ಬೆಂಗಳೂರು: ವೈದ್ಯಕೀಯ ಶಿಕ್ಷಣ ಕೋರ್ಸ್ ಪ್ರವೇಶಕ್ಕೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ಟಿಎ) ನಡೆಸಿದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ (ನೀಟ್-ಯುಜಿ) ನಾರಾಯಣ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ಅಖಿಲ ಭಾರತ ಮಟ್ಟದಲ್ಲಿ 4, 7, 12, 14, 18, 20 ಮತ್ತು 35ನೇ ಸ್ಥಾನವನ್ನು ಸಂಸ್ಥೆಯ ವಿದ್ಯಾರ್ಥಿಗಳು ಗಳಿಸಿದ್ದಾರೆ. ನವದೆಹಲಿಯ ಮೃಣಾಲ್ ಕಿಶೋರ್ ಝಾ (4), ಪಂಜಾಬ್ನ ಕೇಶವ್ ಮಿತ್ತಲ್ (7), ನವದೆಹಲಿಯ ಆಶಿ ಸಿಂಗ್ (12), ರಾಜಸ್ಥಾನದ ಸೌಮ್ಯಾ ಶರ್ಮಾ (14), ತೆಲಂಗಾಣದ ಕಾಕರ್ಲಾ ಜೀವನ್ ಸಾಯಿ ಕುಮಾರ್ (18) ಮತ್ತು ಪಶ್ಚಿಮ ಬಂಗಾಳದ ರೂಪ್ಯಾನ್ ಪಾಲ್ (20) ಅವರು ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

ಅಖಿಲ ಭಾರತ ಮಟ್ಟದಲ್ಲಿ ಅಗ್ರ 100 ಸ್ಥಾನಗಳಲ್ಲಿ 21 ಸ್ಥಾನಗಳು ಹಾಗೂ ಅಗ್ರ ಸಾವಿರ ಸ್ಥಾನಗಳಲ್ಲಿ 84 ಸ್ಥಾನಗಳನ್ನು ಸಂಸ್ಥೆಯ ವಿದ್ಯಾರ್ಥಿಗಳು ಪಡೆದಿದ್ದಾರೆ.

ಈ ಸಾಧಕರನ್ನು ಅಭಿನಂದಿಸಿರುವ ನಾರಾಯಣ ಶಿಕ್ಷಣ ಸಂಸ್ಥೆಗಳ ನಿರ್ದೇಶಕರಾದ ಡಾ.ಪಿ. ಸಿಂಧೂರ ನಾರಾಯಣ ಮತ್ತು ಪಿ.ಶರಣಿ ನಾರಾಯಣ, ‘ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಂಸ್ಥೆಯು ಉತ್ತಮ ಸಾಧನೆ ಮಾಡುತ್ತಿದೆ. ವ್ಯವಸ್ಥಿತ ಪರೀಕ್ಷೆಗಳು, ತಜ್ಞ ಅಧ್ಯಾಪಕರ ಮಾರ್ಗದರ್ಶನ, ತಂತ್ರಜ್ಞಾನ ಆಧಾರಿತ ಕಲಿಕಾ ಚೌಕಟ್ಟುಗಳು ಮತ್ತು ವಿದ್ಯಾರ್ಥಿ ಕೇಂದ್ರೀಕೃತ ವಿಶೇಷ ಕಾರ್ಯಕ್ರಮಗಳೇ ಇದಕ್ಕೆ ಕಾರಣ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.