿ ಗಾಂಜಾ ಜಪ್ತಿ ಮಾಡಿ, ಸ್ವಿಗ್ಗಿ ಡೆಲಿವರಿ ಬಾಯ್‌ ಸೇರಿ ಏಳು ಮಂದಿಯನ್ನು ಬಂಧಿಸಿತ್ತು.

‘ಬಂಧಿತ ಆರೋಪಿಗಳ ಜೊತೆ ಕೇರಳದಲ್ಲಿರುವ ಕೆಲ ವ್ಯಕ್ತಿಗಳು ಒಡನಾಟ ಹೊಂದಿದ್ದರು. ಅವರೆಲ್ಲ ಡ್ರಗ್ಸ್ ದಂಧೆಯಲ್ಲಿ ತೊಡಗಿರುವುದು ತನಿಖೆಯಿಂದ ಗೊತ್ತಾಗಿತ್ತು. ಇದೇ ಮಾಹಿತಿಯನ್ನು ಎನ್‌ಸಿಬಿ ಕೊಚ್ಚಿ ವಲಯದ ಅಧಿಕಾರಿಗಳ ಜೊತೆ ಹಂಚಿಕೊಳ್ಳಲಾಗಿತ್ತು’ ಎಂದು ಎನ್‌ಸಿಬಿ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‘ತಮ್ಮ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದ ಕೊಚ್ಚಿ ವಲಯ ಅಧಿಕಾರಿಗಳು, ಎರ್ನಾಕುಲಂನಲ್ಲಿ 3 ಕೆ.ಜಿ 500 ಗ್ರಾಂ ಹಶೀಷ್ ಜಪ್ತಿ ಮಾಡಿದ್ದಾರೆ. ಬಹ್ರೇನ್‌ನಿಂದ ಕೋರಿಯರ್ ಮೂಲಕ ಎರ್ನಾಕುಲಂಗೆ ಡ್ರಗ್ಸ್ ಬಂದಿತ್ತು ಎನ್ನಲಾಗಿದ್ದು, ಈ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ. ಮತ್ತಷ್ಟು ಮಂದಿ ದಂಧೆಯಲ್ಲಿ ಭಾಗಿಯಾಗಿರುವ ಮಾಹಿತಿ ಇದೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT