ಸೋಮವಾರ, ಜನವರಿ 27, 2020
21 °C

ಪರಿಷ್ಕೃತ ಪಿಂಚಣಿಗೆ ವಿವಿ ನಿವೃತ್ತ ಶಿಕ್ಷಕರ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಈಗಾಗಲೇ ನಿವೃತ್ತಿ ಹೊಂದಿ ರುವ ಶಿಕ್ಷಕರ ನಿವೃತ್ತಿ ವೇತನ, ಕುಟುಂಬ ನಿವೃತ್ತಿ ವೇತನ ಸೌಲಭ್ಯಗಳನ್ನು ಯುಜಿಸಿ ಪರಿಷ್ಕೃತ ವೇತನ ಅಳವಡಿಸಿಕೊಂಡಿರುವ ದಿನಾಂಕದಿಂದಲೇ ಅನ್ವಯವಾಗುವಂತೆ ಪರಿಷ್ಕರಿಸಿ ಆದೇಶ ಹೊರಡಿಸಬೇಕು ಎಂದು ವಿಶ್ವವಿದ್ಯಾ ಲಯಗಳ ನಿವೃತ್ತ ಶಿಕ್ಷಕರ ವೇದಿಕೆ ವಿನಂತಿಸಿದೆ.

2015ರಲ್ಲಿ ಸುಪ್ರೀಂ ಕೋರ್ಟ್‌ ರಾಜಸ್ಥಾನದ ಇಂಥದೇಪ್ರಕರಣದಲ್ಲಿ ನಿವೃತ್ತ ಶಿಕ್ಷಕರ ವೇತನ ಪರಿಷ್ಕರಣೆಯನ್ನು ಆರ್ಥಿಕ ಹೊರೆ ಅಥವಾ ಇನ್ನಾವುದೇ ಕಾರಣ ಗಳ ಆಧಾರದ ಮೇಲೆ ರಿಟ್‌ ಅರ್ಜಿ ಮೇಲ್ಮನವಿ ಹಾಕದೆ ಜಾರಿಗೊಳಿ ಸಬೇಕೆಂದು ತೀರ್ಪು ನೀಡಿದೆ. ರಾಜ್ಯ ಸರ್ಕಾರ ತೀರ್ಪನ್ನು ಗೌರವಿಸಿ ಪರಿಷ್ಕೃತ ಪಿಂಚಣಿ, ಡಿಸಿಆರ್‌ಜಿ ಮತ್ತು ಕಮ್ಯುಟೇಷನ್‌ ಆಫ್‌ ಪೆನ್ಸನ್‌ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿದೆ.

ವಿಶ್ವವಿದ್ಯಾಲಯ ಶಿಕ್ಷಕರಿಗೆ ನಿವೃತ್ತಿ ನಿಕಟಪೂರ್ವದಲ್ಲಿ ಪಡೆಯುತ್ತಿದ್ದ ಯುಜಿಸಿ ವೇತನ ಶ್ರೇಣಿಯ ಮೂಲ ವೇತನಕ್ಕೆ ಪೂರಕವಾಗಿ ನಿವೃತ್ತಿ ವೇತನ ಸೌಲಭ್ಯಗಳನ್ನು ನೀಡಬೇಕು. ಕೇಂದ್ರ ಸರ್ಕಾರದ ವೇತನ ಆಯೋಗಗಳ ಶಿಫಾರಸುಗಳಿಗೆ ಅನುಗುಣವಾಗಿ ಕಾಲ ಕಾಲಕ್ಕೆ ಪರಿಷ್ಕರಿಸಲಾಗುವ ವೇತನಕ್ಕೆ ಪೂರಕವಾದ ನಿವೃತ್ತಿ ವೇತನ ಸೌಲಭ್ಯಗಳನ್ನು ನೀಡುವುದು ನ್ಯಾಯಸಮ್ಮತವೆಂದು ಹೈಕೋರ್ಟ್‌ ಕಳೆದ ಮಾರ್ಚ್‌ 22ರಂದು ಹೇಳಿದೆ. ಪಿಂಚಣಿ ಬಾಕಿ ಮೊತ್ತವನ್ನು ನಾಲ್ಕು ಸಮಾನ ಕಂತುಗಳಲ್ಲಿ ನೀಡಲು ಸಹ ಆದೇಶಿಸಿತ್ತು. ರಾಜ್ಯ ಸರ್ಕಾರ ಶಿಕ್ಷಕರ ನ್ಯಾಯಸಮ್ಮತ ಬೇಡಿಕೆಗಳಿಗೆ ವಿರುದ್ಧವಾಗಿ ಮತ್ತೊಮ್ಮೆ ರಿಟ್‌ ಅರ್ಜಿ ಸಲ್ಲಿಸಿರುವುದು ತಪ್ಪು ಎಂದು ವೇದಿಕೆ ಅಭಿಪ್ರಾಯಪಟ್ಟಿದೆ.

 

ಪ್ರತಿಕ್ರಿಯಿಸಿ (+)