ನೆಲಮಂಗಲ: ‘ಬಡ ಹಾಗೂ ಮಧ್ಯಮ ವರ್ಗದ ಮಹಿಳೆಯರನ್ನು ಸ್ವಾವಲಂಬಿಗಳಾಗಿಸಲು ಉಚಿತ ದ್ವಿಚಕ್ರ, ಕಾರು ಚಾಲನಾ ತರಬೇತಿಯನ್ನು ಹಿತಚಿಂತನ ಟ್ರಸ್ಟ್ ಪ್ರಾರಂಭಿಸಿದೆ’ ಎಂದು ಟ್ರಸ್ಟ್ನ ವ್ಯವಸ್ಥಾಪಕ ಟ್ರಸ್ಟಿ ವಿ.ರಾಮಸ್ವಾಮಿ ತಿಳಿಸಿದರು.

ತಾಲ್ಲೂಕಿನ ಬೊಮ್ಮಶೆಟ್ಟಿಹಳ್ಳಿಯಲ್ಲಿ ಟ್ರಸ್ಟ್ ಮಹಿಳೆಯರಿಗೆ ಪ್ರಾರಂಭಿಸಿರುವ ಉಚಿತ ದ್ವಿಚಕ್ರ ಮತ್ತು ಕಾರು ಚಾಲನಾ ತರಬೇತಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಶಾಲೆಯ ಆವರಣದಲ್ಲಿ ವಾಹನ ತರಬೇತಿ ಕಚೇರಿ ತೆರೆದಿದ್ದು, ಮಹಿಳೆಯರು ನೋಂದಾಯಿಸಿಕೊಂಡು ಇದರ ಪ್ರಯೋಜನ ಪಡೆಯಬಹುದು’ ಎಂದರು.

ಟ್ರಸ್ಟ್ ಅಧ್ಯಕ್ಷೆ ಪುಟ್ಟಮ್ಮ ಮಾತನಾಡಿ, ‘ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದು, ಉಚಿತ ವಾಹನ ಚಾಲನಾ ತರಬೇತಿ ಪಡೆದು ಚಾಲಕ ವೃತ್ತಿಯಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗಿದೆ. ಗೃಹಿಣಿಯರಿಗೆ ಮಕ್ಕಳನ್ನು ಶಾಲೆಗೆ ಬಿಡಲು ಹಾಗೂ ಇತರೆ ಕೆಲಸಗಳಿಗೆ ಬೇರೆಯವರ ಅವಲಂಬನೆಯನ್ನು ತಪ್ಪಿಸಲಿದೆ’ ಎಂದರು.

ಟ್ರಸ್ಟಿ ನರಸಿಂಹಮೂರ್ತಿ ಟ್ರಸ್ಟ್ ವತಿಯಿಂದ ವೃದ್ಧರಿಗೆ ಉಚಿತ ಕನ್ನಡಕ ವಿತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.