ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Video | ನೆಟ್ಟಕಲ್ಲಪ್ಪ ಈಜು ಚಾಂಪಿಯನ್‌ಷಿಪ್‌: ಲಿಖಿತ್, ಶ್ರೀಹರಿ ನಟರಾಜ್ ಮಿಂಚು

Published : 27 ನವೆಂಬರ್ 2023, 9:41 IST
Last Updated : 27 ನವೆಂಬರ್ 2023, 9:41 IST
ಫಾಲೋ ಮಾಡಿ
Comments

ಉದ್ಯಾನನಗರಿ ಬೆಂಗಳೂರಿನ ನೆಟ್ಟಕಲ್ಲಪ್ಪ ಈಜುಕೇಂದ್ರದಲ್ಲಿ 2023ರ ನ.25 ಮತ್ತು 26ರಂದು ನಡೆದ ನೆಟ್ಟಕಲ್ಲಪ್ಪ ಅಖಿಲ ಭಾರತ ಈಜು ಚಾಂಪಿಯನ್‌ಷಿಪ್‌ನಲ್ಲಿ ಒಲಿಂಪಿಯನ್ ಶ್ರೀಹರಿ ನಟರಾಜ್, ಸಜನ್ ಪ್ರಕಾಶ್ ಅವರ ನಿಕಟ ಪೈಪೋಟಿಯು ರಸದೌತಣ ನೀಡಿತು. ಅಂತರರಾಷ್ಟ್ರೀಯ ಈಜುಪಟುಗಳಾದ ಲಿಖಿತ್ ಎಸ್‌ಪಿ, ಶಿವ ಶ್ರೀಧರ್ ಮಿಂಚಿದರು. ಮಹಿಳೆಯರ ವಿಭಾಗದ ಈಜುಪಟುಗಳೂ ತಾವು ಯಾರಿಗೂ ಕಮ್ಮಿಯಿಲ್ಲ ಎಂದು ಸಾಬೀತುಪಡಿಸಿದರು. ರಿಧಿಮಾ ವೀರೇಂದ್ರಕುಮಾರ್, ನೀನಾ ವೆಂಕಟೇಶ್ ಸೇರಿದಂತೆ ಹಲವರು ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು. ಎಲ್ಲಕ್ಕಿಂತ ಮುಖ್ಯವಾಗಿ ಸ್ಕಿನ್ಸ್‌ (SKINS) ವಿಭಾಗದ ಸ್ಪರ್ಧೆಗಳು ರೋಚಕ ರಸದೌತಣ ನೀಡಿದವು. ಸತತ ಎರಡನೇ ವರ್ಷ ಸ್ಕಿನ್ಸ್‌ ಸ್ಪರ್ಧೆಗಳಲ್ಲಿ ದೇಶದ ಬೇರೆ ಬೇರೆ ರಾಜ್ಯಗಳ ಈಜುಪಟುಗಳು ಭಾಗವಹಿಸಿದರು. ಆಕರ್ಷಕ ನಗದು ಪುರಸ್ಕಾರಗಳು, ಮಿರಿಮಿರಿ ಮಿಂಚುವ ಪದಕಗಳನ್ನು ಗೆದ್ದ ಈಜುಪಟುಗಳ ಸಂಭ್ರಮ ಮುಗಿಲುಮುಟ್ಟಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT