ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳು, ಕಾರ್ಮಿಕರ ಹಕ್ಕು ಹಾಗೂ ರಕ್ಷಣೆಯನ್ನು ಮೊಟಕುಗೊಳಿಸಲಿದೆ ಎಂದು ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್( ಎಐಯುಟಿಯುಸಿ) ಹೇಳಿದೆ.

ವಜಾ ಮತ್ತು ಮುಚ್ಚುವಿಕೆ ಸುಲಭಗೊಳಿಸುವ ಕೈಗಾರಿಕಾ ಸಂಬಂಧಗಳ ಸಂಹಿತೆ, ಸಾಮಾಜಿಕ ಭದ್ರತಾ ಸಂಹಿತೆ, ವೇತನ ಸಂಹಿತೆ, ವ್ಯವಹಾರ ಸುಲಭಗೊಳಿಸುವ ಸಂಹಿತೆಗಳು, ಕಾರ್ಮಿಕರ ವಿರೋಧಿಯಾಗಿವೆ. ಉದ್ಯೋಗ ಭದ್ರತೆಯನ್ನು ಕಡಿಮೆ ಮಾಡಿ ಕಾರ್ಪೊರೇಟ್ ವಲಯಕ್ಕೆ ಅನುಕೂಲ ಮಾಡಿಕೊಡುವಂತಿದೆ ಎಂದು ಸೆಂಟರ್ನ ರಾಜ್ಯ ಅಧ್ಯಕ್ಷ ಕೆ.ಸೋಮಶೇಖರ್, ರಾಜ್ಯ ಕಾರ್ಯದರ್ಶಿ ಕೆ.ಸೋಮಶೇಖರ್ ಯಾದಗಿರಿ ಅವರು ಆರೋಪಿಸಿದ್ದಾರೆ

ಕಾರ್ಖಾನೆಗಳ ಮುಚ್ಚುವಿಕೆಯನ್ನು ಈ ಸಂಹಿತೆಗಳು ಸುಲಭಗೊಳಿಸಲಿವೆ. ಕೈಗಾರಿಕಾ ಸಂಬಂಧಗಳ ಸಂಹಿತೆ ಅಡಿಯಲ್ಲಿ ಕಾರ್ಮಿಕರ ಮಿತಿಯನ್ನು ತೆಗೆದು ಹಾಕಲಾಗಿದೆ. ಇದರಿಂದ ಹೆಚ್ಚಿನ ಕಾರ್ಮಿಕರನ್ನು ಸುಲಭವಾಗಿ ತೆಗೆದು ಹಾಕಲು ಸಹಕಾರಿಯಾಗಲಿದೆ. ಕಾರ್ಮಿಕ ವಿರೋಧಿ ನಡೆ ಖಂಡನೀಯ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.