‘ಹೊಸ ಶಿಕ್ಷಣ ನೀತಿ ಜಾರಿಯಾಗಲಿ’

ಶನಿವಾರ, ಜೂಲೈ 20, 2019
28 °C

‘ಹೊಸ ಶಿಕ್ಷಣ ನೀತಿ ಜಾರಿಯಾಗಲಿ’

Published:
Updated:
Prajavani

ಬೊಮ್ಮನಹಳ್ಳಿ: ‘ಪ್ರಸಕ್ತ ಶಿಕ್ಷಣ ವ್ಯವಸ್ಥೆಯು ವಿದ್ಯಾರ್ಥಿಗಳಲ್ಲಿ ಸ್ವತಂತ್ರ ಆಲೋಚನಾ ಶಕ್ತಿ ಬೆಳೆಸುತ್ತಿಲ್ಲ. ಹೀಗಾಗಿ ಹೊಸ ಶಿಕ್ಷಣ ನೀತಿ ಜಾರಿ ಆಗುವುದು ಸೂಕ್ತ’ ಎಂದು ಶಿಕ್ಷಣ ತಜ್ಞ ಪ್ರೊ.ಎಚ್.ಎ.ರಂಗನಾಥ್ ಅಭಿಪ್ರಾಯಪಟ್ಟರು.

ಎಲೆಕ್ಟ್ರಾನಿಕ್ ಸಿಟಿಯ ಐಎಸ್‌ಬಿಆರ್ ಕಾಲೇಜಿನಲ್ಲಿ ಶುಕ್ರವಾರ ನಡೆದ ‘2019- ಮ್ಯಾನೇಜ್‌ಮೆಂಟ್ ಪಿಜಿ ಡಿಪ್ಲಮೋ ತರಗತಿ’ಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶದಲ್ಲಿ 1,600ಕ್ಕೂ ಹೆಚ್ಚು ಮ್ಯಾನೇಜ್‌ಮೆಂಟ್ ಕಾಲೇಜುಗಳು ಇವೆಯಾದರೂ ಅರ್ಧದಷ್ಟು ಕಾಲೇಜುಗಳಲ್ಲಿ ನುರಿತ ಅಧ್ಯಾಪಕರಿಲ್ಲ ಎಂದರು. ಉದ್ಯಮಿ ವಾಣಿಶ್ರೀ ದೇಶಪಾಂಡೆ ಮಾತನಾಡಿ, ‘ಪೋಷಕರು ಮಕ್ಕಳಲ್ಲಿ ಕೀಳರಿಮೆ ಮೂಡದಂತೆ ಎಚ್ಚರ ವಹಿಸಬೇಕು. ಅವರ ಮೇಲೆ ವಿಶ್ವಾಸ ಇರಿಸುವುದನ್ನೇ ಒಂದು ಸಾಧನವಾಗಿ ಬಳಸುವ ಜಾಣ್ಮೆ ಇರಬೇಕು’ ಎಂದು ಪೋಷಕರಿಗೆ ಕಿವಿಮಾತು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !