ಬೆಂಗಳೂರು: ಪ್ರಸಕ್ತ ಸಮಾಜದ ಅಭ್ಯುದಯ ಮತ್ತು ಪ್ರಗತಿಯ ಸಾಧ್ಯತೆಗಳು ತಿರುವು ದಾರಿಗೆ ಬಂದು ನಿಂತಿದೆ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಜೇಮ್ಸ್ ರಾಬಿನ್ಸನ್ ಅಭಿಪ್ರಯಪಟ್ಟರು.

ಟಾಟಾ ಟ್ರಸ್ಟ್ ಸಹಭಾಗಿತ್ವದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಒನ್ ವೇ ಸ್ಟ್ರೀಟ್’ ಎಂಬ ಸಿದ್ಧಾಂತವನ್ನು ವಿವರಿಸಿದ ಅವರು, ‘ನಾನು ಸಮೃದ್ಧಿ ಮತ್ತು ಪ್ರಗತಿ ಬಗ್ಗೆ ಯೋಚಿಸುವಾಗ, ಈ ವಿಚಾರಗಳ ಕುರಿತ ಚಿಂತನೆ ಯಾವಾಗ ಪ್ರಾರಂಭವಾಯಿತು’ ಎಂಬ ಪ್ರಶ್ನೆ ತಲೆದೋರುತ್ತದೆ. ಇದನ್ನು ವಿಶ್ವ ಇತಿಹಾಸದ ಅನೇಕ ಹಂತಗಳಲ್ಲಿ ಪರಿಗಣಿಸಬಹುದು. ಆದರೆ, ಅದಕ್ಕೆ ಒಂದು ಉಲ್ಲೇಖದ ಬಿಂದುವಾಗಿ ಇಬ್ಬರು ಸ್ಕಾಟ್ಲೆಂಡ್ ಚಿಂತಕರು 18ನೇ ಶತಮಾನದಲ್ಲಿ ನಡೆದ ನಗರೀಕರಣ, ಕೈಗಾರೀಕರಣ ಮತ್ತು ಸಾಮಾಜಿಕ ಬದಲಾವಣೆಗಳನ್ನು ಗಮನಿಸುತ್ತಾ ಅವರು ಒಂದು ಸಿದ್ಧಾಂತವನ್ನು ರೂಪಿಸಿದರು. ಅದನ್ನೇ ‘ಒನ್ ವೇ ಸ್ಟ್ರೀಟ್ ಸಿದ್ಧಾಂತ’ ಎಂದು ಕರೆಯುತ್ತೇನೆ’ ಎಂದು ಹೇಳಿದರು.

ನೊಬೆಲ್ ಪ್ರಶಸ್ತಿ ಪುರಸ್ಕೃತ ಡೇವಿಡ್ ಮ್ಯಾಕ್ಮಿಲನ್, ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.