ಭಾನುವಾರ, ಜನವರಿ 19, 2020
29 °C

ಓಎಲ್‌ಎಕ್ಸ್‌; ₹ 95 ಸಾವಿರ ಕಳೆದುಕೊಂಡರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ಪೀಠೋಪಕರಣ ಮಾರಾಟ ಮಾಡಲೆಂದು ಓಎಲ್‌ಎಕ್ಸ್ ಜಾಲತಾಣದಲ್ಲಿ ಜಾಹೀರಾತು ಪ್ರಕಟಿಸಿದ್ದ ನಗರದ ಮಹಿಳೆಯನ್ನು ಸಂಪರ್ಕಿಸಿದ್ದ ಅಪರಿಚಿತನೊಬ್ಬ, ಮಹಿಳೆಯ ಖಾತೆಯಿಂದ ₹ 95 ಸಾವಿರ ಡ್ರಾ ಮಾಡಿಕೊಂಡು ವಂಚಿಸಿದ್ದಾನೆ. 

ಈ ಸಂಬಂಧ ಬೈಯಪ್ಪನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಬಳಕೆ ಮಾಡಿದ್ದ ಪೀಠೋಪಕರಣವನ್ನು ಮಾರಾಟ ಮಾಡಲು ಮಹಿಳೆ ಜಾಹೀರಾತು ನೀಡಿದ್ದರು. ಫೋಟೊವನ್ನೂ ಅಪ್‌ಲೋಡ್‌ ಮಾಡಿದ್ದರು. ಕ್ಯಾಂಟಿನ್‌ ಮಾಲೀಕನ ಸೋಗಿನಲ್ಲಿ ಮಹಿಳೆಯನ್ನು ಸಂಪರ್ಕಿಸಿದ್ದ ಆರೋಪಿ, ತನ್ನ ಹೆಸರು ದೀಪಕ್‌ ಕಪೂರ್ ಎಂದು ಹೇಳಿಕೊಂಡಿದ್ದ. ಪೀಠೋಪಕರಣ ಖರೀದಿಸುವುದಾಗಿ ತಿಳಿಸಿದ್ದ. ಮುಂಗಡವಾಗಿ ಹಣ ಪಾವತಿಸುವುದಾಗಿ ಹೇಳಿ ಮಹಿಳೆಯ ಗೂಗಲ್ ಪೇ ಖಾತೆಯ ಮಾಹಿತಿ ಪಡೆದುಕೊಂಡಿದ್ದ’ ಎಂದು ಪೊಲೀಸರು ಹೇಳಿದರು.

‘ಆರಂಭದಲ್ಲಿ ₹ 2 ಮಾತ್ರ ಕಳುಹಿಸಿದ್ದ ಆರೋಪಿ, ಇದು ಪರೀಕ್ಷಾರ್ಥ ಎಂದು ಹೇಳಿದ್ದ. ಬಳಿಕ ಕ್ಯೂಆರ್‌ ಕೋಡ್‌ ಕಳುಹಿಸಿ, ಇದನ್ನು ಸ್ಕ್ಯಾನ್ ಮಾಡಿದರೆ ಪೂರ್ತಿ ಹಣ ಬರುವುದಾಗಿ ತಿಳಿಸಿದ್ದ. ಅದನ್ನು ನಂಬಿದ್ದ ಮಹಿಳೆ ಕೋಡ್‌ ಸ್ಕ್ಯಾನ್ ಮಾಡುತ್ತಿದ್ದಂತೆ ಹಣ ಕಡಿತವಾಗಿದೆ’ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು