ಪ್ರವೇಶ ದ್ವಾರದ ಪ್ಲಾಜಾ ಎಲಿವೇಟೆಡ್ ವಾಕ್-ವೇ ಸೈಕ್ಲಿಂಗ್ ಪಥ ನೀರಿನ ಝರಿ/ಚಿಲುಮೆ/ಕಾರಂಜಿ ಫುಡ್ ಕೋರ್ಟ್ ಮಕ್ಕಳು ಆಟವಾಡುವ ಜಾಗ ಸಾಕು ಪ್ರಾಣಿಗಳನ್ನು ಕರೆದುಕೊಂಡು ಬರುವ ಜಾಗ ಶೌಚಾಲಯ ಮತ್ತು ಇತರೆ ಮೂಲಸೌಕರ್ಯಗಳನ್ನು ವೃಕ್ಷೋದ್ಯಾನ ಒಳಗೊಳ್ಳಲಿದೆ ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದರು. ಎಲಿವೇಟೆಡ್-ವಾಕ್ ವೇಸ್ ವೀಕ್ಷಣಾ ಗೋಪುರ ಆಡಳಿತ ವಿಭಾಗದ ನವೀಕರಣ ಓಪನ್ ಆ್ಯಂಫಿ-ಥಿಯೇಟರ್ ಅಭಿವೃದ್ಧಿಪಡಿಸಲಾಗುವುದು. ಫೇಸ್-2ರಲ್ಲಿ ಸ್ಪೋರ್ಟ್ ಹಬ್ ಕಲೆ ಮತ್ತು ಸಂಸ್ಕೃತಿಗಳ ಕೇಂದ್ರ ಸಮುದಾಯ ಭವನವನ್ನು ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದರು.