ಗುರುವಾರ , ಜನವರಿ 23, 2020
19 °C
ಹಿಂದೂಗಳನ್ನು ಕೆಣಕದಿರಿ ಎಂದು ಪ್ರಚೋದನಕಾರಿ ಭಾಷಣ

ಶಾಸಕ ರೆಡ್ಡಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ‘ಹಿಂದೂಗಳನ್ನು ಕೆಣಕದಿರಿ’ ಎಂದು ಪ್ರಚೋದನಕಾರಿ ಭಾಷಣ ಮಾಡಿದ ಬಳಿಕ ಬಂಧನ ಭೀತಿ ಎದುರಿಸುತ್ತಿದ್ದ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಇಲ್ಲಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್‌ ನ್ಯಾಯಾಲಯ ಶುಕ್ರವಾರ ತಿರಸ್ಕರಿಸಿತು.

ವಕೀಲ ಸಿದ್ಧಾರೆಡ್ಡಿ ಅವರ ಮೂಲಕ ರೆಡ್ಡಿ ಅರ್ಜಿ ಸಲ್ಲಿಸಿದ್ದರು. ‘ಕೋಮು ಸೌಹಾರ್ದ ಕದಡುವ ಗಂಭೀರ ಪ್ರಯತ್ನ ನಡೆಸಿರುವುದರಿಂದ ರೆಡ್ಡಿಯವರಿಗೆ ಜಾಮೀನು ನೀಡಬಾರದು’ ಎಂದು ಸರ್ಕಾರಿ ಅಭಿಯೋಜಕ ಸುಂಕಣ್ಣ ಅವರ ವಾದವನ್ನು ನ್ಯಾಯಾಧೀಶರು ಎತ್ತಿಹಿಡಿದರು.

ನಗರದಲ್ಲಿ ಜನವರಿ 3ರಂದು ದೇಶಭಕ್ತ ನಾಗರಿಕರ ವೇದಿಕೆಯು ಪೌರತ್ವ (ತಿದ್ದುಪಡಿ) ಕಾಯ್ದೆ ಪರವಾಗಿ ಹಮ್ಮಿಕೊಂಡಿದ್ದ ಜಾಗೃತಿ ಮೆರವಣಿಗೆಯಲ್ಲಿ ಮುಸ್ಲಿಮರ ವಿರುದ್ಧ ರೆಡ್ಡಿ ಮಾತನಾಡಿದ್ದರು. ಬಳಿಕ ಅವರ ವಿರುದ್ಧ ಗಾಂಧಿನಗರ ಠಾಣೆಯಲ್ಲಿ ಮೂರು ಎಫ್‌ಐಆರ್‌ ದಾಖಲಾಗಿದ್ದವು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು