ಗುರುವಾರ , ನವೆಂಬರ್ 14, 2019
19 °C

ನಗರಸಭೆಗೆ ಮೇಲ್ದರ್ಜೆ: ಆಕ್ಷೇಪಣೆ ಸಲ್ಲಿಸಲು ಅಧಿಸೂಚನೆ

Published:
Updated:

ನೆಲಮಂಗಲ: ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ನಗರಸಭೆ ವ್ಯಾಪ್ತಿಗೆ ಸೇರಿಸಿರುವ ಗ್ರಾಮಗಳ ಬಗ್ಗೆ ಯಾವುದಾದರೂ ಆಕ್ಷೇಪಣೆಗಳಿದ್ದಲ್ಲಿ 30 ದಿನದ ಒಳಗೆ ಸಲ್ಲಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಶಿವಪ್ರಸಾದ್‌ ತಿಳಿಸಿದ್ದಾರೆ.

ಪುರಸಭಾ ವ್ಯಾಪ್ತಿಯ ಸಂಪೂರ್ಣ ಪಟ್ಟಣ ಪ್ರದೇಶ, ಅರಿಶಿನಕುಂಟೆ, ವಾಜರಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಭಾಗಶಃ (ಸಂಪೂರ್ಣ ಕಂದಾಯ ಗ್ರಾಮ, ಮಲ್ಲಾಪುರ, ಕೂಲಿಪುರ), ವಿಶ್ವೇಶ್ವರಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭಾಗಶಃ (ಸಂಪೂರ್ಣ ಕಂದಾಯ ಗ್ರಾಮ, ಕೆಂಪಲಿಂಗನಹಳ್ಳಿ, ಬ್ಯಾಡರಹಳ್ಳಿ), ಬಸವನಹಳ್ಳಿ ಗ್ರಾಮ ಪಂಚಾಯಿತಿಯನ್ನು ನಗರಸಭೆ ವ್ಯಾಪ್ತಿಗೆ ಸೇರಿಸಲಾಗಿದೆ.

ಪ್ರತಿಕ್ರಿಯಿಸಿ (+)