ಬೆಂಗಳೂರು: ರದ್ದುಗೊಂಡ ವಿಮಾನ ಟಿಕೆಟ್ನ ಸಂಪೂರ್ಣ ದರವನ್ನು ಮರುಪಾವತಿ ಮಾಡಿಲ್ಲ ಎಂದು ಇಂಡಿಗೊ ವಿರುದ್ಧ ಕೆಲ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಿಸೆಂಬರ್ 15ರವೆರಗೆ ಟಿಕೆಟ್ ರದ್ದತಿಗೆ ಪೂರ್ಣ ಮರುಪಾವತಿ ಮಾಡುವುದಾಗಿ ಇಂಡಿಗೊ ಹೇಳಿತ್ತು. ಅದಾಗ್ಯೂ ಟಿಕೆಟ್ ರದ್ದತಿಯ ವೇಳೆ ₹400ರಿಂದ ₹3 ಸಾವಿರದವರೆಗೆ ಕಡಿತಗೊಂಡಿರುವುದಾಗಿ ಬೆಂಗಳೂರಿನ ಕೆಲ ಪ್ರಯಾಣಿಕರು ಆರೋಪ ಮಾಡಿದ್ದಾರೆ.

ಟಿಕೆಟ್ ದರವನ್ನು ಸಂಪೂರ್ಣವಾಗಿ ಮರುಪಾವತಿ ಮಾಡುವುದಾಗಿ ವಿಮಾನಯಾನ ಸಂಸ್ಥೆ ಹೇಳಿಕೊಂಡಿದೆ. ಆದರೆ ಟಿಕೆಟ್ ರದ್ಧತಿಗೆ ವೆಬ್ಸೈಟ್ನಲ್ಲಿ ಶುಲ್ಕ ವಿಧಿಸಲಾಗುತ್ತಿದೆ. ಅಲ್ಲದೇ ಅನುಕೂಲ ಸೇವಾ ಶುಲ್ಕವನ್ನು ವಿಧಿಸಲಾಗುತ್ತಿದೆ ಎಂದು ಪ್ರಯಾಣಿಕರು ಹೇಳಿದ್ದಾರೆ.

ಮೇಕ್ಮೈಟ್ರಿಪ್, ಕ್ಲಿಯರ್ಟ್ರಿಪ್ ಮತ್ತು ಇಕ್ಸಿಗೋದಂತಹ ಥರ್ಡ್ ಪಾರ್ಟಿ ವೆಬ್ಸೈಟ್ಗಳು ಸಹ ರದ್ದತಿ ಶುಲ್ಕ ಮತ್ತು ಅನುಕೂಲ ಸೇವಾ ಶುಲ್ಕವನ್ನು ವಿಧಿಸುವುದನ್ನು ಮುಂದುವರಿಸಿವೆ ಎಂದೂ ತಿಳಿಸಿದ್ದಾರೆ.

‘ಟಿಕೆಟ್ ರದ್ಧತಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಹೇಳಿದ್ದರೂ ಈ ವೆಬ್ಸೈಟ್ಗಳಲ್ಲಿ ಗುಪ್ತ ಶುಲ್ಕಗಳನ್ನು ವಿಧಿಸಲಾಗುತ್ತಿದೆ. ಈ ಶುಲ್ಕಗಳಿಂದಾಗಿ ಮೂರು ಟಿಕೆಟ್ಗಳಿಗೆ ಸುಮಾರು ₹3 ಸಾವಿರ ಕಳೆದುಕೊಂಡಿದ್ದೇನೆ’ ಎಂದು ಐಟಿ ಉದ್ಯೋಗಿ ಆದಿತ್ಯ ಹೇಳಿದ್ದಾರೆ.

ಮತ್ತೊಬ್ಬ ಪ್ರಯಾಣಿಕರಾದ ಕವಿತಾ ಅವರಿಗೆ ಮರುಪಾವತಿ ಮಾಡುವ ವೇಳೆ ₹435 ಕಡಿತಗೊಳಿಸಲಾಗಿದೆ.

‘ಡಿ. 8ರಂದು ಬೆಂಗಳೂರಿನಿಂದ ಭುವನೇಶ್ವರಕ್ಕೆ ₹8,147 ಕೊಟ್ಟು ಟಿಕೆಟ್ ಬುಕ್ ಮಾಡಿದ್ದೆ.ವಿಮಾನ ಹಾರಾಟ ರದ್ದಾಗಿದ್ದರಿಂದ ಟಿಕೆಟ್ ದರ ಮರುಪಾವತಿ ಆಗಲಿದೆ ಎಂಬ ಸಂದೇಶ ಬಂದಿತ್ತು. ಆದರೆ, ಮರು ಪಾವತಿಯಾಗಿದ್ದು ಕೇವಲ ₹7,712 ಮಾತ್ರ. ಉಳಿದ ಮೊತ್ತ ಏನಾಯಿತು?... ಇದಾದ ಬಳಿಕ ಕಾಲ್ಸೆಂಟರ್ಗೆ ಕರೆ ಮಾಡಿ ಕೇಳಿದಾಗ, ನಿಮ್ಮ ವಿಮಾನ ರದ್ದಾಗಿಲ್ಲ ಎಂದು ತಿಳಿಸಿದರು. ನಿಜಕ್ಕೂ ಇಲ್ಲೇನೋ ಗಂಭೀರ ಸಮಸ್ಯೆ ಇದೆ’ ಎಂದು ಕವಿತಾ ಹೇಳಿದ್ದಾರೆ.

ಈ ನಡುವೆ, ಕೆಲವು ಪ್ರಯಾಣಿಕರು ಟಿಕೆಟ್ ದರ ಪೂರ್ಣ ಮರುಪಾವತಿಯಾಗಿರುವುದಾಗಿ ತಿಳಿಸಿದ್ದಾರೆ.

ವಿಮಾನಯಾನ ಶುಲ್ಕವನ್ನು ಸಂಪೂರ್ಣವಾಗಿ ಮರುಪಾವತಿಸಲಾಗುತ್ತದೆಯಾದರೂ, ಅನುಕೂಲ ಸೇವಾ ಶುಲ್ಕವನ್ನು ಕಡಿತಗೊಳಿಸಲಾಗುತ್ತದೆ ಎಂದು ಇಂಡಿಗೊ ಮೂಲವೊಂದು ಸ್ಪಷ್ಟಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.