ಬೆಂಗಳೂರು: ಟ್ರಿನಿಟಿ ನಿಲ್ದಾಣದ ಬಳಿ ಮೆಟ್ರೊ ಮಾರ್ಗದ ವಯಡಕ್ಟ್ ದುರಸ್ತಿ ಕಾರ್ಯ ಇನ್ನೂ ಪೂರ್ಣಗೊಳ್ಳದ ಕಾರಣ ಸೋಮವಾರವೂ (ಡಿ.31) ಎಂ.ಜಿ.ರಸ್ತೆ– ಇಂದಿರಾನಗರ ನಿಲ್ದಾಣದ ನಡುವೆ ಮೆಟ್ರೊ ಸಂಚರಿಸುವುದಿಲ್ಲ.

ಡಿ.28ರಂದು ಸ್ಥಗಿತಗೊಂಡಿದ್ದ ಸಂಚಾರವನ್ನು 31ರಿಂದ ಆರಂಭಿಸುವುದಾಗಿ ಮೆಟ್ರೊ ನಿಗಮ ಹೇಳಿತ್ತು. ಆದರೆ, ಹಳಿ ಪರಿಶೀಲನೆ, ಸಿಗ್ನಲ್ ವ್ಯವಸ್ಥೆಯ ಪರೀಕ್ಷೆ ಇತ್ಯಾದಿಗಾಗಿ ಒಂದು ದಿನ ಬೇಕಾಗಿದೆ. ಜ.1ರಿಂದ ಈ ಮಾರ್ಗದಲ್ಲಿ ಯಥಾ ಪ್ರಕಾರ ರೈಲು ಸಂಚಾರ ನಡೆಸುವುದಾಗಿ ನಿಗಮ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಯಾಣಿಕರ ಅನುಕೂಲಕ್ಕಾಗಿ ಕಬ್ಬನ್ ಪಾರ್ಕ್‌ನಿಂದ ಬೈಯಪ್ಪನಹಳ್ಳಿವರೆಗೆ ಬಿಎಂಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ವ್ಯವಸ್ಥೆ ಕಲ್ಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.