ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷುದ್ರಗ್ರಹಕ್ಕೆ ಡಿಕ್ಕಿ ತಂತ್ರಜ್ಞಾನ: ಯೋಜನೆಯಲ್ಲಿ ಬೆಂಗಳೂರಿನ ಕ್ರಿಶ್ಪಿನ್‌ ಕಾ

Last Updated 27 ಸೆಪ್ಟೆಂಬರ್ 2022, 22:10 IST
ಅಕ್ಷರ ಗಾತ್ರ

ಲಾರೆಲ್‌ (ಅಮೆರಿಕ): ಅನ್ಯಗ್ರಹಗಳಿಂದ ಭೂಮಿಗೆ ಎದುರಾಗುವ ಹಾನಿಯನ್ನು ತಪ್ಪಿಸುವ ಈ ಮಹತ್ವದ ಯೋಜನೆಯಲ್ಲಿ ಬೆಂಗಳೂರಿನ ಭಾರತೀಯ ಖಭೌತ ವಿಜ್ಞಾನ ಸಂಸ್ಥೆಯ (ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಆಸ್ಟ್ರೊಫಿಸಿಕ್ಸ್‌) ವಿಜ್ಞಾನಿ ಕ್ರಿಶ್ಪಿನ್‌ ಕಾರ್ತಿಕ್‌ ಸಹ ಇದ್ದರು.

‘66 ದಶಲಕ್ಷ ವರ್ಷಗಳ ಹಿಂದೆ ಭೂಮಿಗೆ ಅಪ್ಪಳಿಸಿದ ಕ್ಷುದ್ರಗಹದಿಂದಾಗಿಯೇ ಡೈನೋಸಾರ್‌ಗಳ ಸಂತತಿ ಅಳಿಯಿತು ಎಂದು ಊಹಿಸಲಾಗಿದೆ. ಭವಿಷ್ಯದಲ್ಲಿ ಇಂತಹ ಗಂಡಾಂತರ ಎದುರಾಗದಿರಲಿ ಎಂಬ ಕಾರಣಕ್ಕೇ ಈ ಪರೀಕ್ಷೆ ನಡೆಸಲಾಗಿದೆ’ ಎಂದು ಕಾರ್ತಿಕ್‌ ‘ಪಿಟಿಐ’ ಸುದ್ದಿ ಸಂಸ್ಥೆಗೆ ತಿಳಿಸಿದರು.

‘ನಮ್ಮ ಸುತ್ತಲೂ ಹಲವಾರು ಕ್ಷುದ್ರಗ್ರಹಗಳು ಮತ್ತು ಧೂಮಕೇತುಗಳಿವೆ. ಅವುಗಳೆಲ್ಲ ಸೂರ್ಯನ ಸುತ್ತ ಸುತ್ತುತ್ತಿವೆ. ಅವುಗಳಲ್ಲಿ ಕೆಲವೇ ಕೆಲವು ಭೂಮಿಗೆ ಅಪ್ಪಳಿಸಿ ಅಪಾಯ ತಂದೊಡ್ಡಬಹುದು. ಭವಿಷ್ಯದಲ್ಲಿ ಅಂತಹ
ಕ್ಷುದ್ರಗಹಗಳಿಂದ ಭೂಮಿಗೆ ಯಾವುದೇ ಅಪಾಯ ಎದುರಾಗಬಾರದು ಎಂಬ ಕಾರಣಕ್ಕೆ ಈ ಪರೀಕ್ಷೆ ನಡೆದಿದೆ’ ಎಂದರು.

‘ಭೂಮಿಯಿಂದ ಬಹುದೂರದಲ್ಲಿರುವ ಕ್ಷುದ್ರಗ್ರಹವೊಂದರ ಪಥವನ್ನು ಸ್ವಲ್ಪ ಬದಲಿಸಿದರೂ ಅದು ಭೂಮಿಗೆ ಅಪ್ಪಳಿಸುವ ಸಾಧ್ಯತೆ ಇರುವುದಿಲ್ಲ. ಹೀಗಾಗಿ ಇಂತಹ ಪ್ರಯೋಗಗಳು ಅಗತ್ಯ’ ಎಂದು ನಾಸಾದ ಜೆಟ್‌ ಪ್ರೊಪುಲ್ಷನ್‌ ಲ್ಯಾಬರೋಟರಿಯ ವಿಜ್ಞಾನಿ ಗೌತಮ್‌ ಚಟ್ಟೋಪಾಧ್ಯಾಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT