ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ ಹ್ಯಾಕಥಾನ್‌: ಸಿಎಂಆರ್‌ಐಟಿಗೆ ಪ್ರಶಸ್ತಿ

Last Updated 4 ಡಿಸೆಂಬರ್ 2020, 21:05 IST
ಅಕ್ಷರ ಗಾತ್ರ

ಬೆಂಗಳೂರು: ಇತ್ತೀಚೆಗೆ ನಡೆದ ರಾಷ್ಟ್ರೀಯ ಮಟ್ಟದ ಆನ್‍ಲೈನ್ ಹ್ಯಾಕಥಾನ್ (ಅಕ್ಸೆಲಾಥನ್ 2.0) ಸ್ಪರ್ಧೆಯಲ್ಲಿನಗರದ ಸಿಎಂಆರ್ ತಾಂತ್ರಿಕ ಕಾಲೇಜು (ಸಿಎಂಆರ್‌ಐಟಿ) ದ್ವಿತೀಯ ಬಹುಮಾನ ಪಡೆದಿದೆ.

ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ (ವಿಟಿಯು) ಸಹಯೋಗದಲ್ಲಿ ಬೆಂಗಳೂರು ಚೇಂಬರ್ ಆಫ್ ಇಂಡಸ್ಟ್ರಿ ಅಂಡ್ ಕಾಮರ್ಸ್ (ಬಿಸಿಐಸಿ) ಆಯೋಜಿಸಿದ್ದ ಈ ಆನ್‍ಲೈನ್ ಹ್ಯಾಕಥಾನ್ ಸ್ಪರ್ಧೆಯಲ್ಲಿ 18 ರಾಜ್ಯಗಳ 40ಕ್ಕೂ ಹೆಚ್ಚು ಕಾಲೇಜುಗಳು ಪಾಲ್ಗೊಂಡಿದ್ದವು. ಈ ಕಾಲೇಜುಗಳ 92 ತಂಡಗಳ 400 ವಿದ್ಯಾರ್ಥಿಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಿದ್ದವು.

‘ತಂತ್ರಜ್ಞಾನವನ್ನು ಬಳಸುವಲ್ಲಿ ಸಾಮಾಜಿಕ ನಾವೀನ್ಯತೆ’ ಎಂಬ ವಿಷಯದ ಮೇಲೆ ಸಿಎಂಆರ್‌ಐಟಿ ವಿದ್ಯಾರ್ಥಿಗಳ ತಂಡವು ಅಂತರ್ಜಲವನ್ನು ಪತ್ತೆ ಹಚ್ಚಲು ಸ್ಮಾರ್ಟ್‌ ಅಪ್ಲಿಕೇಶನ್‌ ಅಭಿವೃದ್ಧಿ ಪಡಿಸಿದ್ದಕ್ಕಾಗಿ ದ್ವಿತೀಯ ಬಹುಮಾನ ಪಡೆಯಿತು. ಈ ಸಾಧನವು ಆಳ ಮತ್ತು ಬಂಡೆಯ ಪದರಗಳ ನಡುವೆ ಇರುವ ಅಂತರ್ಜಲವನ್ನು ಸುಲಭವಾಗಿ ಪತ್ತೆ ಹಚ್ಚುತ್ತಿದೆ. ಇದರಿಂದ ರೈತರಿಗೆ ಹೆಚ್ಚು ಪ್ರಯೋಜನವಾಗಲಿದೆ. ಜೊತೆಗೆ ಗ್ರಾಮ ಮತ್ತು ತಾಲೂಕು ಮಟ್ಟದಲ್ಲಿ ಉಪಗ್ರಹ ದತ್ತಾಂಶವನ್ನು ಮ್ಯಾಪಿಂಗ್ ಮಾಡುವುದರಿಂದ ಗ್ರಾಮ ಪಂಚಾಯಿತಿ ಮಟ್ಟದ ನೀರಿನ ಸಂರಕ್ಷಣೆ ಕಾರ್ಯವನ್ನು ಬಲಗೊಳಿಸುತ್ತದೆ.

ಕಾಲೇಜಿನ ಕಂಪ್ಯೂಟರ್ ವಿಜ್ಞಾನ ಮತ್ತು ಎಂಜಿನಿಯರಿಂಗ್ 3 ಮತ್ತು 4ನೇ ವರ್ಷದ ವಿದ್ಯಾರ್ಥಿಗಳಾದ ಯಶವಂತ್‌ ಜೈನ್, ಪ್ರತೀಕ್, ಮುಖೇಶ್ ಭರೂಕ, ವೈಷ್ಣವಿ ಪಾಟೀಲ, ಅರ್ಪಣ್, ಅಭಿಷೇಕ್ ಮತ್ತು ಪಿ. ಮೀರಾ ಕೃಷ್ಣ ಅವರನ್ನೊಳಗೊಂಡ ತಂಡ ಈ ಸಾಧನವನ್ನು ವಿನ್ಯಾಸಗೊಳಿಸಿದೆ.

ವಿದ್ಯಾರ್ಥಿಗಳ ಈ ಪ್ರಯತ್ನವನ್ನು ಕಾಲೇಜಿನ ಪ್ರಾಚಾರ್ಯ ಡಾ. ಸಂಜಯ್ ಜೈನ್ ಹಾಗೂ ಅಧ್ಯಾಪಕರು ಶ್ಲಾಫಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT