ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಸಿಬಿ ಕಾರ್ಯಾಚರಣೆ; ಬ್ಯಾಗ್‌ಗಳಲ್ಲಿ ₹ 25 ಲಕ್ಷ ಮೌಲ್ಯದ ಡ್ರಗ್ಸ್

ಕೇರಳದಿಂದ ದೋಹಾಕ್ಕೆ ಕಳುಹಿಸುತ್ತಿದ್ದ ಪಾರ್ಸೆಲ್‌
Last Updated 7 ಜೂನ್ 2021, 22:38 IST
ಅಕ್ಷರ ಗಾತ್ರ

ಬೆಂಗಳೂರು: ಲ್ಯಾಪ್‌ಟಾಪ್‌ ಬ್ಯಾಗ್‌ಗಳಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದ ₹ 25 ಲಕ್ಷ ಮೌಲ್ಯದ ಮಾದಕ ವಸ್ತುವನ್ನು (ಡ್ರಗ್ಸ್)‌ ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕ (ಎನ್‌ಸಿಬಿ) ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

‘ಕೇರಳದಿಂದ ದೋಹಾಕ್ಕೆ ಪಾರ್ಸೆಲ್‌ ಮೂಲಕ ಡ್ರಗ್ಸ್ ಸಾಗಿಸುತ್ತಿದ್ದ ಮಾಹಿತಿ ಬಂದಿತ್ತು. ಜೂನ್ 4ರಂದು ಕಾರ್ಯಾಚರಣೆ ನಡೆಸಿ, ಅಂತರರಾಷ್ಟ್ರೀಯ ಕೊರಿಯರ್ ಘಟಕದಲ್ಲಿ ಪಾರ್ಸೆಲ್ ಬಾಕ್ಸ್ ಪತ್ತೆ ಮಾಡಲಾಯಿತು. ಅದರಲ್ಲಿದ್ದ 70 ಬ್ಯಾಗ್‌ಗಳ ಪೈಕಿ 13 ಬ್ಯಾಗ್‌ಗಳಲ್ಲಿ 3 ಕೆ.ಜಿ 800 ಗ್ರಾಂ ಚರಸ್ ಇತ್ತು’ ಎಂದು ಎನ್‌ಸಿಬಿ ಬೆಂಗಳೂರು ವಲಯದ ನಿರ್ದೇಶಕ ಅಮಿತ್ ಗಾವಟೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಾರ್ಸೆಲ್ ವಿಳಾಸದ ಆಧಾರದಲ್ಲಿ ಆರ್‌. ಖಾನ್ ಹಾಗೂ ಆತನ ಸಹಚರ ಎಸ್‌. ಹುಸೈನ್‌ನನ್ನು ಬೆಂಗಳೂರಿ
ನಲ್ಲಿ ಭಾನುವಾರ ಬಂಧಿಸಲಾಗಿದೆ’ ಎಂದೂ ಹೇಳಿದರು.

ಕಾಸರಗೋಡಿನ ಪೆಡ್ಲರ್‌ಗಳು: ‘ಕಾಸರಗೋಡಿಯಲ್ಲಿರುವ ಪೆಡ್ಲರ್‌ಗಳು ಪಾರ್ಸೆಲ್ ಮೂಲಕ ದೋಹಾಕ್ಕೆ ಡ್ರಗ್ಸ್ ಕಳುಹಿಸುತ್ತಿದ್ದರು. ಈ ಜಾಲದ ಇಬ್ಬರು ಮಾತ್ರ ಸದ್ಯ ಸಿಕ್ಕಿಬಿದ್ದಿದ್ದು, ಉಳಿದವರ ಪತ್ತೆಗೂ ತನಿಖೆ ಮುಂದುವರಿಸಲಾಗಿದೆ’ ಎಂದೂ ತಿಳಿಸಿದರು.

ಭದ್ರತಾ ಕೆಲಸಕ್ಕೆ ಬಂದು ಕಳವು: ಬಂಧನ

ಬೆಂಗಳೂರು: ಭದ್ರತಾ ಕೆಲಸಕ್ಕಾಗಿ ನಗರಕ್ಕೆ ಬಂದು ತಮ್ಮದೇ ಗ್ಯಾಂಗ್ ಕಟ್ಟಿಕೊಂಡು ಮನೆಗಳಲ್ಲಿ ಕಳವು ಮಾಡುತ್ತಿದ್ದ ಆರೋಪದಡಿ ನೇಪಾಳದ ಆರು ಮಂದಿಯನ್ನು ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದಾರೆ.

‘ಬಂಧಿತರಿಂದ ₹ 17 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ಸಾಮಗ್ರಿ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT